ಕೃಷ್ಣ ಮಠದಲ್ಲಿ ತೆನೆಹಬ್ಬ

ವಿಜಯದಶಮಿ ಪರ್ವಕಾಲದಲ್ಲಿ ಕೃಷ್ಣಮಠದಲ್ಲಿ ಸಾಂಪ್ರದಾಯಿಕ ತೆನೆಪೂಜೆ (ಕದಿರು ಕಟ್ಟುವ ಹಬ್ಬ) ನಡೆಯಿತು.
krishna mutt
ವಿಜಯದಶಮಿ ಪರ್ವಕಾಲದಲ್ಲಿ ಕೃಷ್ಣಮಠದಲ್ಲಿ ಸಾಂಪ್ರದಾಯಿಕ ತೆನೆಪೂಜೆ (ಕದಿರು ಕಟ್ಟುವ ಹಬ್ಬ) ನಡೆಯಿತು.
Published on: 

ಉಡುಪಿ: ವಿಜಯದಶಮಿ ಪರ್ವಕಾಲದಲ್ಲಿ ಕೃಷ್ಣಮಠದಲ್ಲಿ ಸಾಂಪ್ರದಾಯಿಕ ತೆನೆಪೂಜೆ (ಕದಿರು ಕಟ್ಟುವ ಹಬ್ಬ) ನಡೆಯಿತು.

ಸೋದೆ ಮಠದ ಮುಂಭಾಗದಲ್ಲಿ ಭತ್ತದ ತೆನೆಗಳನ್ನು ಪೂಜಿಸಿ ಚಿನ್ನದ ಪಲ್ಲಕ್ಕಿಯಲ್ಲಿರಿಸಿ ಮಂಗಳವಾದ್ಯಗಳೊಂದಿಗೆ ರಥಬೀದಿಯಲ್ಲಿ ಮೆರವಣಿಗೆಯ ಮೂಲಕ ಕೃಷ್ಣಮಠಕ್ಕೆ ತರಲಾಯಿತು. ವರ್ಷಕ್ಕೊಮ್ಮೆ ಮಾತ್ರ ತೆರೆಯುವ ಮಠಗರ್ಭಗೃಹದ ಪೂರ್ವದ ಬಾಗಿಲಿನಲ್ಲಿ ಒಳಗೆ ಬಂದು ಕೃಷ್ಣನಿಗೆ ತೆನೆ ಸಮರ್ಪಿಸಿ ಪೂಜಿಸಿ ನಂತರ ಮುಂಭಾಗದ ಲಕ್ಷ್ಮೀ ಮಂಟಪದಲ್ಲಿ ಅಷ್ಟಮಠ ಹಾಗೂ ಇತರ ಉಪಮಠಗಳಿಗೆ ತೆನೆ ವಿತರಿಸಲಾಯಿತು. ನಂತರ ಬಡಗುಮಾಳಿಗೆಗೆ ಸಾಂಪ್ರದಾಯಿಕ ಮೆರವಣಿಗೆಯ ಮೂಲಕ ತಂದು ಭಕ್ತರಿಗೆ ಹಂಚಲಾಯಿತು.

ಈ ಸಂದರ್ಭದಲ್ಲಿ ಮಠದ ದಿವಾನ ಡಾ.ಉದಯಕುಮಾರ್​ ಸರಳತ್ತಾಯ, ಪಾರುಪತ್ಯೆದಾರ ಶ್ರೀಶ ಭಟ್​ ಕಡೆಕಾರು ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net