ಮಣಿಪಾಲದ ಕೆಎಂಸಿಯಲ್ಲಿ ಮಕ್ಕಳ ಕ್ಯಾನ್ಸರ್ ಅಸ್ಥಿಮಜ್ಜೆ ಕಸಿ ಘಟಕ ಮತ್ತು ಕ್ಯಾನ್ಸರ್ ಶಸ್ತ್ರ ಚಿಕಿತ್ಸೆಯ ಆಪರೇಷನ್ ಥಿಯೇಟರ್ ಉದ್ಘಾಟಿಸಲಾಯಿತು. ಡಾ. ಆನಂದ್ ವೇಣುಗೋಪಾಲ್, ಡಾ. ಸುಧಾಕರ್ ಕಂಟಿಪುಡಿ, ಡಾ. ಅವಿನಾಶ್ ಶೆಟ್ಟಿ, ಡಾ. ನವೀನಕುಮಾರ್ ಎ.ಎನ್., ಡಾ. ವಾಸುದೇವ್ ಭಟ್ ಕೆ., ಇನ್ನಿತರ ವೈದ್ಯಕೀಯ ಸಿಬ್ಬಂದಿ ಇದ್ದರು.
Published on:
Copied
Follow Us
* ಡಾ. ಆನಂದ್ ವೇಣುಗೋಪಾಲ್ ಅಭಿಪ್ರಾಯ
* ಮಕ್ಕಳ ಕ್ಯಾನ್ಸರ್ ಅಸ್ಥಿಮಜ್ಜೆ ಕಸಿ ಘಟಕ ಉದ್ಘಾಟನೆ
ಉಡುಪಿ: ಕ್ಯಾನ್ಸರ್ ಸಂಬಂಧಿತ ಚಿಕಿತ್ಸೆಗಳು ಒಂದೇ ಸೂರಿನಡಿ ಲಭಿಸುವಂತೆ ಮಾಡುವುದು ಕೆಎಂಸಿಯ ಗುರಿ. ಅದರಿಂದ ತಡೆರಹಿತ, ಗುಣಮಟ್ಟದ ಮತ್ತು ರೋಗಿ- ಕೇಂದ್ರಿತ ಆರೈಕೆಗೆ ಅನುಕೂಲವಾಗುತ್ತದೆ. ಆ ನಿಟ್ಟಿನಲ್ಲಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ಕ್ಯಾನ್ಸರ್ ಕಾಯಿಲೆಯ ಸಮಗ್ರ ಆರೈಕೆಯಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಇದು ವಿಶೇಷ ಅಂಕೊಲಾಜಿ ಮತ್ತು ಕಸಿ ಸೇವೆಗಳ ಅಗತ್ಯವಿರುವ ಮಕ್ಕಳಿಗೆ ಅತ್ಯಂತ ಪ್ರಯೋಜನಕಾರಿ ಎಂದು ಮಾಹೆ ಮಣಿಪಾಲದ ಮುಖ್ಯ ಕಾರ್ಯಾಚರಣಾ ಅಧಿಕಾರಿ ಡಾ. ಆನಂದ್ ವೇಣುಗೋಪಾಲ್ ತಿಳಿಸಿದರು.
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿರುವ ರ್ಶಿಡಿ ಸಾಯಿಬಾಬಾ ಕ್ಯಾನ್ಸರ್ ಕೇಂದ್ರದಲ್ಲಿ ಆರಂಭಿಸಿರುವ ಮಕ್ಕಳ ಕ್ಯಾನ್ಸರ್ ಅಸ್ಥಿಮಜ್ಜೆ ಕಸಿ ಘಟಕ ಮತ್ತು ಕ್ಯಾನ್ಸರ್ ಶಸ್ತ್ರ ಚಿಕಿತ್ಸೆಯ ಆಪರೇಷನ್ ಥಿಯೇಟರ್ಅನ್ನು ಮಂಗಳವಾರ (ಫೆ.24) ಉದ್ಘಾಟಿಸಿ ಮಾತನಾಡಿದರು.
ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯಾಚರಣಾ ಅಧಿಕಾರಿ ಡಾ. ಸುಧಾಕರ್ ಕಂಟಿಪುಡಿ, ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಕ್ಯಾನ್ಸರ್ ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ನವೀನಕುಮಾರ್ ಎ.ಎನ್., ಮಕ್ಕಳ ಅಂಕೊಲಾಜಿ ವಿಭಾಗದ ಮುಖ್ಯಸ್ಥ ಡಾ. ವಾಸುದೇವ್ ಭಟ್ ಕೆ. ಉಪಸ್ಥಿತರಿದ್ದರು.
ವಿಶೇಷ ವಿನ್ಯಾಸದ ಆಪರೇಷನ್ ಥಿಯೇಟರ್
ಉದ್ಘಾಟನೆಗೊಂಡ ಮಕ್ಕಳ ಅಂಕೊಲಾಜಿ ಬಿಎಂಟಿ ಘಟಕವು ಸುಧಾರಿತ ಮೂಲಸೌಕರ್ಯ, ವಿಶೇಷ ಐಸೋಲೇಷನ್ ಕೊಠಡಿ ಹೊಂದಿದೆ. ಅಸ್ಥಿಮಜ್ಜೆ ಕಸಿಗೆ ಅಂತಾರಾಷ್ಟ್ರೀಯ ಮಾನದಂಡ ಪೂರೈಸಲು ವಿಶೇಷ ವಿನ್ಯಾಸದ ಸೋಂಕು -ನಿಯಂತ್ರಣ ಕ್ರಮ ಅಳವಡಿಸಲಾಗಿದೆ. ಹೊಸ ಕ್ಯಾನ್ಸರ್ ಶಸ್ತ್ರ ಚಿಕಿತ್ಸಾ ಆಪರೇಷನ್ ಥಿಯೇಟರ್ಅನ್ನು ಸುರಕ್ಷತೆ ಮತ್ತು ನಿಖರತೆಯೊಂದಿಗೆ ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆಯನ್ನೂ ನಿರ್ವಹಿಸಲು ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ.
"
ಶೈಕ್ಷಣಿಕ ಶ್ರೇಷ್ಠತೆ ಮತ್ತು ವೈದ್ಯಕೀಯ ಪ್ರಗತಿಗೆ ಈ ಘಟಕವು ಸಾಯಾಗಿದ್ದು, ಸಂಸ್ಥೆಯ ಬದ್ಧತೆಯ ಪ್ರತೀಕವಾಗಿದೆ. ಈ ವಿಶೇಫಿ ಸೌಲಭ್ಯದ ಸೇರ್ಪಡೆಯಿಂದ ಸುಧಾರಿತ ತಂತ್ರಜ್ಞಾನ ಮತ್ತು ಬಹು ಆಯಾಮ ಪರಿಣತಿಯ ಮೂಲಕ ವೈದ್ಯಕೀಯ ಫಲಿತಾಂಶ ಹೆಚ್ಚಿಸುವ ನಮ್ಮ ನಿರಂತರ ಪ್ರಯತ್ನಕ್ಕೆ ಸಹಕಾರಿಯಾಗಿದೆ. ರೋಗಿಗಳಿಗೆ ಇಲ್ಲಿ ವಿಶ್ವ ದರ್ಜೆಯ ಆರೈಕೆ ಲಭಿಸಲಿದೆ.