ಬೈಕ್ ಡಿಕ್ಕಿಯಾಗಿ ಹೋಟೆಲ್ ಉದ್ಯಮಿ ಸಾವು

ಬೆಂಗಳೂರಿನ ಬಿಡದಿ ಸಮೀಪ ದುರ್ಘಟನೆ
ಉದ್ಯಮಿ ವಿಶ್ವನಾಥ ಎಚ್.
ಉದ್ಯಮಿ ವಿಶ್ವನಾಥ ಎಚ್.
Published on: 

ಕೋಟ: ಬೆಂಗಳೂರಿನ ಬಿಡದಿ ಸಮೀಪ ನಡೆದ ಬೈಕ್‌ಗಳ ಮುಖಾಮುಖಿ ಡಿಕ್ಕಿಯಾಗಿ ಕೋಟ ಪಡುಕೆರೆ ಜಟ್ಟಿಗೇಶ್ವರ ದೈವಸ್ಥಾನ ಸಮೀಪದ ನಿವಾಸಿ, ಹೋಟೆಲ್ ಉದ್ಯಮಿ ವಿಶ್ವನಾಥ ಎಚ್.(55) ಮೃತಪಟ್ಟಿದ್ದಾರೆ.

ಗುರುವಾರ ರಾತ್ರಿ ಹೋಟೆಲ್‌ನ ದೈನಂದಿನ ವ್ಯವಹಾರ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭ ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.