

ಉಡುಪಿ: ದೆಹಲಿ ಮಹಾನಗರ ಪಾಲಿಕೆ ಮತ್ತು ದೆಹಲಿ ಅಭಿವೃದ್ಧಿ ಪ್ರಾಧಿಕಾರ ವಸಂತ್ ಕುಂಜ್ ಪ್ರದೇಶದ ಮುಖ್ಯಸರ್ಕಲ್ಗೆ ಜಗದ್ಗುರು ಶ್ರೀ ಮಧ್ವಾಚಾರ್ಯ ವೃತ್ತ ಹಾಗೂ ಸುಮಾರು ಎರಡು ಕಿ.ಮೀ ಮುಖ್ಯರಸ್ತೆಗೆ ಪದ್ಮವಿಭೂಷಣ ಶ್ರೀ ವಿಶ್ವೇಶ ತೀರ್ಥ ಮಾರ್ಗ ಎಂದು ನಾಮಕರಣಗೊಳಿಸಿದ್ದು, ಗುರುವಾರ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು.
ದೆಹಲಿ ಮೇಯರ್ ಪರ್ವೇಶ್ ವಾಹಿ, ಸ್ಥಳಿಯ ಶಾಸಕ ಕೈಲಾಶ್ ಗೆಹ್ಲೋಟ್ , ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರಾಜೀವ್ ಬಬ್ಬರ್, ಕಾಪೋರ್ರೇಟ್ ಇಂದ್ರಜಿತ್ ಸೆರಾವತ್, ವಾಸುದೇವ ಭಟ್ ಪೆರಂಪಳ್ಳಿ, ಡಾ.ವಿಠೋಬಾಚಾರ್ಯ, ಕೃಷ್ಣಮೂರ್ತಿ ಭಟ್, ಅಶ್ವಿನ್ ಕುಮಾರ್ ಉಪಸ್ಥಿತರಿದ್ದರು.