ಧೈರ್ಯವಂತ ಯುವಕರ ಸಾಹಸ ಸ್ಫೂರ್ತಿದಾಯಕ

ಉಡುಪಿ ಪೆರಂಪಳ್ಳಿಯ ಬೆಂಕಿ ಅವಡದಲ್ಲಿ ಮನೆಯವರ ಜೀವರಕ್ಷಣೆ ಮಾಡಿದ ಮನೋಜ್​, ಶರತ್​ ಅವರನ್ನು ಸನ್ಮಾನಿಸಲಾಯಿತು. ರಾಘವೇಂದ್ರ ಪ್ರಭು ಕರ್ವಾಲು, ಮನೋಜ್​ ಕಡಬ, ಸೆಲ್ವರಾಜ್​, ಪ್ರೀತಿ ಕಲ್ಯಾಣಪುರ, ಶೈನಿ ಸತ್ಯಭಾಮಾ, ಕೃಷ್ಣರಾಜ ತಂತ್ರಿ, ಶೆರ್ಲಿ ಮನೋಜ್​ ಇದ್ದರು.
ಉಡುಪಿ ಪೆರಂಪಳ್ಳಿಯ ಬೆಂಕಿ ಅವಡದಲ್ಲಿ ಮನೆಯವರ ಜೀವರಕ್ಷಣೆ ಮಾಡಿದ ಮನೋಜ್​, ಶರತ್​ ಅವರನ್ನು ಸನ್ಮಾನಿಸಲಾಯಿತು. ರಾಘವೇಂದ್ರ ಪ್ರಭು ಕರ್ವಾಲು, ಮನೋಜ್​ ಕಡಬ, ಸೆಲ್ವರಾಜ್​, ಪ್ರೀತಿ ಕಲ್ಯಾಣಪುರ, ಶೈನಿ ಸತ್ಯಭಾಮಾ, ಕೃಷ್ಣರಾಜ ತಂತ್ರಿ, ಶೆರ್ಲಿ ಮನೋಜ್​ ಇದ್ದರು.
Published on

* ರಾಘವೇಂದ್ರ ಪ್ರಭು ಕರ್ವಾಲು ಶ್ಲಾಘನೆ

* ಜೀವರಕ್ಷಕರಿಗೆ ಎಸ್​ಸಿಐ ಉಡುಪಿ ಸನ್ಮಾನ

ಉಡುಪಿ: ಬೆಂಕಿ ಅವಡದಲ್ಲಿ ಬಹುದೊಡ್ಡ ಅನಾಹುತ ತಪ್ಪಿಸಿ ಮನೆಯವರ ಪ್ರಾಣರಕ್ಷಣೆ ಮಾಡಿದ ಧೈರ್ಯವಂತ ಯುವಕರಿಬ್ಬರ ಸಾಹಸ ಎಲ್ಲ ಯುವಕರಿಗೂ ಸ್ಫೂರ್ತಿಯಾಗಿದೆ. ಅನಾಹುತ ಸಂಭವಿಸಿದಾಗ ಅದನ್ನು ಮೊಬೈಲ್​ನಲ್ಲಿ ವೀಡಿಯೋ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಸಮಾಜದಲ್ಲಿ ತಮ್ಮ ಬದ್ಧತೆ ಅರಿತಿರುವ ಯುವಕರಿಬ್ಬರೂ ಮಾನವೀಯತೆ ಮೆರೆದಿರುವುದು ಅಭಿನಂದನಾರ್ಹ ಎಂದು ಜೇಸಿಐ ವಲಯ-15ರ ಪೂರ್ವ ವಲಯ ಉಪಾಧ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲು ಶ್ಲಾಘಿಸಿದರು.
ಸೀನಿಯರ್​ ಛೇಂಬರ್​ ಇಂದ್ರಾಳಿ (ಎಸ್​ಸಿಐ) ಉಡುಪಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೆರಂಪಳ್ಳಿಯಲ್ಲಿ ಮನೆಯೊಂದರ ಅಂಗಳದಲ್ಲಿ ನಿಲ್ಲಿಸಿಟ್ಟಿದ್ದ ಇಲೆಕ್ಟ್ರಿಕ್​ ಆಟೋದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದು, ಆ ಮನೆಯಲ್ಲಿದ್ದರವರ ಜೀವಕ್ಕೂ ಆಪತ್ತು ಉಂಟಾಗಿದ್ದಾಗ ಜೀವದ ಹಂಗು ತೊರೆದು ಮನೆಯವರ ಪ್ರಾಣ ಕಾಪಾಡಿದ ಮನೋಜ್​ ಮತ್ತು ಶರತ್​ ಅವರನ್ನು ಸನ್ಮಾನಿಸಿ ಮಾತನಾಡಿದರು.
ಸನ್ಮಾನ ಸ್ವೀಕರಿಸಿದ ಸಿವಿಲ್​ ಇಂಜಿನಿಯರ್​ ಮನೋಜ್​ ಮತ್ತು ಹಿಮವರ್ಣಂ ಏಶಿಯನ್​ ಪೈಂಟ್​ನ ಯುವ ಉದ್ಯಮಿ ಶರತ್​ ಮಾತನಾಡಿ, ಮನೆಯವರ ಬೊಬ್ಬೆ ಕೇಳಿದ್ದರಿಂದ ಅಲ್ಲಿಗೆ ಧಾವಿಸಿ ನಮ್ಮಿಂದಾದ ರಕ್ಷಣಾ ಕಾರ್ಯ ಮಾಡಿದ್ದೇವೆ ಎಂದು ತಿಳಿಸಿದರು.
ಎಸ್​ಸಿಐ ಉಡುಪಿ ಅಧ್ಯಕ್ಷ ಮನೋಜ್​ ಕಡಬ ಸ್ವಾಗತಿಸಿದರು. ಕಾರ್ಯದರ್ಶಿ ಸೆಲ್ವರಾಜ್​ ವಂದಿಸಿದರು. ಪದಾಧಿಕಾರಿಗಳಾದ ಪ್ರೀತಿ ಕಲ್ಯಾಣಪುರ, ಶೈನಿ ಸತ್ಯಭಾಮಾ, ಕೃಷ್ಣರಾಜ ತಂತ್ರಿ, ಶೆರ್ಲಿ ಮನೋಜ್​ ಮತ್ತು ಸದಸ್ಯರು ಉಪಸ್ಥಿತರಿದ್ದರು.

ಕಾರು-ಬೈಕ್​, ಮನೆಯವರ ರಕ್ಷಣೆ

ಕಳೆದ ಆ.23ರಂದು ಪೆರಂಪಳ್ಳಿಯಲ್ಲಿ ಇಲೆಕ್ಟ್ರಿಕ್​ ಆಟೋ ಬೆಂಕಿಯಿಂದ ಹೊತ್ತಿ ಉರಿದಿದ್ದಲ್ಲದೆ ಪಕ್ಕದಲ್ಲೇ ಇದ್ದ ಕಾರು, ಬೈಕ್​ಗೂ ವ್ಯಾಪಿಸಿತ್ತು. ಅದನ್ನು ಕಂಡು ಆತಂಕಕ್ಕೊಳಗಾದ ಮನೆಯವರು ತಮ್ಮ ಜೀವಕ್ಕೂ ಅಪಾಯವಾಗಲಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದರು. ಈ ವೇಳೆ ತನ್ನ ಸೈಟ್​ನಲ್ಲಿ ಕೆಲಸ ಮುಗಿಸಿ ಮನೆಯತ್ತ ತೆರಳುತ್ತಿದ್ದ ಇಂಜಿನಿಯರ್​ ಮನೋಜ್​, ಕೂಡಲೇ ಆ ಮನೆಯತ್ತ ಧಾವಿಸಿ ಕಾರು ಹಾಗೂ ಬೈಕ್​ಗೆ ಆವರಿಸಿದ್ದ ಬೆಂಕಿ ನಂದಿಸಿ ಅವುಗಳನ್ನು ಸುರಕ್ಷಿತವಾಗಿ ಹೊರಗಡೆ ತಂದರು. ಬೆಂಕಿ ಅವಡವನ್ನು ಕಂಡ ಉದ್ಯಮಿ ಶರತ್​ ಅವರೂ ಸಹ ಆಗಮಿಸಿ ಬೆಂಕಿ ನಂದಿಸುವ ಕಾರ್ಯಕ್ಕೆ ಕೈಜೋಡಿಸಿದರು. ಅವರಿಬ್ಬರೂ ಸಹ ತಮ್ಮ ಜೀವವನ್ನೂ ಲೆಕ್ಕಿಸದೆ ಆ ಮನೆಯವರ ಆಸ್ತಿ-ಪಾಸ್ತಿ ಹಾಗೂ ಕುಟುಂಬದವರ ಜೀವರಕ್ಷಣೆ ಮಾಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net