ಬಾಲ್ಯದಲ್ಲೇ ಗುರುತಿಸಿ ಮಕ್ಕಳಲ್ಲಿರುವ ಪ್ರತಿಭೆ

ಐವರು ಬಾಲಪ್ರತಿಭೆಗಳಿಗೆ 'ಪ್ರಮಾ' ಹಾಗೂ ಪ್ರಸನ್ನ ಭಟ್​ ಅವರಿಗೆ 'ಶ್ರೇಯಸ್​' ಪ್ರಶಸ್ತಿ ಪ್ರದಾನ ಮಾಡಲಾಯಿತು. ಉದಯಶಂಕರ ಎಚ್​.ಎನ್​., ಡಾ. ಬಾಲಚಂದ್ರ ಆಚಾರ್​, ವಿ. ಪವನಾ ಬಿ. ಆಚಾರ್​, ಡಾ. ಅನಸೂಯಾ ದೇವಿ, ನರಸಿಂಹ ಭಟ್​, ಪ್ರೊ. ಸದಾಶಿವ ರಾವ್​ ಇದ್ದರು.
ಐವರು ಬಾಲಪ್ರತಿಭೆಗಳಿಗೆ 'ಪ್ರಮಾ' ಹಾಗೂ ಪ್ರಸನ್ನ ಭಟ್​ ಅವರಿಗೆ 'ಶ್ರೇಯಸ್​' ಪ್ರಶಸ್ತಿ ಪ್ರದಾನ ಮಾಡಲಾಯಿತು. ಉದಯಶಂಕರ ಎಚ್​.ಎನ್​., ಡಾ. ಬಾಲಚಂದ್ರ ಆಚಾರ್​, ವಿ. ಪವನಾ ಬಿ. ಆಚಾರ್​, ಡಾ. ಅನಸೂಯಾ ದೇವಿ, ನರಸಿಂಹ ಭಟ್​, ಪ್ರೊ. ಸದಾಶಿವ ರಾವ್​ ಇದ್ದರು.
Published on: 

* ಡಾ. ಉದಯಶಂಕರ ಎಚ್​.ಎನ್​. ಸಲಹೆ

* ಬಾಲ ಸಾಧಕರಿಗೆ 'ಪ್ರಮಾ' ಪ್ರಶಸ್ತಿ ಪ್ರದಾನ

ಉಡುಪಿ: ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಗಳನ್ನು ಬಾಲ್ಯದಲ್ಲಿಯೇ ಗುರುತಿಸುವುದನ್ನು ಪಾಲಕರು, ಶಿಕ್ಷಕರು ಹಾಗೂ ಸಮಾಜವೂ ನಿರಂತರವಾಗಿ ಮಾಡಬೇಕು. ಅವರ ಆಸಕ್ತಿಗೆ ಅನುಗುಣವಾಗಿ ವೇದಿಕೆ ಕಲ್ಪಿಸಿದರೆ ಅವರಲ್ಲಿರುವ ಪ್ರತಿಭೆಗಳು ಸಾಧನೆಯ ಹಾದಿಯಲ್ಲಿ ಸಾಗಲು ಸಾಧ್ಯ ಎಂದು ಭೂಗರ್ಭ ಶಾಸ್ತ್ರಜ್ಞ ಡಾ. ಉದಯಶಂಕರ ಎಚ್​.ಎನ್​. ಅಭಿಪ್ರಾಯಪಟ್ಟರು.

ಮಣಿಪಾಲದ ಡಾ. ಪಳ್ಳತ್ತಡ್ಕ ಕೇಶವ ಭಟ್​ ಮೆಮೋರಿಯಲ್​ ಟ್ರಸ್ಟ್​ ವತಿಯಿಂದ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಸಹಕಾರದಲ್ಲಿ ಮಣಿಪಾಲ ಡಾಟ್​ ನೆಟ್​ ಸಭಾಂಗಣದಲ್ಲಿ ಆಯೋಜಿಸಿದ್ದ 13ನೆ ವರ್ಷದ 'ಪ್ರಮಾ' ಮತ್ತು 'ಶ್ರೇಯಸ್​' ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಡಾ. ಪಳ್ಳತ್ತಡ್ಕ ಕೇಶವ ಭಟ್​ ಖ್ಯಾತ ಸಸ್ಯ ಶಾಸ್ತ್ರಜ್ಞರಾಗಿದ್ದರು. ಮಾರಣಾಂತಿಕ ಕಾಯಿಲೆಯಿಂದ ಬಳಲುವ ಹಲವಾರು ಮಂದಿಗೆ ಸಸ್ಯಗಳಲ್ಲಿರುವ ಧಾತುಗಳಿಂದ ಮೂಲಿಕಾ ಔಷಧ ಸಿದ್ಧಪಡಿಸಿ ಗುಣಪಡಿಸಿರುವುದನ್ನು ಕಂಡಿದ್ದೇನೆ. ಅವರ ಸ್ಮರಣಾರ್ಥ ಪ್ರಶಸ್ತಿ ನೀಡುತ್ತಿರುವುದು ಅರ್ಥಪೂರ್ಣ ಎಂದರು.

ಪ್ರಶಸ್ತಿ ಪ್ರದಾನ

ಬಾಲ ಪ್ರತಿಭೆಗಳಾದ ಶ್ರಾವಣೀ (ಸಂಸ್ಕೃತ), ಗವಿನ್​ ರೇಷಿಮೆ (ವಿಜ್ಞಾನ), ಶ್ರೇಯಾ ಯು. ನಾಯಕ (ವಾದ್ಯ ಸಂಗೀತ), ವಿಶ್ರುತ ಸಾಮಗ (ಚಿತ್ರಕಲೆ), ಸೃಷ್ಟಿ ಆರ್​. (ಯಕ್ಷಗಾನ) ಅವರಿಗೆ 'ಪ್ರಮಾ' ಪ್ರಶಸ್ತಿ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರಥಮ ವರ್ಷದ 'ಶ್ರೇಯಸ್​' ಪ್ರಶಸ್ತಿಯನ್ನು ಖ್ಯಾತ ಪಾಕಶಾಸ್ತ್ರಜ್ಞ ಪ್ರಸನ್ನ ಭಟ್​ ಅವರಿಗೆ ಪ್ರದಾನ ಮಾಡಲಾಯಿತು.

ಟ್ರಸ್ಟ್​ನ ಪದಾಧಿಕಾರಿಗಳಾದ ಡಾ. ಬಾಲಚಂದ್ರ ಆಚಾರ್​, ವಿ. ಪವನಾ ಬಿ. ಆಚಾರ್​, ಡಾ. ಅನಸೂಯಾ ದೇವಿ ಉಪಸ್ಥಿತರಿದ್ದರು.

ಮಣಿಪಾಲ ಡಾಟ್​ ನೆಟ್​ ನಿರ್ದೇಶಕ ನರಸಿಂಹ ಭಟ್​ ಸ್ವಾಗತಿಸಿದರು. ಶಿಲ್ಪಾ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟಿ ಪ್ರೊ. ಸದಾಶಿವ ರಾವ್​ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ 'ಪ್ರಮಾ' ಪ್ರಶಸ್ತಿ ಪುರಸ್ಕೃತರಿಂದ ಪ್ರತಿಭಾ ಪ್ರದರ್ಶನ ನಡೆಯಿತು.