ಕುದ್ಮಲ್​ ರಂಗಮಂದಿರ ನವೀಕರಣಕ್ಕೆ ಕ್ರಮ

koraga meeting
ತಾಪಂ ಸಭಾಂಗಣದಲ್ಲಿ ಉಡುಪಿ ವಿಧಾನಸಭಾ ವ್ಯಾಪ್ತಿಯ ಕೊರಗ ಸಮುದಾಯದ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಶಾಸಕ ಯಶ್ಪಾಲ್​ ಸುವರ್ಣ ಮಾತನಾಡಿದರು.
Published on: 

ಉಡುಪಿ: ಅಂಬಾಗಿಲು ಪುತ್ತೂರಿನಲ್ಲಿ ನಿರ್ಮಾಣಗೊಂಡಿರುವ ಕುದ್ಮಲ್​ ರಂಗರಾವ್​ ಕೊರಗರ ರಂಗಮಂದಿರ ಬಳಕೆಗೆ ಯೋಗ್ಯವಾಗಿಲ್ಲ. ಹೀಗಾಗಿ ನಗರಸಭೆ, ತಾಪಂ, ಜಿಪಂನಲ್ಲಿ ಲಭ್ಯವಾಗುವ 50 ಲಕ್ಷ ರೂ. ಅನುದಾನ ಹಾಗೂ ಕಂಪೆನಿಗಳಿಂದ 25 ಲಕ್ಷ ರೂ. ಸಿಎಸ್​ಆರ್​ ಂಡ್​ ತೆಗೆದುಕೊಂಡು ಒಟ್ಟು 75 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗುವುದು ಎಂದು ಶಾಸಕ ಯಶ್ಪಾಲ್​ ಸುವರ್ಣ ತಿಳಿಸಿದರು.

ತಾಪಂ ಸಭಾಂಗಣದಲ್ಲಿ ಉಡುಪಿ ವಿಧಾನಸಭಾ ವ್ಯಾಪ್ತಿಯ ಕೊರಗ ಸಮುದಾಯದ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಿಟ್ಟೂರಿನಲ್ಲಿ ಕೊರಗರ ಕಾಲನಿಯಲ್ಲಿ ಖಾಸಗಿ ಪ್ಲಾಟ್​ನ ತ್ಯಾಜ್ಯ ನೀರು ಬಾವಿಗಳಿಗೆ ಸೇರುತ್ತಿದ್ದು, 90 ಕುಟುಂಬಗಳಿಗೆ ತೊಂದರೆಯಾಗುತ್ತಿದೆ. ಪ್ರಸ್ತುತ ನಗರಸಭೆಯಿಂದ ನಳ್ಳಿ ನೀರು ಸಂಪರ್ಕಕೊಡಲಾಗಿದೆ. ಜೊತೆಗೆ ್ಲಾಟ್​ ನಿರ್ವಹಣಾ ಸಮಿತಿ ಮುಖ್ಯಸ್ಥರನ್ನು ಕರೆದು 15 ಮೀಟರ್​ ದೂರದಲ್ಲಿ ಫಿಟ್​ ನಿರ್ಮಿಸುವಂತೆ ನಗರಸಭೆಯಿಂದ ಸೂಚನೆ ನೀಡಲಾಗುವುದು ಎಂದರು.

ಮುಖಂಡ ಗಣೇಶ್​ ಕುಂಭಾಶಿ ಮಾತನಾಡಿ, ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಕೊರಗ ಸಮುದಾಯಕ್ಕೆ ಉದ್ಯೋಗ ದೊರಕಿಸಿಕೊಡಬೇಕು. ಸ್ವ&ಉದ್ಯೋಗ ತರಬೇತಿಯಿಂದ ಯಾವುದೇ ಪ್ರಯೋಜವಾಗುತ್ತಿಲ್ಲ ಎಂದು ಹೇಳಿದರು.

ಉದ್ಯೋಗ ದೊರಕಿಸಲು ಕ್ರಮ

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಯಶ್ಪಾಲ್​, ಕೊರಗ ಸಮುದಾಯದ ನಿರುದ್ಯೋಗಿ ಯುವಕ&ಯುವತಿ ಅಂಕಿ&ಅಂಶಗಳನ್ನು ಸಂಗ್ರಹಿಸಿ, ಅವರ ವಿದ್ಯಾರ್ಹತೆಗೆ ಅನುಗುಣವಾಗಿ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸಲು ಐಟಿಡಿಪಿ ಇಲಾಖೆ ವತಿಯಿಂದ ವಿಶೇಷ ಉದ್ಯೋಗ ಮೇಳ ಆಯೋಜಿಸಲಾಗುವುದು ಎಂದು ಹೇಳಿದರು.

ಮುಖಂಡ ಪುತ್ರನ್​ ಹೆಬ್ರಿ ಮಾತನಾಡಿ, ಬ್ರಹ್ಮಾವರದಲ್ಲಿ 25 ಕುಟುಂಬಗಳು ಹಕ್ಕುಪತ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ 2023ರಲ್ಲಿ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ತಿಂಗಳಿಗೆ 1 ಮನೆ ಸಮಸ್ಯೆ ಪರಿಹರಿಸಿದ್ದರೂ ಸಮಸ್ಯೆ ಬಗೆಹರಿಯುತ್ತಿತ್ತು ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಬ್ರಹ್ಮಾವರ ತಹಶೀಲ್ದಾರ್​ ಎ.ಎನ್​. ಭಟ್​, 15 ದಿನಕ್ಕೊಮ್ಮೆ ಕೊರಗರ ಕುಂದು ಕೊರತೆ ಸಭೆ ನಡೆಸಲಾಗುವುದು. ತಿಂಗಳಿಗೊಂದು ಮನೆಗೆ ಭೇಟಿ ನೀಡಿ ಸ್ಥಳದಲ್ಲೇ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು. ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿದ್ದರೇ ಅದೇ ಜಾಗವನ್ನು ಖಾತೆ ಮಾಡಿಸಲು ಅವಕಾಶ ಇದೆ ಎಂದರು.

ಉಡುಪಿ ತಾಪಂ ಇಒ ವಿಜಯಾ, ಬ್ರಹ್ಮಾವರ ತಾಪಂ ಇಒ ರಾಮದಾಸ್​, ಐಟಿಡಿಪಿ ಜಿಲ್ಲಾ ಉಪನಿರ್ದೇಶಕ ನಾರಾಯಣ ಸ್ವಾಮಿ, ಪೌರಾಯುಕ್ತ ಮಹಾಂತೇಶ್​ ಉಪಸ್ಥಿತರಿದ್ದರು.