ಉಡುಪಿ: ವಂದೇ ಮಾತರಂ ಎಂದಾಗ ಇಡೀ ದೇಶವೇ ಎದ್ದು ನಿಲ್ಲಬೇಕು. ಏಕೆಂದರೆ, ಅದು ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿರುವ ರಾಷ್ಟ್ರಭಕ್ತರ ಮಂತ್ರ. ವಂದೇ ಮಾತರಂ ಕುರಿತು ಜನಜಾಗೃತಿ ಅಭಿಯಾನ ಕೈಗೊಂಡಿರುವ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕುಂದಾಪುರದ ಶಾಸಕ ಕಿರಣಕುಮಾರ್ ಕೊಡ್ಗಿ ಅವರೊಂದಿಗೆ ನಾನೂ ಪಾಲ್ಗೊಳ್ಳುತ್ತೇನೆ ಎಂದು ಸ್ವಾತಂತ್ರ್ಯ ಹೋರಾಟಗಾರ ಮಟ್ಟಾರು ವಿಠ್ಠಲ್ ಕಿಣಿ ತಿಳಿಸಿದರು.