

ಪಡುಬಿದ್ರಿ: ಸ್ನೇಹಿತರೊಂದಿಗೆ ಕಾಪುವಿಗೆ ಪ್ರವಾಸಕ್ಕೆ ಬಂದು ಹೋಂಸ್ಟೇಯಲ್ಲಿ ಮಲಗಿದ್ದ ಬೆಂಗಳೂರು ಹೊಸಕೋಟೆ ಕೊರಳೂರಿನ ಯೋಗೇಶ್ ಎಂಬುವರು ಮಹಡಿಯಿಂದ ಬಿದ್ದು ಭಾನುವಾರ ಮೃತಪಟ್ಟಿದ್ದಾರೆ.
ಸ್ನೇಹಿತರೊಂದಿಗೆ ಕಾಪುವಿಗೆ ಆಗಮಿಸಿದ್ದ ಅವರು, ಹೋಂಸ್ಟೇಯಲ್ಲಿ ತಂಗಿದ್ದರು. ಭಾನುವಾರ ಮುಂಜಾನೆ ಮೂತ್ರ ವಿಸರ್ಜನೆಗೆಂದು ಕತ್ತಲಲ್ಲಿ ತೆರಳಿದ್ದಾಗ ಮಹಡಿಯಿಂದ ಅಂಗಳಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.