ಶ್ರೀಕೃಷ್ಣನ ನಾಡಲ್ಲಿ ಮಹಾಧನ್ವಂತರಿ ಯಾಗ

ಉಡುಪಿಯಲ್ಲಿ ಸನಾತನ ಸಂಸ್ಥೆಯ ವತಿಯಿಂದ ಧನ್ವಂತರಿ ಯಾಗ ನಡೆಯಿತು.
ಉಡುಪಿಯಲ್ಲಿ ಸನಾತನ ಸಂಸ್ಥೆಯ ವತಿಯಿಂದ ಧನ್ವಂತರಿ ಯಾಗ ನಡೆಯಿತು.
Published on: 

* ಸನಾತನ ಸಂಸ್ಥೆಯಿಂದ ಆಯೋಜನೆ

* ಆರೋಗ್ಯ ಸಂಪನ್ನ, ಸುರತ ಭಾರತಕ್ಕಾಗಿ ಪ್ರಾರ್ಥನೆ

ಉಡುಪಿ: ಪೊಡವಿಗೊಡೆಯ ಶ್ರೀಕೃಷ್ಣನ ತಾಣವಾದ ಉಡುಪಿಯಲ್ಲಿ ಸನಾತನ ಸಂಸ್ಥೆಯ ವತಿಯಿಂದ ಆರೋಗ್ಯ ಸಂಪನ್ನ ಹಾಗೂ ಸುರತ ಭಾರತಕ್ಕಾಗಿ ಪ್ರಾರ್ಥಿಸಿ 'ಮಹಾಧನ್ವಂತರಿ ಯಾಗ' ನಡೆಸಲಾಯಿತು.

ಉಡುಪಿಯ ಕುಂಜಿಬೆಟ್ಟುವಿನಲ್ಲಿರುವ ಎಂಜಿಎಂ ಕಾಲೇಜ್​ನ ಮೈದಾನದಲ್ಲಿ ಭಾನುವಾರ (ನ.29) ಮಧ್ಯಾಹ್ನ 3 ಗಂಟೆಯಿಂದ ಸಂಜೆ 7:30ರ ವರೆಗೆ ಧಾರ್ಮಿಕ ವಿಧಿ-ವಿಧಾನದ ಮೂಲಕ ಯಾಗವನ್ನು ಕೈಗೊಳ್ಳಲಾಯಿತು. ಅದಮಾರು ಮಠದ ಕಿರಿಯ ಯತಿ, ಯಾಗದ ಸ್ವಾಗತ ಸಮಿತಿಯ ಗೌರವ ಮಾರ್ಗದರ್ಶಕರೂ ಆದ ಈಶಪ್ರಿಯ ತೀರ್ಥ ಶ್ರೀಪಾದರು ಯಾಗಕ್ಕೆ ಚಾಲನೆ ನೀಡಿದರು.

ಅದಮಾರು ಮಠದ ಈಶಪ್ರಿಯ ಶ್ರೀಗಳು ಯಾಗಕ್ಕೆ ಚಾಲನೆ ನೀಡಿದರು. ರಮಾನಂದ ಗೌಡ, ನಿಲೇಶ ಸಿಂಗಬಾಳ ಇದ್ದರು.
ಅದಮಾರು ಮಠದ ಈಶಪ್ರಿಯ ಶ್ರೀಗಳು ಯಾಗಕ್ಕೆ ಚಾಲನೆ ನೀಡಿದರು. ರಮಾನಂದ ಗೌಡ, ನಿಲೇಶ ಸಿಂಗಬಾಳ ಇದ್ದರು.

ಮುಖ್ಯ ಯಜಮಾನ ದಂಪತಿಗಳಾದ ಸದ್ಗುರು ನಿಲೇಶ ಸಿಂಗಬಾಳ, ಶ್ರೀಸತ್​ಶಕ್ತಿ (ಸೌ) ಬಿಂದಾ ನಿಲೇಶ ಸಿಂಗಬಾಳ, ಸದ್ಗುರು (ಡಾ.) ಮುಕುಲ್​ ಗಾಡ್ಗೀಳ, ಶ್ರೀಚಿತ್​ಶಕ್ತಿ (ಸೌ) ಅಂಜಲಿ ಮುಕುಲ್​ ಗಾಡ್ಗೀಳ ಮತ್ತು ಅರುಣ ಗುರೂಜಿ ನೇತೃತ್ವದಲ್ಲಿ ಯಾಗ ನಡೆಯಿತು. ಸಂಸ್ಥೆಯ ಧರ್ಮಪ್ರಚಾರಕ ಸಂತ ರಮಾನಂದ ಗೌಡ ಉಪಸ್ಥಿತರಿದ್ದರು.

ಮುಖ್ಯ ಯಜಮಾನ ದಂಪತಿಗಳಾದ ಸದ್ಗುರು ನಿಲೇಶ ಸಿಂಗಬಾಳ, ಶ್ರೀಸತ್​ಶಕ್ತಿ (ಸೌ) ಬಿಂದಾ ನಿಲೇಶ ಸಿಂಗಬಾಳ.
ಮುಖ್ಯ ಯಜಮಾನ ದಂಪತಿಗಳಾದ ಸದ್ಗುರು ನಿಲೇಶ ಸಿಂಗಬಾಳ, ಶ್ರೀಸತ್​ಶಕ್ತಿ (ಸೌ) ಬಿಂದಾ ನಿಲೇಶ ಸಿಂಗಬಾಳ.

ಯಾಗದ ಪುರೋಹಿತರಾಗಿ ತಮಿಳುನಾಡು ಈರೋಡು ನಗರದವರಾದ ಶಿವಾಚಾರ್ಯ ಗುರುಮೂರ್ತಿ ಹಾಗೂ ಶಿವಾಗಮ ವಿದ್ಯಾನಿಧಿ ಆಗಮಾಚಾರ್ಯ ಅರುಣಕುಮಾರ ಗುರುಮೂರ್ತಿ, ಯಜ್ಞಸೇವೆಯ ಕಾರ್ಯದಲ್ಲಿ ಜಿ.ಕಾರ್ತಿಕೇಯನ್​, ಯೋಗೀಶ್ವರನ್​, ಎಸ್​.ರಾಜಕುಮಾರ, ಆದರ್ಶ ಬಾಲಾಜಿ ಸಹಕರಿಸಿದರು.

ಮುಖ್ಯ ಯಜಮಾನ ದಂಪತಿಗಳಾದ ಸದ್ಗುರು (ಡಾ.) ಮುಕುಲ್​ ಗಾಡ್ಗೀಳ, ಶ್ರೀಚಿತ್​ಶಕ್ತಿ (ಸೌ) ಅಂಜಲಿ ಮುಕುಲ್​ ಗಾಡ್ಗೀಳ.
ಮುಖ್ಯ ಯಜಮಾನ ದಂಪತಿಗಳಾದ ಸದ್ಗುರು (ಡಾ.) ಮುಕುಲ್​ ಗಾಡ್ಗೀಳ, ಶ್ರೀಚಿತ್​ಶಕ್ತಿ (ಸೌ) ಅಂಜಲಿ ಮುಕುಲ್​ ಗಾಡ್ಗೀಳ.

ಯಾಗದ ನಿಮಿತ್ತ 87 ದಂಪತಿಗಳು ವಿಶ್ವ ಕಲ್ಯಾಣಕ್ಕಾಗಿ ದೇವೀ ಯಂತ್ರಕ್ಕೆ ಕುಂಕುಮಾರ್ಚನೆ ಮಾಡಿದರು. ವಿಷ್ಣು ಪ್ರೀತ್ಯರ್ಥವಾಗಿ ಮಹಾಲಕ್ಷ್ಮೀ ಹೋಮವನ್ನೂ ಕೈಗೊಳ್ಳಲಾಯಿತು. 10 ಸಾವಿರಕ್ಕೂ ಅಧಿಕ ಭಕ್ತರು ಯಾಗದಲ್ಲಿ ಪಾಲ್ಗೊಂಡಿದ್ದರು. ಸಂಗೀತಾ ಆಚಾರ್ಯ, (ಸೌ) ಪ್ರಜ್ಞಾ ರಾವ್​ ಹಾಗೂ ವಕೀಲ ತೀರ್ಥೇಶ ಕಾರ್ಯಕ್ರಮ ನಿರ್ವಹಿಸಿದರು.

ಸೋಮನಾಥ ಜ್ಯೋತಿರ್ಲಿಂಗ ದರ್ಶನ

ಮಹಾಯಾಗದ ನಿಮಿತ್ತ 12 ಜ್ಯೋರ್ತಿಲಿಂಗಗಳಲ್ಲಿ ಪ್ರಥಮ ಲಿಂಗವಾದ ಸೋಮನಾಥ ಜ್ಯೋತಿರ್ಲಿಂಗ ಕ್ಷೇತ್ರದಿಂದ ದಿವ್ಯ ಮೂಲ ಅಂಶ ಹೊಂದಿರುವ ಲಿಂಗವನ್ನು ಉಡುಪಿಗೆ ತರಲಾಗಿತ್ತು. ಭಕ್ತರಿಗೆ ಅವುಗಳ ದರ್ಶನಕ್ಕೂ ವ್ಯವಸ್ಥೆ ಕಲ್ಪಿಸಲಾಗಿತ್ತು. ಶ್ರೀಕೃಷ್ಣನ ಅವತಾರಕ್ಕೆ ಸಂಬಂಧಿಸಿದ ಪುಣ್ಯ ಕ್ಷೇತ್ರಗಳ ಪವಿತ್ರ ಮಣ್ಣು, ಜಲ ಮತ್ತು ಇನ್ನಿತರ ಚೈತನ್ಯಮಯ ವಸ್ತುಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು. ಆಗಮಿಸಿದ ಭಕ್ತರಿಗೆ ಮಹಾ ಅನ್ನಸಂತರ್ಪಣೆ ಆಯೋಜಿಸಲಾಗಿದ್ದು, ಇದಕ್ಕಾಗಿ 16 ಕೌಂಟರ್​ ತೆರೆಯಲಾಗಿತ್ತು.

ಯಾಗದ ನಿಮಿತ್ತ ಸೋಮನಾಥ ಜ್ಯೋತಿರ್ಲಿಂಗ ಕ್ಷೇತ್ರದಿಂದ ತಂದಿದ್ದ ದಿವ್ಯ ಮೂಲ ಅಂಶ ಹೊಂದಿರುವ ಲಿಂಗ.
ಯಾಗದ ನಿಮಿತ್ತ ಸೋಮನಾಥ ಜ್ಯೋತಿರ್ಲಿಂಗ ಕ್ಷೇತ್ರದಿಂದ ತಂದಿದ್ದ ದಿವ್ಯ ಮೂಲ ಅಂಶ ಹೊಂದಿರುವ ಲಿಂಗ.

ಆಧ್ಯಾತ್ಮಿಕ ಬಲ ವರ್ಧನೆಯ ಉದ್ದೇಶ

ಆಧ್ಯಾತ್ಮಿಕ ಉನ್ನತಿ ಹಾಗೂ ರಾಮ ರಾಜ್ಯ ಸ್ಥಾಪನೆಗಾಗಿಯೇ ಸನಾತನ ಸಂಸ್ಥೆ ಕಾರ್ಯೋನ್ಮುಖವಾಗಿದೆ. ಧನ್ವಂತರಿ ದೇವರು ಆರೋಗ್ಯ, ವೈದ್ಯಕೀಯ ಚಿಕಿತ್ಸೆ ಮತ್ತು ಆಯುರ್ವೇದದ ದೇವರಾಗಿದ್ದು, ಮಾನವನ ದು:ಖ ನೀಗಿಸಲು ಸ್ವಯಂ ವಿಷ್ಣುವೇ ಧನ್ವಂತರಿ ದೇವರಾಗಿ ಅವತರಿಸಿದನು. ಅನೇಕ ದಾರ್ಶನಿಕ ತಜ್ಞರು, ಭವಿಷ್ಯ ತಜ್ಞರು ಭವಿಷ್ಯದ ಭೀಕರ ಕಾಲದ ಕುರಿತು ಮುನ್ನೆಚ್ಚರಿಕೆ ನೀಡಿದ್ದಾರೆ. ವಿವಿಧ ದೇಶಗಳಲ್ಲಿ ಈಗಾಗಲೇ ಶೀತಲ ಯುದ್ಧವಲ್ಲ, ಪ್ರತ್ಯಕ್ಷ ನಡೆದಿದ್ದು, ಜಗತ್ತು 3ನೇ ಯುದ್ಧದ ಹೊಸ್ತಿಲಿನಲ್ಲಿದೆ. ನೈಸರ್ಗಿಕ ವಿಪೋಕವೂ ಹೆಚ್ಚುತ್ತಿದ್ದು, ದೇಶದ ಅನೇಕ ರಾಜ್ಯಗಳು ಅಪಾರ ಬರಗಾಲ, ಪ್ರವಾಹವನ್ನೂ ಕಾಣುತ್ತಿದೆ. ಕರೊನಾದ ನಂತರವೂ ಭೀಕರ ಕಾಯಿಲೆಗಳೂ ಉಣ್ಬಣಿಸುತ್ತಲಿದೆ. ಹೀಗಾಗಿ ದೇಶದ ಸಾತ್ವಿಕ ಜನರ ಆರೋಗ್ಯ ರಕ್ಷಣೆಯಾಗಿ ಅವರಿಗೆ ರಾಷ್ಟ್ರ ರಕ್ಷಣೆಗಾಗಿ ಆಧ್ಯಾತ್ಮಿಕ ಬಲ ಲಭಿಸಲು ಈ ಯಾಗ ಆಯೋಜಿಸಲಾಗಿದೆ. ಇದು ಮಾನಸಿಕ ಒತ್ತಡ ಮತ್ತು ಎಲ್ಲ ರೀತಿಯ ಮನೋವಿಕಾರ ದೂರ ಮಾಡಲಿದೆ. ಧನ, ಐಶ್ವರ್ಯ, ಕುಟುಂಬದಲ್ಲಿ ಸುಖ-ಶಾಂತಿ, ಸಮೃದ್ಧಿ ಒದಗಿಸುತ್ತದೆ. ಈ ಯಾಗದಲ್ಲಿ ಪಾಲ್ಗೊಳ್ಳುತ್ತಿರುವುದು ಜನ್ಮದ ಪುಣ್ಯ ಕಾಲವಾಗಿದೆ ಎಂದು ಸಂಸ್ಥೆಯ ಸಾಧಕ ವಿನಾಯಕ ಶ್ಯಾನಭಾಗ ವಿವರಿಸಿದರು.

10 ಸಾವಿರಕ್ಕೂ ಅಧಿಕ ಭಕ್ತರು ಯಾಗದಲ್ಲಿ ಪಾಲ್ಗೊಂಡಿದ್ದರು.
10 ಸಾವಿರಕ್ಕೂ ಅಧಿಕ ಭಕ್ತರು ಯಾಗದಲ್ಲಿ ಪಾಲ್ಗೊಂಡಿದ್ದರು.