ಮರಕ್ಕೆ ಗೂಡ್ಸ್ ಟೆಂಪೋ ಡಿಕ್ಕಿ, ಚಾಲಕ ಮೃತ್ಯು

ಹೆಬ್ರಿ ತಾಲೂಕಿನ ಅಂಡಾರಿನಲ್ಲಿ ದುರ್ಘಟನೆ
ಮರಕ್ಕೆ ಡಿಕ್ಕಿಯಾಗಿ ನುಜ್ಜುಗುಜ್ಜಾದ ಗೂಡ್ಸ್ ಟೆಂಪೋ ವಾಹನ.
ಮರಕ್ಕೆ ಡಿಕ್ಕಿಯಾಗಿ ನುಜ್ಜುಗುಜ್ಜಾದ ಗೂಡ್ಸ್ ಟೆಂಪೋ ವಾಹನ.
Published on: 

ಹೆಬ್ರಿ: ಹೆಬ್ರಿ ತಾಲೂಕಿನ ಅಂಡಾರಿನಲ್ಲಿ ಶನಿವಾರ ಗೂಡ್ಸ್ ಟೆಂಪೋ ಮರಕ್ಕೆ ಡಿಕ್ಕಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಂಡಾರಿನಿಂದ ಕಾಡುಹೊಳೆ ಮಾರ್ಗವಾಗಿ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಮರಕ್ಕೆ ಡಿಕ್ಕಿಯಾಗಿ ಗೂಡ್ಸ್ ಟೆಂಪೋ ಚಾಲಕ ಕಡ್ತಲ ಸೀತಾರಾಮ ರೈ(60) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಹಿಳಾ ಪ್ರಯಾಣಿಕರಾದ ವಸಂತಿ, ಲೀಲಾವತಿ, ಶಾಲಿನಿ, ಶೋಭಾ ಹಾಗೂ ಪ್ರೇಮ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಡ್ತಲದ ಹಪ್ಪನಡ್ಕ ಸದಾನಂದ ಶೆಟ್ಟಿ ಎಂಬುವರ ಅಡಿಕೆ ತೋಟದ ಕೆಲಸಕ್ಕೆ ಕಾರ್ಮಿಕರನ್ನು ಕರೆದೊಯ್ಯುವ ವೇಳೆ ಅಪಘಾತ ಸಂಭವಿಸಿದ್ದು, ವಾಹನ ಚಾಲನೆ ವೇಳೆ ತೀವ್ರ ಹೃದಯಾಘಾತದಿಂದ ವಾಹನ ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿಯಾಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅಜೆಕಾರು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.