ಗುಡ್ಡಟ್ಟು ಶ್ರೀ ವಿನಾಯಕ ದೇವಳ ವರ್ಧಂತಿ ಉತ್ಸವ ಸಂಪನ್ನ

ಕುಂದಾಪುರ ತಾಲೂಕು ಯಡಾಡಿ ಮತ್ಯಾಡಿ ಗ್ರಾಮದ ಗುಡ್ಡಟ್ಟು ಶ್ರೀ ವಿನಾಯಕ ದೇವಸ್ಥಾನದಲ್ಲಿ ವರ್ಧಂತಿ ಉತ್ಸವ ವಿಜೃಂಭಣೆಯಿಂದ ನಡೆಯಿತು.
ಕುಂದಾಪುರ ತಾಲೂಕು ಯಡಾಡಿ ಮತ್ಯಾಡಿ ಗ್ರಾಮದ ಗುಡ್ಡಟ್ಟು ಶ್ರೀ ವಿನಾಯಕ ದೇವಸ್ಥಾನದಲ್ಲಿ ವರ್ಧಂತಿ ಉತ್ಸವ ವಿಜೃಂಭಣೆಯಿಂದ ನಡೆಯಿತು.
Published on

ಕೋಟ:ಕುಂದಾಪುರದಯಡಾಡಿ ಮತ್ಯಾಡಿ ಗ್ರಾಮದ ಗುಡ್ಡಟ್ಟುಶ್ರೀ ವಿನಾಯಕ ದೇವಸ್ಥಾನದಲ್ಲಿ ವರ್ಧಂತಿ ಉತ್ಸವವಿಜೃಂಭಣೆಯಿಂದ ನಡೆಯಿತು.

ಬೆಳಗ್ಗೆ1111ಕಾಯಿಗಣಪತಿಯಾಗ,ದುರ್ಗಾಹೋಮ,ಸಹಸ್ರಾವರ್ತನಗಣಪತಿ ಅಥರ್ವಶೀರ್ಷ ಪಾರಾಯಣ,ಆಯರ್ಕೊಡ,ಮಹಾಪೂಜೆನೆರವೇರಿಸಲಾಯಿತು.ದೇವಾಲಯವನ್ನುಹೂವುಗಳಿಂದ ಅಲಂಕರಿಸಲಾಗಿತ್ತು.

ಮಧ್ಯಾಹ್ನ11.30ಕ್ಕೆಗಣಪತಿ ಹೋಮ ಪೂರ್ಣಾಹುತಿ,ನಂತರಆಯರ್ಕೊಡ ಸೇವೆ ಮತ್ತು ಮಹಾಪೂಜೆ,ದೇವರಉತ್ಸವ ನಡೆಯಿತು.ಮಹಾಅನ್ನಸಂತರ್ಪಣೆಯಲ್ಲಿ ಐದುಸಾವಿರಕ್ಕೂ ಅಧಿಕ ಮಂದಿ ಭೋಜನಪ್ರಸಾದ ಸ್ವೀಕರಿಸಿದರು.ವೇದಮೂರ್ತಿಲಕ್ಷ್ಮೀನಾರಾಯಣ ಅಡಿಗ ಮತ್ತುವೇದಮೂರ್ತಿ ಗಣಪತಿ ಅಡಿಗ ತಂಡದಿಂದಧಾರ್ಮಿಕ ವಿಧಿ ವಿಧಾನ ನೆರವೇರಿತು.

ದೇವಾಲಯದಆನುವಂಶಿಕ ಧರ್ಮದರ್ಶಿ ಅನಂತಪದ್ಮನಾಭಅಡಿಗ,ಸುಶೀಲಮ್ಮ,ಗಂಗಾಧರಅಡಿಗ,ಪರ್ಯಾಯಅರ್ಚಕ ಚಂದ್ರಶೇಖರ ಅಡಿಗ ಇನ್ನಿತರರುಹಾಗೂ ಅರ್ಚಕ ವೃಂದದವರು,ಗ್ರಾಮಸ್ಥರುಉಪಸ್ಥಿತರಿದ್ದರು.

ಸಂಜೆಯಡಾಡಿಯ ಶ್ರೀ ವಿನಾಯಕ ಭಜನಾಮಂಡಳಿಯಿಂದ ಕುಣಿತ ಭಜನೆ,ರಾತ್ರಿ9ಗಂಟೆಸಂಕಷ್ಟಹರ ಚತುರ್ಥಿ ಪೂಜೆ ನಂತರಪ್ರಸಾದ ವಿತರಣೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net