ಭಾಷಣ, ದೂಷಣೆಯಿಂದ ಬೆಳೆಯದು ಕನ್ನಡ

ಕಸಾಪ ಉಡುಪಿ ತಾಲೂಕು ಘಟಕ ವತಿಯಿಂದ ಶತಾಯುಷ್ಯದ ಸಂದರ್ಭದಲ್ಲಿರುವ ಹಿರಿಯ ಸಾಹಿತಿ, ಪತ್ರಕರ್ತ ಅಮ್ಮೆಂಬಳ ಆನಂದ ಅವರನ್ನು ಸನ್ಮಾನಿಸಲಾಯಿತು. ರವಿರಾಜ ಎಚ್.ಪಿ., ಯು.ವಿಶ್ವನಾಥ ಶೆಣೈ, ಸಂಧ್ಯಾ ಶೆಣೈ, ಪೂರ್ಣಿಮಾ ಜನಾರ್ದನ, ರಂಜನಿ ವಸಂತ, ರಾಜೇಶ ಭಟ್​ ಪಣಿಯಾಡಿ, ರಾಘವೇಂದ್ರ ಪ್ರಭು ಕರ್ವಾಲು, ಡಾ. ರಶ್ಮಿ ಅಮ್ಮೆಂಬಳ, ದೀಪಾ ಕರ್ಕಿ ಇತರರಿದ್ದರು.
ಕಸಾಪ ಉಡುಪಿ ತಾಲೂಕು ಘಟಕ ವತಿಯಿಂದ ಶತಾಯುಷ್ಯದ ಸಂದರ್ಭದಲ್ಲಿರುವ ಹಿರಿಯ ಸಾಹಿತಿ, ಪತ್ರಕರ್ತ ಅಮ್ಮೆಂಬಳ ಆನಂದ ಅವರನ್ನು ಸನ್ಮಾನಿಸಲಾಯಿತು. ರವಿರಾಜ ಎಚ್.ಪಿ., ಯು.ವಿಶ್ವನಾಥ ಶೆಣೈ, ಸಂಧ್ಯಾ ಶೆಣೈ, ಪೂರ್ಣಿಮಾ ಜನಾರ್ದನ, ರಂಜನಿ ವಸಂತ, ರಾಜೇಶ ಭಟ್​ ಪಣಿಯಾಡಿ, ರಾಘವೇಂದ್ರ ಪ್ರಭು ಕರ್ವಾಲು, ಡಾ. ರಶ್ಮಿ ಅಮ್ಮೆಂಬಳ, ದೀಪಾ ಕರ್ಕಿ ಇತರರಿದ್ದರು.
Published on: 

* ಹಿರಿಯ ಪತ್ರಕರ್ತ ಅಮ್ಮೆಂಬಳ ಆನಂದ ಅಭಿಪ್ರಾಯ

* ಶತಾಯುಷ್ಯದ ನಿಮಿತ್ತ ಕಸಾಪದಿಂದ ಸನ್ಮಾನ

ಉಡುಪಿ: ಸಾಹಿತ್ಯದ ಒಡನಾಟ ಹಾಗೂ ಸಂಪರ್ಕ ಬೆಳೆಸಿಕೊಂಡಲ್ಲಿ ಕನ್ನಡವನ್ನು ಉಳಿಸಿಕೊಂಡು ಹೋಗಬಹುದು. ಕೇವಲ ಭಾಷಣದಿಂದ, ದೂಷಣೆಯಿಂದ ಕನ್ನಡ ಭಾಷೆ ಉಳಿಸಲಾಗದು. ಕುಳಿತು ಪರಸ್ಪರ ಪ್ರೀತಿಯಿಂದ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಸಾಹಿತ್ಯದ ವಿಚಾರಗಳನ್ನು ಹಂಚಿಕೊಳ್ಳಬೇಕು ಎಂದು ಶತಾಯುಷಿ, ಹಿರಿಯ ಸಾಹಿತಿ, ಪತ್ರಕರ್ತ ಅಮ್ಮೆಂಬಳ ಆನಂದ ಅಭಿಪ್ರಾಯಪಟ್ಟರು.

ಉಡುಪಿಯ ಸ್ವಗೃಹದಲ್ಲಿ ಕನ್ನಡ ಸಾಹಿತ್ಯ ಪರಿಷತ್​ ಉಡುಪಿ ತಾಲೂಕು ಘಟಕ ವತಿಯಿಂದ ಆಯೋಜಿಸಿದ್ದ ಶತಾಯುಷ್ಯದ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಇಂದು ಲಭಿಸಿದ ಈ ಗೌರವವು ಹಲವು ಸಮಾರಂಭಗಳಲ್ಲಿ ದೊರೆತ ಗೌರವಕ್ಕಿಂತ ಬಹಳ ದೊಡ್ಡದು ಹಾಗೂ ಸೂಕ್ತವಾದುದು ಎಂದರು.

ಪತ್ರಿಕೋದ್ಯಮಕ್ಕೆ ಹೊಸ ದಿಕ್ಕು

ಕಸಾಪ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ ಎಚ್​.ಪಿ. ಮಾತನಾಡಿ, 1926ರಲ್ಲಿ ಜನಿಸಿದ ಅಮ್ಮೆಂಬಳ ಆನಂದ ಅವರು ಕನ್ನಡ ಸಾಹಿತ್ಯ, ಪತ್ರಿಕೋದ್ಯಮ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾನ್​ ಚೇತನ. ಹಲವು ಪತ್ರಿಕೆಗಳ ಸಂಪಾದಕರಾಗಿ ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ದಿಕ್ಕು ತೋರಿಸಿದ ಹೆಗ್ಗಳಿಕೆ ಅವರದ್ದು ಎಂದರು.

ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಯು.ವಿಶ್ವನಾಥ ಶೆಣೈ, ಸುಹಾಸಂ ಅಧ್ಯಕ್ಷೆ ಸಂಧ್ಯಾ ಶೆಣೈ, ಜಿಲ್ಲಾ ಕಸಾಪ ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ, ಕಸಾಪ ಉಡುಪಿ ಘಟಕದ ಗೌರವ ಕಾರ್ಯದರ್ಶಿಗಳಾದ ಜನಾರ್ದನ ಕೊಡವೂರು, ರಂಜನಿ ವಸಂತ, ಕೋಶಾಧಿಕಾರಿ ರಾಜೇಶ ಭಟ್​ ಪಣಿಯಾಡಿ, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು, ಸಾಂಸ್ಕೃತಿಕ ಕಾರ್ಯದರ್ಶಿ ವಸಂತ, ರೇಡಿಯೋ ಮಣಿಪಾಲದ ಮುಖ್ಯಸ್ಥೆ ಡಾ. ರಶ್ಮಿ ಅಮ್ಮೆಂಬಳ, ದೀಪಾ ಕರ್ಕಿ ಇನ್ನಿತರರು ಅಮ್ಮೆಂಬಳ ಆನಂದ ಅವರನ್ನು ಗೌರವಿಸಿದರು.

ಕಸಾಪ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ ಎಚ್​.ಪಿ. ಮಾತನಾಡಿದರು.
ಕಸಾಪ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ ಎಚ್​.ಪಿ. ಮಾತನಾಡಿದರು.
ಅಮ್ಮೆಂಬಳ ಆನಂದ ಅವರ ಸಾಹಿತ್ಯ ಸೇವೆ ಗುರುತಿಸಿ ಕರ್ನಾಟಕ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ದೇಶದ ಹೆಸರಾಂತ ರಾಜಕೀಯ ನಾಯಕ ಜಾರ್ಜ್​ ಫರ್ನಾಂಡೀಸ್​ ಅವರ ಸಹಪಾಠಿ ಎನ್ನುವುದು ಅವರ ಬದುಕಿನ ಹೆಮ್ಮೆಯ ಅಧ್ಯಾಯ. ದಿನಕರ ದೇಸಾಯಿ ಪ್ರತಿಷ್ಠಾನದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕನ್ನಡದ ಇಂಥ ಶ್ರೇಷ್ಠ ಹಾಗೂ ಮಹಾಪುರುಷನನ್ನು ಗೌರವಿಸಲು ಅವಕಾಶ ಲಭಿಸಿರುವುದು ನಮ್ಮೆಲ್ಲರ ಪುಣ್ಯ.
ರವಿರಾಜ ಎಚ್​.ಪಿ. ಕಸಾಪ ಉಡುಪಿ ತಾಲೂಕು ಘಟಕದ ಅಧ್ಯಕ್ಷ.