

ಉಡುಪಿ: ಮಲ್ಪೆಯ ಬಾಬುತೋಟ ಧಕ್ಕೆಯ ಬಳಿ ಆಂಧ್ರಪ್ರದೇಶ ಮೂಲದ ವ್ಯಕ್ತಿಯೊಬ್ಬನನ್ನು ಭೀಕರವಾಗಿ ಕೊಲೆ ಮಾಡಿದ್ದ ಆರೋಪಿಯನ್ನು ಮಲ್ಪೆ ಪೊಲೀಸರು ಹುಬ್ಬಳ್ಳಿಯ ಹೊರವಲಯದಲ್ಲಿ ಬಂಧಿಸಿದ್ದಾರೆ.
ಹುಬ್ಬಳ್ಳಿ ಮೂಲದ ಆರೋಗ್ಯ ದಾಸ್ ಅಲಿಯಾಸ್ ಕಾಮಿ (55) ಬಂಧಿತ ಆರೋಪಿ.
ಘಟನೆಯ ವಿವರ: ಬಾಬುತೋಟ ಧಕ್ಕೆಯ ಬಳಿ ಆಂಧ್ರಪ್ರದೇಶ ಮೂಲದ ಗುಜರಿ ಹೆಕ್ಕುವ ಪರಮೇಶಿ ಅಲಿಯಾಸ್ ಪರಮ್ ವೇಲಿ (55) ಎಂಬಾತನನ್ನು ಸೆ. 28ರಂದು ರಾತ್ರಿ ಮಲಗಿದ್ದ ವೇಳೆ ಕುತ್ತಿಗೆಗೆ ಆಯುಧದಿಂದ ಇರಿದು ಕೊಲೆ ಮಾಡಲಾಗಿತ್ತು. ಈ ಚಿಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿತ್ತು. ವಿಶೇಷ ಪೊಲೀಸ್ ತಂಡ ತನಿಖೆ ನಡೆಸಿ, ಆರೋಪಿ ಆರೋಗ್ಯ ದಾಸ್ನನ್ನು ಹುಬ್ಬಳ್ಳಿಯ ಹೊರವಲಯದಲ್ಲಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಪರಮೇಶಿ ಹಾಗೂ ಆರೋಗ್ಯದಾಸ್ ಜೊತೆಗಾರರಾಗಿದ್ದು, ಮದ್ಯಪಾನ ಪಾನಮಾಡಿ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡಿದ್ದರು. ನಂತರ ಆರೋಗ್ಯ ದಾಸ್ ಸಿಟ್ಟಿನಲ್ಲಿ ಪರಮೇಶಿ ಕತ್ತುಸಿಳಿ ಪರಾರಿಯಾಗಿದ್ದ.