ಉಡುಪಿಯ ತೆಂಕನಿಡಿಯೂರು ಕಾಲೇಜ್ನಲ್ಲಿ ಆಯೋಜಿಸಿದ್ದ ಕರಾಟೆ ಪಂದ್ಯಾಟವನ್ನು ಹರಿಪ್ರಸಾದ್ ರೈ ಉದ್ಘಾಟಿಸಿದರು. ಪ್ರೊ. ನಿತ್ಯಾನಂದ್ ವಿ. ಗಾಂವ್ಕರ್, ಪ್ರಖ್ಯಾತ್ ಶೆಟ್ಟಿ, ಹಮೀದಾ ಬಾನು, ಡಾ.ರೋಶನ್ ಶೆಟ್ಟಿ, ಸಂತೋಷ್ ಸುವರ್ಣ, ಡಾ. ನಿಶಾಂತ್, ರೋಹಿತ್, ವಾಮನ್ ಪಾಲನ್, ರವಿಕುಮಾರ್ ಉದ್ಯಾವರ, ಮನೋಜಕುಮಾರ್ ಇತರರಿದ್ದರು.
Published on:
Copied
Follow Us
* ಉಡುಪಿ ಜಿಲ್ಲಾ ಆಥ್ಲೆಟಿಕ್ ಅಸೋಸಿಯೇಷನ್ನ ಅಧ್ಯಕ್ಷ ಹರಿಪ್ರಸಾದ್ ರೈ ಅನಿಸಿಕೆ
* ಮಂಗಳೂರು ವಿವಿ ಮಟ್ಟದ ಅಂತರ್ ಕಾಲೇಜ್ ಕರಾಟೆ ಪಂದ್ಯಾಟ
ಉಡುಪಿ: ಯಾವುದೇ ಕ್ರೀಡೆಯಾಗಿದ್ದರೂ ಸಹ ಸ್ಪರ್ಧಿಗಳು ಕ್ರೀಡಾ ಮನೋಭಾವದಿಂದ ಆಡಬೇಕು. ಸೋತವೆಂದು ಕುಗ್ಗದೆ, ಗೆದ್ದೆವೆಂದು ಬೀಗದೆ ಮಾನವೀಯ ಮೌಲ್ಯ ಅಳವಡಿಸಿಕೊಳ್ಳಬೇಕು. ಕರಾಟೆಯು ಆತ್ಮರಕ್ಷಣೆಯ ಕಲೆಯಾಗಿದ್ದು, ವಿದ್ಯಾರ್ಥಿಗಳೆಲ್ಲರೂ ಈ ಕೌಶಲವನ್ನು ಕರಗತ ಮಾಡಿಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ಆಥ್ಲೆಟಿಕ್ ಅಸೋಸಿಯೇಷನ್ನ ಅಧ್ಯಕ್ಷ ಹರಿಪ್ರಸಾದ್ ರೈ ಸಲಹೆ ನೀಡಿದರು.
ಉಡುಪಿಯ ತೆಂಕನಿಡಿಯೂರಿನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಒಳಾಂಗಣದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಜಿಲ್ಲಾ ಯುವಜನ ಕ್ರೀಡಾ ಮತ್ತು ಸಬಲೀಕರಣ ಇಲಾಖೆಯ ಜಂಟಿ ಆಶ್ರಯದಲ್ಲಿ ಶನಿವಾರ (ಸೆ.5) ಆಯೋಜಿಸಿದ್ದ ಮಂಗಳೂರು ವಿವಿ ಮಟ್ಟದ ಅಂತರ್ ಕಾಲೇಜ್ ಪುರುಷ ಹಾಗೂ ಮಹಿಳೆಯರ ಕರಾಟೆ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.
ಕಾಲೇಜ್ನ ಅಭಿವೃದ್ಧಿ ಸಮಿತಿಯ ಸದಸ್ಯ ಪ್ರಖ್ಯಾತ್ ಶೆಟ್ಟಿ ಮಾತನಾಡಿ, ಕ್ರೀಡೆಯು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಇಂಧನ ಇದ್ದಂತೆ ಎಂದರು. ಕಾಲೇಜ್ನ ಪ್ರಾಂಶುಪಾಲ ಪ್ರೊ. ನಿತ್ಯಾನಂದ್ ವಿ. ಗಾಂವ್ಕರ್ ಅಧ್ಯಕ್ಷತೆ ವಹಿಸಿದ್ದರು.
ಸಹಾಯಕ ಪ್ರಾಧ್ಯಾಪಕಿ ಹಮೀದಾ ಬಾನು, ಹಳೆಯ ವಿದ್ಯಾರ್ಥಿಗಳ ಸಂಘದ ಸಂತೋಷ್ ಸುವರ್ಣ, ರೆಫ್ರಿ ಬೋರ್ಡ್ ಹಿರಿಯ ಉಪಾಧ್ಯಕ್ಷ ಡಾ. ನಿಶಾಂತ್, ಉಡುಪಿ ಜಿಲ್ಲಾ ಟೀಚರ್ಸ್ ಕರಾಟೆ ಅಸೋಸಿಯೇಷನ್ನ ಅಧ್ಯಕ್ಷ ರೋಹಿತ್, ಕಾರ್ಯದರ್ಶಿ ವಾಮನ್ ಪಾಲನ್, ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ನ ಅಧ್ಯಕ್ಷ ರವಿಕುಮಾರ್ ಉದ್ಯಾವರ, ಮನೋಜಕುಮಾರ್ ಇತರರು ಉಪಸ್ಥಿತರಿದ್ದರು.
ಹರಿಪ್ರಸಾದ್ ರೈ ಅವರ ಪ್ರಾಯೋಜಕತ್ವದಲ್ಲಿ ಫ್ರೆಂಡ್ಸ್ ಅಂಬಲಪಾಡಿ ತಂಡದ ಸದಸ್ಯರು ಹುಲಿವೇಷ ಕುಣಿತ ಪ್ರದರ್ಶನ ನೀಡಿದರು.
ಜಿಲ್ಲಾ ಯುವಜನ ಕ್ರೀಡಾ ಮತ್ತು ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಶೆಟ್ಟಿ ಸ್ವಾಗತಿಸಿದರು. ಕಾಲೇಜ್ನ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಾಲರಾಜ್ ವಂದಿಸಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಮಾರುತಿ ಕಾರ್ಯಕ್ರಮ ನಿರೂಪಿಸಿದರು.