

ಕಾರ್ಕಳ: ನದಿಗಳು ನಿರಂತರವಾಗಿ ಹರಿದು ಸಸ್ಯ, ಪ್ರಕೃತಿ ಮತ್ತು ಪ್ರಾಣಿಗಳನ್ನು ಪೊರೆಯುತ್ತವೆ. ಗಿಡ, ಮರಗಳು ಹೂ ಹಣ್ಣುಗಳ ಜತೆ ನೆರಳನ್ನು ನೀಡಿ ಲೋಕವನ್ನು ಪೊರೆಯುತ್ತವೆ. ಆಕಳು ಜಗತ್ತಿಗೆ ಅಮೃತವನ್ನು ನೀಡಿ ಕೃತಾರ್ಥವಾಗುತ್ತದೆ. ಅದೇ ರೀತಿ ಪರೋಪಕಾರ ಮೂಲಕ ಮನುಷ್ಯ ತನ್ನ ಜೀವಿತಕ್ಕೆ ನಿಜವಾದ ಅರ್ಥ ನೀಡಬಹುದು ಎಂದು ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದ ಅರ್ಚಕ ತಂತ್ರಿ ಗುರುದತ್ ಭಟ್ ಹೇಳಿದರು.
ಕಾರ್ಕಳ ಕಾಶೀ ಮಠ ಸಭಾಭವನದಲ್ಲಿ ಹೊಸಸಂಜೆ ಬಳಗ ವತಿಯಿಂದ ಗೌಡ ಸಾರಸ್ವತ ಬ್ರಾಹ್ಮಣ ಸವಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ, ಆರ್ಥಿಕ ದುರ್ಬಲರಿಗೆ, ಅನಾರೋಗ್ಯ ಪೀಡಿತರಿಗೆ 6.50 ಲಕ್ಷ ರೂ. ನೆರವು ವಿತರಣೆ ಕಾರ್ಯಕ್ರಮದಲ್ಲಿ ವಾತನಾಡಿದರು.
ವಿಶ್ರಾಂತ ಲೆಕ್ಕ ಪರಿಶೋಧಕ ಕಾರ್ಕಳ ಕಮಲಾಕ್ಷ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ಬೋಳ ಪ್ರಶಾಂತ ಕಾಮತ್, ಗಣೇಶ ಕಾಮತ್, ಜಗದೀಶ ಮಲ್ಯ, ಕಮಲಾಕ್ಷ ನಾಯಕ್ ಜಾರ್ಕಳ, ವೈದ್ಯ ಡಾ.ಕಾರ್ತಿಕ್ ರಾವ್, ಜಿಎಸ್‌ಬಿ ಸಭಾ ಅಧ್ಯಕ್ಷ ನಾರಾಯಣ ನಾಯಕ್, ಸುಬ್ರಾಯ ಕಾಮತ್ ಬಂಟ್ವಾಳ, ಸವಾಜ ಸೇವಕ ವಿಶ್ವನಾಥ ಭಟ್ ಮೊದಲಾದವರಿದ್ದರು.
ದೇವಿಪ್ರಸಾದ್ ಶೆಣೈ ಸ್ವಾಗತಿಸಿದರು. ಹೊಸಸಂಜೆ ಬಳಗ ಅಧ್ಯಕ್ಷ ಆರ್.ದೇವರಾಯ ಪ್ರಭು ಪ್ರಸ್ತಾವಿಸಿದರು. ವ್ನಿೇಶ್ ಪೈ ನಿರೂಪಿಸಿದರು. ಸೌಭಾಗ್ಯಾ ಎಸ್.ಕಿಣಿ ವಂದಿಸಿದರು.