ಕೋಟ: ಕೋಟ ಪಂಚಾಯಿತಿ ವ್ಯಾಪ್ತಿಯ ಮೂಡುಗಿಳಿಯಾರು ಭಾಗದಲ್ಲಿ ಚಿರತೆ ಅದರ ಮರಿಗಳೊಂದಿಗೆ ಸಂಚರಿಸುತ್ತಿದ್ದ ಬಗ್ಗೆ ಶುಕ್ರವಾರ ಗ್ರಾಮಸ್ಥರಿಂದ ಮಾಹಿತಿ ಲಭಿಸಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಸ್ಥಳೀಯ ನಿವಾಸಿ ವಿನಯ ಬಾಯರಿ ಮನೆ ಮುಂಭಾಗ ಚಿರತೆ ಸಂಚರಿಸುತ್ತಿದ್ದ ಬಗ್ಗೆ ಮಾಹಿತಿ ನೀಡಿದ್ದು, ಸ್ಥಳೀಯರ ಸಹಕಾರದಿಂದ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಬೋನು ಇರಿಸಲಾಗಿದೆ. ರಾತ್ರಿ ಹೊತ್ತಿನಲ್ಲಿ ಗ್ರಾಮಸ್ಥರು ಎಚ್ಚರದಿಂದ ಸಂಚರಿಸುವಂತೆ ಇಲಾಖೆ ಮಾಹಿತಿ ನೀಡಿದೆ.