ಅಸುರ ಶಕ್ತಿ ವಿನಾಶಕ್ಕೆ ಜಾಗೃತವಾಗಲಿ ದೈವೀ ಶಕ್ತಿ

 ಸಾಂಸ್ಕೃತಿಕ ಕಾರ್ಯಕ್ರಮವನ್ನು ಡಾ.ಮೋಹನ ಆಳ್ವ ಉದ್ಘಾಟಿಸಿದರು. ಮೂಡುಬಿದಿರೆ ಜೈನ ಮಠದ ಭಟ್ಟಾರಕ ಶ್ರೀ, ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ, ಪ್ರತಾಪಸಿಂಹ ನಾಯಕ್, ಗಿರೀಶ್ ಶೆಟ್ಟಿ, ಮುನಿಯಾಲು ಉದಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮವನ್ನು ಡಾ.ಮೋಹನ ಆಳ್ವ ಉದ್ಘಾಟಿಸಿದರು. ಮೂಡುಬಿದಿರೆ ಜೈನ ಮಠದ ಭಟ್ಟಾರಕ ಶ್ರೀ, ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ, ಪ್ರತಾಪಸಿಂಹ ನಾಯಕ್, ಗಿರೀಶ್ ಶೆಟ್ಟಿ, ಮುನಿಯಾಲು ಉದಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
Published on
ಬೆಳ್ತಂಗಡಿ: ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಧರ್ಮ ಜಾಗೃತಿಯ ಸಂದೇಶ ಸಾರಿದ್ದಾನೆ. ಅಸುರ ಶಕ್ತಿಯ ವಿನಾಶಕ್ಕೆ ದೈವೀ ಶಕ್ತಿಯ ಜಾಗೃತಿಯಾಗಬೇಕು. ಭಗವದ್ಗೀತೆ ಮತ್ತು ಜೈನ ಸಿದ್ಧಾಂತದ ತತ್ವಾರ್ಥ ಬೇರೆಯಲ್ಲ. ಪದ್ಮಾವತಿ ಮತ್ತು ಲಲಿತಾ ಸಹಸ್ರನಾಮದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಅಸುರೀ ಸಂಪತ್ತಿನ ಅಜ್ಞಾನ ದೂರ ಮಾಡುವ ಶಕ್ತಿ ಜನಾರ್ದನ ಸ್ವಾಮಿಗಿದೆ. ಜೀವಾತ್ಮ ಸರಿಯಾದರೆ ಮಾತ್ರ ಪರಮಾತ್ಮನನ್ನು ಕಾಣಲು ಸಾಧ್ಯ ಎಂದು ಮೂಡುಬಿದಿರೆ ಜೈನ ಮಠದ ಡಾ.ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಜನ್ಮ ತಾಪತ್ರಯ ಮತ್ತು ಪಾಪವನ್ನು ದೂರಮಾಡುವವನೇ ಜನಾರ್ದನ. ಬ್ರಹ್ಮಾಂಡದಲ್ಲಿ ಎಲ್ಲ ಶಕ್ತಿಗಳನ್ನು ಕ್ರೋಡೀಕರಿಸಿ ಅರಿಷಡ್ವರ್ಗಳಿಂದ ದೂರವಾಗಿ ದೈವೀ ಸಂಪತ್ತು ಗಳಿಸುವ ಮೂಲಕ ಜಗತ್ತಿನ ಎಲ್ಲ ದೋಷಗಳು ದೂರವಾಗಿ ಎಲ್ಲೆಡೆ ಸುಖ, ಶಾಂತಿ, ನೆಮ್ಮದಿ ನೆಲೆಯಾಗಲಿ. ಸ್ವಧರ್ಮ ನಿಷ್ಠೆ ಪರಧರ್ಮ ಸಹಿಷ್ಣುತೆ ನಮ್ಮ ಧ್ಯೇಯವಾಗಬೇಕು ಎಂದರು.
ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಮೋಹನ ಆಳ್ವ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದರು. ಸುಬ್ರಹ್ಮಣ್ಯ ಭಟ್, ಹರೀಶ ಆಚಾರ್ಯ, ಕೇಶವ ಹಾಡಿರುವ ಜನಾರ್ದನ ಸ್ವಾಮಿ ಭಕ್ತಿಗೀತೆಗಳನ್ನು ಬಿಡುಗಡೆಗೊಳಿಸಲಾಯಿತು. ದೇವಳದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯ, ಪ್ರಮುಖರಾದ ಪ್ರತಾಪಸಿಂಹ ನಾಯಕ್, ಗಿರೀಶ್ ಶೆಟ್ಟಿ, ಮುನಿಯಾಲು ಉದಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಉಪನ್ಯಾಸಕ ಡಾ.ಮಹೇಶ್ ಕುಮಾರ್ ಶೆಟ್ಟಿ ನಿರೂಪಿಸಿದರು. ಕಾರ್ಯದರ್ಶಿ ರವೀಂದ್ರ ಶೆಟ್ಟಿ ಸುರಭಿ ವಂದಿಸಿದರು. ಪುತ್ತೂರು ನರಸಿಂಹ ನಾಯಕ್ ಅವರಿಂದ ದಾಸಾಮೃತ ಭಕ್ತಿಗಾಯನ , ಶ್ರೇಯಾ ಕೊಳತ್ತಾಯ ತಂಡದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ವಿದುಷಿ ಮಾನಸಿ ಸುಧೀರ್ ಕೊಡವೂರು ಮತ್ತು ವೃಂದದಿಂದ ನರಸಿಂಹ ನೃತ್ಯ ರೂಪಕ ಪ್ರದರ್ಶಿಸಲ್ಪಟ್ಟಿತು.

ಸಂಸ್ಥೆಗಳು, ದೇವಾಲಯ, ವಿದ್ಯಾಲಯಗಳ ಮೂಲಕ ಮಕ್ಕಳಿಗೆ ಪಠ್ಯದೊಂದಿಗೆ ಸಾಂಸ್ಕೃತಿಕ ಕಲೆ ಕಲಿಸಿ ಕಲಾವಿದರಾಗಿ ಬೆಳೆಸಬೇಕು. ಶಾಸ್ತ್ರೀಯ, ಜಾನಪದ ಕಲೆಗಳ ಮೂಲಕ ಧಾರ್ಮಿಕ ವಿಚಾರ ಗಟ್ಟಿ ಮಾಡಿ ಸೌಂದರ್ಯಪ್ರಜ್ಞೆ ಬೆಳೆಸಬೇಕು. ಮನರಂಜನೆಯ ಹೆಸರಿನಲ್ಲಿ ಸಂಸ್ಕೃತಿಗೆ ಧಕ್ಕೆ ತರಬಾರದು. ಧರ್ಮ ಜಾಗೃತಿಯೇ ನಿಜವಾದ ಬ್ರಹ್ಮಕಲಶ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net