

ಸಿದ್ದಾಪುರ ಭಾಗದಲ್ಲಿ ಬಹು ಬೇಡಿಕೆ ಇದ್ದ ಅಗ್ನಿಶಾಮಕ ಠಾಣೆಗೆ ಜಿಲ್ಲಾಧಿಕಾರಿಗಳ ಮೂಲಕ ಜಾಗ ಮಂಜೂರು ವಾಡಲಾಗಿದೆ. ಮುಂದಿನ ದಿನಗಳಲ್ಲಿ ಆ ಭಾಗದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುಸಜ್ಜಿತ ಅಗ್ನಿಶಾಮಕ ಠಾಣೆ ನಿರ್ವಾಣಕ್ಕೆ ಪ್ರಯತ್ನಿಸಲಾಗುವುದು.
ಪ್ರಸ್ತುತ ಅಗ್ನಿಶಾಮಕ ಠಾಣೆಗೆ ಕಾಯ್ದಿರಿಸಿದ ಜಾಗ ಸಿದ್ದಾಪುರ ಪೇಟೆಯಿಂದ 350-400 ಮೀಟರ್ ಅಂತರದಲ್ಲಿದೆ. ಹೀಗಾಗಿ ಹತ್ತಾರು ಗ್ರಾಮಗಳಿಗೆ ಅನುಕೂಲವಾಗುತ್ತದೆ. ಪಶ್ಚಿಮ ಟ್ಟದ ತಪ್ಪಲಿನಲ್ಲಿರುವ ಬಾಳೆಬರೆ ಘಾಟಿ, ಇನ್ನೂ ಅನೇಕ ಕಡೆಗಳಿಗೆ ಅಗತ್ಯ ಸಂದರ್ಭದಲ್ಲಿ ಸೇವೆ ಸಿಗಲಿದೆ. ಸಂಬಂಧಿತ ಇಲಾಖೆಯಿಂದ ಶೀಘ್ರ ಠಾಣೆ ನಿರ್ವಾಣ ಕಾರ್ಯ ನಡೆಯಬೇಕು.