ಕಲೆಗೆ ಪ್ರೋತ್ಸಾಹಿಸುವವರಿಗೆ ಮಹಾಲಕ್ಷ್ಮೀ ಅನುಗ್ರಹ

 ಉಚ್ಚಿಲ ದಸರಾ ಅಂಗವಾಗಿ ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಆಯೋಜಿಸಲಾಗಿದ್ದ ಪಿಲಿನಲಿಕೆ ಸ್ಪರ್ಧೆಯನ್ನು ನಾಡೋಜ ಜಿ.ಶಂಕರ್ ಉದ್ಘಾಟಿಸಿದರು. ಪ್ರಮುಖರಾದ ಯಶ್‌ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಜಯ ಸಿ.ಕೋಟ್ಯಾನ್ ಮತ್ತಿತರರಿದ್ದರು
ಉಚ್ಚಿಲ ದಸರಾ ಅಂಗವಾಗಿ ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಆಯೋಜಿಸಲಾಗಿದ್ದ ಪಿಲಿನಲಿಕೆ ಸ್ಪರ್ಧೆಯನ್ನು ನಾಡೋಜ ಜಿ.ಶಂಕರ್ ಉದ್ಘಾಟಿಸಿದರು. ಪ್ರಮುಖರಾದ ಯಶ್‌ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಜಯ ಸಿ.ಕೋಟ್ಯಾನ್ ಮತ್ತಿತರರಿದ್ದರು
Published on: 

ಪಡುಬಿದ್ರಿ: ದಸರಾ ಉತ್ಸವದ ಚಿಕತ್ರಲಾ ಸ್ಪರ್ಧೆ ಹಾಗೂ ಪೊಣ್ಣು ಪಿಲಿ ನಲಿಕೆ ಸ್ಪರ್ಧೆಗೆ ಪ್ರಾಯೋಜಕತ್ವ ವಹಿಸಿ ಕಲೆಯನ್ನು ಪ್ರೋತ್ಸಾಹಿಸುತ್ತಿರುವ ಮಹಾಲಕ್ಷ್ಮೀ ಬ್ಯಾಂಕ್, ಮೀನು ಮಾರಾಟ ಫೆಡರೇಶನ್ ಹಾಗೂ ಶಾಸಕ ಯಶ್‌ಪಾಲ್ ಕಾರ್ಯ ಶ್ಲಾಘನೀಯ. ಅವರನ್ನು ತಾಯಿ ಮಹಾಲಕ್ಷ್ಮೀ ಅನುಗ್ರಹಿಸಲಿ ಎಂದು ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಜಿ.ಶಂಕರ್ ಹೇಳಿದರು.

ಉಡುಪಿ ಉಚ್ಚಿಲ ದಸರಾ ಅಂಗವಾಗಿ ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ದಸರಾ ಮುಖ್ಯ ವೇದಿಕೆಯಲ್ಲಿ ಶನಿವಾರ ಕಿನ್ನಿ ಪಿಲಿ ಹಾಗೂ ಪೊಣ್ಣು ಪಿಲಿ ನಲಿಕೆ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಮೊಗವೀರ ಮಹಾಜನ ಸಂಘ ಮುಂಬೈ ಸಮಿತಿ ಗೌರವಾಧ್ಯಕ್ಷ ವೇದಪ್ರಕಾಶ್ ಶ್ರೀಯಾನ್ ಮಾತನಾಡಿದರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮೊಗವೀರ ಮಹಾಜನ ಸಂಘ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಪ್ರಮುಖರಾದ ಶಾಲಿನಿ ಶಂಕರ್, ಶ್ಯಾಮಿಲಿ ನವೀನ್, ಶೇಖರ ಸಾಲ್ಯಾನ್, ಯುವರಾಜ್ ಕಿದಿಯೂರು, ಕುಶಿ ಶೆಟ್ಟಿ ಮಂಗಳೂರು, ಲಕ್ಷ್ಮೀ ಶೆಣೈ, ಸುಷ್ಮಾ ಬಂಟ್ವಾಳ, ಶಿಲ್ಪಾ ಜಿ.ಸುವರ್ಣ, ವಿನಯ ಕರ್ಕೇರ, ವಾಸುದೇವ ಸಾಲ್ಯಾನ್, ಶಶಿಕಾಂತ್ ಪಡುಬಿದ್ರಿ, ಶೋಭೇಂದ್ರ ಸಾಲ್ಯಾನ್, ವನಜಾ ಪುತ್ರನ್, ಶರತ್ ಕುವಾರ್ ಶೆಟ್ಟಿ, ಶಾರಿಕಾ ಕಿರಣ್, ಆನಂದ ಸೆಲ್ವಂ, ಶರಣ್ ಕುವಾರ್, ಕವಿತಾ ಶರತ್, ಸುಗುಣಾ ಕರ್ಕೇರ ಉಪಸ್ಥಿತರಿದ್ದರು. ವಿಜೇತ ಶೆಟ್ಟಿ ನಿರೂಪಿಸಿದರು.

ಕಿನ್ನಿ ಪಿಲಿ ನಲಿಕೆ ವಿಜೇತರು

2 ವರ್ಷ ವಿಭಾಗದಲ್ಲಿ ವಿಹಾ ಪಿ.ಸುವರ್ಣ- ಪ್ರಥಮ, ಸುಶನ್ಯಾ ಎಸ್.ಕಟಪಾಡಿ- ದ್ವಿತೀಯ, ಪಾರ್ಥವ್ ಸುವರ್ಣ ಎಸ್.-ತೃತೀಯ, 2ರಿಂದ 4 ವರ್ಷ ವಿಬಾಗದಲ್ಲಿ ಚಕಿತ್ ವಿ.ಎಕ್ಕಾರ್- ಪ್ರಥಮ, ಶಿವಿನ್ ನಿಖಿಲ್- ದ್ವಿತೀಯ, ಆದಿತ್ಯಕೃಷ್ಣ ಉಪಾಧ್ಯ- ತೃತೀಯ, 4ರಿಂದ 6 ವರ್ಷದ ವಿಭಾಗದಲ್ಲಿ ನಮಿಷ್- ಪ್ರಥಮ, ಅದೈತ್ ಕೋಟ್ಯಾನ್- ದ್ವಿತೀಯ, ಪ್ರಿಯಾಂಶ್- ತೃತೀಯ, 6ರಿಂದ 8 ವಿಭಾಗದಲ್ಲಿ ಶ್ರೀಶೈಲ- ಪ್ರಥಮ, ಶಾಸ್ತ್ರ ಜಿ.ಸಾಲ್ಯಾನ್- ದ್ವಿತೀಯ, ಶ್ರಿಹಾನ್ ಕೆ.ಬಂಗೇರ ಮತ್ತು ದೇಶನ್ವಿ ಕೆ.ಸಾಲ್ಯಾನ್- ತೃತೀಯ ಸ್ಥಾನ ಪಡೆದರು. ನಾಲ್ಕೂ ವಿಭಾಗಗಳಲ್ಲಿ ಒಟ್ಟು 178 ಪುಟಾಣಿಗಳು ಪಾಲ್ಗೊಂಡಿದ್ದರು. ಪೊಣ್ಣು ಪಿಲಿ ನಲಿಕೆ 14 ತಂಡಗಳು ಹಾಗೂ ಸೀರೆ ವಿಭಾಗದಲ್ಲಿ 33 ಸ್ಪರ್ಧಿಗಳು ಭಾಗವಹಿಸಿದ್ದರು.

ಕಿನ್ನಿಪಿಲಿ ನಲಿಕೆಯಲ್ಲಿ ಗಮನ ಸೆಳೆದ ಪುಟಾಣಿ ಸ್ಪರ್ಧಿಗಳು.
ಕಿನ್ನಿಪಿಲಿ ನಲಿಕೆಯಲ್ಲಿ ಗಮನ ಸೆಳೆದ ಪುಟಾಣಿ ಸ್ಪರ್ಧಿಗಳು.

ಪೊಣ್ಣು ಪಿಲಿ ನಲಿಕೆ ಬಹುಮಾನ ವಿತರಣೆ

ಪೊಣ್ಣು ಪಿಲಿ ನಲಿಕೆ ವಿಭಾಗದಲ್ಲಿ ಪ್ರಥಮ- ದರ್ಪಣ ಮಹಿಳಾ ತಂಡ, ದ್ವಿತೀಯ- ಡಿ.ಡಿ.ಗ್ರೂಪ್ ನಿಟ್ಟೂರ್, ತೃತೀಯ- ಕಿಡ್ಸ್ ಟೀಂ ಮಲ್ಪೆ, ಚತುರ್ಥ- ಫ್ರೆಂಡ್ಸ್ ಟೀಂ ಮಲ್ಪೆ, ಪೊಣ್ಣು ಪಿಲಿ ನಲಿಕೆ ವೈಯಕ್ತಿಕ ವಿಭಾಗದಲ್ಲಿ ಪ್ರಥಮ- ಪೂರ್ವಿ ರಾಜೇಶ್ ಮಲ್ಪೆ, ದ್ವಿತೀಯ- ಸೌಮ್ಯಾ ಸುರೇಂದ್ರ ಸುರತ್ಕಲ್, ತೃತೀಯ- ರವ್ಯಾ ರೂಪೇಶ್ ನಿಟ್ಟೂರ್, ಚತುರ್ಥ- ನಿಮಿತ್ತಾ ಬಹುಮಾನ ಪಡೆದರು. ವಿಜೇತರಿಗೆ ನಾಡೋಜ ಜಿ.ಶಂಕರ್ ಬಹುವಾನ ವಿತರಿಸಿದರು. ಶಾಸಕರಾದ ವೇದವ್ಯಾಸ ಕಾಮತ್, ಯಶಪಾಲ್ ಸುವರ್ಣ, ಜಯ ಸಿ.ಕೋಟ್ಯಾನ್, ರಾವೇಂದ್ರ ಉಪಾಧ್ಯಾಯ, ಗಿರಿಧರ್ ಸುವರ್ಣ, ಶರಣ್ ಕುವಾರ್, ಸಂಧ್ಯಾದೀಪ ಸುನೀಲ್, ಕವಿತಾ ಶರತ್, ಸುಗುಣಾ ಕರ್ಕೇರ, ಮನೋಜ್ ಸಾಲ್ಯಾನ್, ರಾಮಚಂದ್ರ ಕುಂದರ್, ವಿನಯ ಕರ್ಕೇರ, ಬ್ಯಾಂಕಿನ ಉಪಾಧ್ಯಕ್ಷರಾದ ವಾಸುದೇವ ಸಾಲ್ಯಾನ್ ಉಪಸ್ಥಿತರಿದ್ದರು. ಪಾಂಡುರಂಗ ಪಡ್ಡಾಂ, ಸುಧಾಕರ ಬೈಲಕೆರೆ, ನೀಲಾಧರ ಬೈಕಂಪಾಡಿ ತೀರ್ಪುಗಾರರಾಗಿ ಸಹಕರಿಸಿದರು.

ಪೊಣ್ಣು ಪಿಲಿ ನಲಿಕೆ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರಮುಖರಾದ ನಾಡೋಜ ಜಿ.ಶಂಕರ್, ವೇದವ್ಯಾಸ ಕಾಮತ್, ಯಶ್‌ಪಾಲ್ ಸುವರ್ಣ ಮೊದಲಾದವರಿದ್ದರು.
ಪೊಣ್ಣು ಪಿಲಿ ನಲಿಕೆ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರಮುಖರಾದ ನಾಡೋಜ ಜಿ.ಶಂಕರ್, ವೇದವ್ಯಾಸ ಕಾಮತ್, ಯಶ್‌ಪಾಲ್ ಸುವರ್ಣ ಮೊದಲಾದವರಿದ್ದರು.
ದಸರಾ ಮಹೋತ್ಸವಕ್ಕೆ ಇನ್ನಷ್ಟು ಮೆರುಗು ನೀಡುವುದರೊಂದಿಗೆ ಎಳೆಯ ಮಕ್ಕಳಿಗೆ ಪ್ರೋತ್ಸಾಹ ನೀಡಿ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಬ್ಯಾಂಕ್ ಮೂಲಕ ಮಾಡಲಾಗುತ್ತಿದೆ. ಇಲ್ಲಿಯೇ ಹುಟ್ಟಿ ಬೆಳೆದ ಮಹಾಲಕ್ಷ್ಮೀ ಬ್ಯಾಂಕ್ 49 ವರ್ಷಗಳನ್ನು ಪೂರೈಸಿ ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿದೆ.
ಯಶ್‌ಪಾಲ್ ಸುವರ್ಣ ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net