ಜಿಲ್ಲೆಯ ಅಭಿವೃದ್ಧಿಗೆ ಮಹಿಳೆಯರ ಕೊಡುಗೆ ಅಪಾರ

ಉಡುಪಿಯಲ್ಲಿ ಬಿಜೆಪಿ ನಗರ ಮಹಿಳಾ ಮೋರ್ಚಾ ವತಿಯಿಂದ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಗೋಪಾಲಕೃಷ್ಣ ಮತ್ತು ವಸಂತಿ ದಂಪತಿಯನ್ನು ಸನ್ಮಾನಿಸಲಾಯಿತು. ಯಶ್​ಪಾಲ್​ ಸುವರ್ಣ, ಕುತ್ಯಾರು ನವೀನ್​ ಶೆಟ್ಟಿ, ನೀತಾ ಪ್ರಭು, ಉದಯಕುಮಾರ್​ ಶೆಟ್ಟಿ, ದಿನೇಶ್​ ಅಮೀನ್​, ರೇಷ್ಮಾ ಶೆಟ್ಟಿ, ಡಾ.ರಾಜಲಕ್ಷ್ಮೀ ಇತರರಿದ್ದರು.
ಉಡುಪಿಯಲ್ಲಿ ಬಿಜೆಪಿ ನಗರ ಮಹಿಳಾ ಮೋರ್ಚಾ ವತಿಯಿಂದ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಗೋಪಾಲಕೃಷ್ಣ ಮತ್ತು ವಸಂತಿ ದಂಪತಿಯನ್ನು ಸನ್ಮಾನಿಸಲಾಯಿತು. ಯಶ್​ಪಾಲ್​ ಸುವರ್ಣ, ಕುತ್ಯಾರು ನವೀನ್​ ಶೆಟ್ಟಿ, ನೀತಾ ಪ್ರಭು, ಉದಯಕುಮಾರ್​ ಶೆಟ್ಟಿ, ದಿನೇಶ್​ ಅಮೀನ್​, ರೇಷ್ಮಾ ಶೆಟ್ಟಿ, ಡಾ.ರಾಜಲಕ್ಷ್ಮೀ ಇತರರಿದ್ದರು.
Published on

* ಶಾಸಕ ಯಶ್​ಪಾಲ್​ ಸುವರ್ಣ ಮೆಚ್ಚುಗೆ

* ಸಾಧಕ ಮಹಿಳೆಯರಿಗೆ ಸನ್ಮಾನ

ಉಡುಪಿ: ಜಿಲ್ಲೆಯ ಅಭಿವೃದ್ಧಿಯಲ್ಲಿ ಮಹಿಳೆಯರ ಕೊಡುಗೆ ಅಪಾರವಾಗಿದೆ. ಜಿಲ್ಲೆಯಲ್ಲಿ ಲಿಂಗಾನುಪಾತ ಪ್ರಮಾಣದಲ್ಲಿಯೂ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಜಿಲ್ಲೆಯ ಆಡಳಿತ ವ್ಯವಸ್ಥೆಯಲ್ಲಿ ಹಲವು ಮಹಿಳೆಯರು ಉಸ್ತುವಾರಿ ಸಚಿವರಾಗಿ, ಮಹಿಳಾ ಜಿಲ್ಲಾಧಿಕಾರಿ, ಸಂಸದರು, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ, ಜಿಲ್ಲಾ ಹಾಗೂ ತಾಪಂ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿ ಜಿಲ್ಲೆಯ ಪ್ರಗತಿಗೆ ಕಾರಣರಾಗಿದ್ದಾರೆ ಎಂದು ಶಾಸಕ ಯಶ್​ಪಾಲ್​ ಸುವರ್ಣ ಮೆಚ್ಚುಗೆ ವ್ಯಕ್ತಪಡಿಸಿದರು.
ಉಡುಪಿ ನಗರ ಬಿಜೆಪಿ ಹಾಗೂ ನಗರ ಮಹಿಳಾ ಮೋರ್ಚಾ ವತಿಯಿಂದ ಆಯೋಜಿಸಿದ್ದ ವಿಶ್ವ ಮಹಿಳಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾಧಕರಿಗೆ ಸನ್ಮಾನ

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಶಕುಂತಲಾ ಶೆಟ್ಟಿ (ಹೈನುಗಾರಿಕೆ ), ವಿಮಲಾ (ಸಂಜೀವಿನಿ ಗ್ರೂಪ್​), ಅನೂಷಾ (ವಕೀಲೆ), ಸುಶೀಲಾ ಸಾಲಿಯಾನ್​ (ಹೋಮ್​  ಗಾರ್ಡ್), ಗೀತಾ ಕೃಷ್ಣರಾಜ್​ (ಆಟೋ ಚಾಲಕಿ), ಲಲಿತಾ (ಪೌರ ಕಾರ್ಮಿಕರು), ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು, ವಿಶು ಶೆಟ್ಟಿ ಅಂಬಲಪಾಡಿ, ಸತೀಶ್​ ಸಾಲ್ಯಾನ್​ ಮಣಿಪಾಲ ಹಾಗೂ ಪರ್ಕಳದ 'ಮನೆ ಊಟ' ಹೋಟೆಲ್​ನ ಹಿರಿಯ ದಂಪತಿ ಗೋಪಾಲಕೃಷ್ಣ ಮತ್ತು ವಸಂತಿ ದಂಪತಿಯನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಸಂತೆಕಟ್ಟೆ ವಾತ್ಸಲ್ಯ ಕ್ಲಿನಿಕ್​ನ ಡಾ.ರಾಜಲಕ್ಷ್ಮೀ ಉಪಯುಕ್ತ ಆರೋಗ್ಯ ಮಾಹಿತಿ ನೀಡಿದರು. ಸಮಾರಂಭದಲ್ಲಿ ಮಹಿಳೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. 
ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ, ಪಕ್ಷದ ಮುಖಂಡ ಕಿದಿಯೂರು ಉದಯಕುಮಾರ್​ ಶೆಟ್ಟಿ, ಉಡುಪಿ ನಗರ ಅಧ್ಯಕ್ಷ ದಿನೇಶ್​ ಅಮೀನ್​, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ್​ ಶೆಟ್ಟಿ , ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಸುವರ್ಣ, ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯೆ ಸಂಧ್ಯಾ ರಮೇಶ್​, ನಗರ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಾಂತಿ ಮನೋಜ್​ ಇತರರು ಉಪಸ್ಥಿತರಿದ್ದರು.
ನಗರ ಮಹಿಳಾ ಮೋರ್ಚಾದ ಅಧ್ಯೆ ನೀತಾ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.
"

ಹೆಣ್ಣೊಂದು ಕಲಿತರೆ ಶಾಲೆಯೊಂದ ತೆರೆದಂತೆ ಎಂಬ ಮಾತಿನಂತೆ ಇಂದು ಪ್ರತಿ ಕ್ಷೇತ್ರದಲ್ಲೂ ಮಹಿಳೆಯರ ಛಾಪು ಕಂಡುಬರುತ್ತಿದೆ. ಬಿಜೆಪಿ ನಗರ ಮಹಿಳಾ ಮೋರ್ಚಾ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರು ಹಾಗೂ ಸಮಾಜ ಸೇವಕರನ್ನು ಗುರುತಿಸಿ ಸನ್ಮಾನಿಸಿರುವುದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net