ಸಂಸ್ಕೃತಿಯೇ ಮಹಿಳೆಯ ನೆರಳು

ಉಡುಪಿಯಲ್ಲಿ ಮಹಿಳಾ ಪತಂಜಲಿ ಯೋಗ ಸಮಿತಿ ಆಯೋಜಿಸಿದ್ದ ಮಹಿಳಾ ದಿನಾಚರಣೆಯನ್ನು ಸುರೇಖಾ ನಾಗರಾಜ್​ ಭಟ್​ ಉದ್ಘಾಟಿಸಿದರು. ಡಾ. ಅರ್ಚನಾ ಕಲ್ಲೂರಾಯ, ಲಕ್ಷ್ಮೀ ಸುವರ್ಣ, ಲೀಲಾ ಆರ್​. ಅಮೀನ್​ ಇತರರಿದ್ದರು.
ಉಡುಪಿಯಲ್ಲಿ ಮಹಿಳಾ ಪತಂಜಲಿ ಯೋಗ ಸಮಿತಿ ಆಯೋಜಿಸಿದ್ದ ಮಹಿಳಾ ದಿನಾಚರಣೆಯನ್ನು ಸುರೇಖಾ ನಾಗರಾಜ್​ ಭಟ್​ ಉದ್ಘಾಟಿಸಿದರು. ಡಾ. ಅರ್ಚನಾ ಕಲ್ಲೂರಾಯ, ಲಕ್ಷ್ಮೀ ಸುವರ್ಣ, ಲೀಲಾ ಆರ್​. ಅಮೀನ್​ ಇತರರಿದ್ದರು.
Published on

* ಬ್ಯಾಂಕ್​ನ ನಿವೃತ್ತ ಅಧಿಕಾರಿ ಸುರೇಖಾ ಭಟ್​ ಅನಿಸಿಕೆ

* ಕಡಿಯಾಳಿ ದೇಗುಲದಲ್ಲಿ ಮಹಿಳಾ ದಿನಾಚರಣೆ ಉದ್ಘಾಟನೆ

ಉಡುಪಿ: ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎನ್ನುವುದು ಸನಾತನ ಧರ್ಮವು ಸ್ತ್ರೀಯರಿಗೆ ಇಟ್ಟಿರುವ ಗೌರವಯುತ ಸ್ಥಾನವಾಗಿದೆ. ಕಾಲಕ್ರಮೇಣ ಸ್ತ್ರೀ ಮನೆಯೊಳಗೆ ಇರುವಂತಾದರೂ ಇದೀಗ ಎಲ್ಲ ಕ್ಷೇತ್ರಗಳಲ್ಲೂ ಪಾರಮ್ಯ ಮೆರೆಯುತ್ತಿದ್ದಾಳೆ. ಪುರುಷರಿಗಷ್ಟೇ ಮೀಸಲಾಗಿದ್ದ ಸೇನಾಪಡೆಗಳಲ್ಲೂ ಮಿಂಚುತ್ತಿದ್ದಾಳೆ. ಮಹಿಳಾ ಶಿಕ್ಷಣ, ಸಬಲೀಕರಣದಿಂದ ಕುಟುಂಬ ವ್ಯವಸ್ಥೆ ಹದಗೆಡಬಾರದು. ನಡವಳಿಕೆಯು ಧಾರ್ಮಿಕ ಕಟ್ಟುಪಾಡು ಮೀರಬಾರದು. ಸಂಸ್ಕೃತಿಯೇ ಮಹಿಳೆಯ ನೆರಳಾಗಿದೆ ಎಂದು ಬ್ಯಾಂಕ್​ನ ನಿವೃತ್ತ ಅಧಿಕಾರಿ ಸುರೇಖಾ ನಾಗರಾಜ್​ ಭಟ್​ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿ ಕಡಿಯಾಳಿಯಲ್ಲಿರುವ ಮಹಿಷಮರ್ದಿನಿ ದೇವಸ್ಥಾನದ ಕಾತ್ಯಾಯಿನಿ ಮಂಟಪದಲ್ಲಿ ಮಹಿಳಾ ಪತಂಜಲಿ ಯೋಗ ಸಮಿತಿ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾಧಕರಿಗೆ ಸನ್ಮಾನ

ಯೋಗ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಂಪ್ರೀತಾ ಹೆಗಡೆ ಹಾಗೂ ಪದ್ಮಾಕ್ಷಿ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಮುನಿಯಾಲು ಆಯುರ್ವೇದ ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕಿ ಡಾ. ಅರ್ಚನಾ ಕಲ್ಲೂರಾಯ ಅಧ್ಯಕ್ಷತೆ ವಹಿಸಿದ್ದರು. ಲಕ್ಷ್ಮೀ ಸುವರ್ಣ ಶುಭ ಹಾರೈಸಿದರು. 
ಪತಂಜಲಿ ಜಿಲ್ಲಾ ಪಧಾದಿಕಾರಿಗಳಾದ ಕೆ. ರಾಘವೇಂದ್ರ ಭಟ್​, ವೆಂಕಟೇಶ್​ ಮೆಹಂದಳೆ, ಜಗದೀಶ್​ ಕುಮಾರ್​, ಸುರೇಶ್​ ಭಕ್ತ, ರಂಜಿತ್​ ಕೆ.ಎಸ್​., ಶ್ರೀಪತಿ ಭಟ್​, ನಾಗರಾಜ್​ ಶೇಟ್​, ಶ್ಯಾಮಲಾ ಕೆ.ಎಸ್​., ಗಿರೀಶ್​ ಹಾಗೂ ಉಡುಪಿ, ಕುಂಭಾಶಿ, ಕಾರ್ಕಳ ವ್ಯಾಪ್ತಿಯ ಯೋಗ ಕಕ್ಷೆಗಳ ಸದಸ್ಯರು ಪಾಲ್ಗೊಂಡಿದ್ದರು. 
ಸಮಿತಿಯ ಜಿಲ್ಲಾ ಮಹಿಳಾ ಪ್ರಭಾರಿ ಲೀಲಾ ಆರ್​. ಅಮೀನ್​ ಸ್ವಾಗತಿಸಿ, ಪತಂಜಲಿ ಯೋಗ ಸಮಿತಿ ಉಡುಪಿಯ ವಿವಿಧ ಯೋಗಕಕ್ಷೆಗಳ ಕಾರ್ಯಯೋಜನೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ನವನೀತಾ ರಾವ್​ ಮತ್ತು ಸುಮಂಗಲಾ ಆರ್​. ಭಟ್​ ಕಾರ್ಯಕ್ರಮ ನಿರೂಪಿಸಿದರು. ಶ್ವೇತಾ ಶೇಟ್​ ವಂದಿಸಿದರು. ವಿವಿಧ ಕಕ್ಷೆಯ ಯೋಗಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. 
"

ಸೀರೆಯುಟ್ಟು, ಮುಡಿತುಂಬ ಹೂಮುಡಿದು, ಚಂದ್ರಯಾನ ಕಂಟ್ರೋಲ್​ ರೂಮ್​ನಲ್ಲಿ ಮಹಿಳೆ ನಿರ್ದೇಶನ ನೀಡುವುದನ್ನು ಕಂಡಾಗ ಅತ್ಯಂತ ಸಂತಸವಾಯಿತು. ನಮ್ಮದು ಸನಾತನ ಧರ್ಮ, ಸಂಸ್ಕೃತಿ. ಅದನ್ನು ಮುನ್ನಡೆಸುವ ಜವಾಬ್ದಾರಿಯೂ ಹೆಣ್ಣಿಗಿದೆ. ಮಕ್ಕಳಿಗೆ ನಮ್ಮ ಧರ್ಮ ಚಿಂತನೆಯ ಅರಿವು ಮೂಡಿಸುವುದು ತಾಯಿಯ ಕರ್ತವ್ಯ. ಬಾಲ್ಯದಿಂದಲೇ ಮಕ್ಕಳಿಗೆ ಮನೆಗೆಲಸ ಕಲಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net