ಮಲ್ಪೆ, ಪೆರಂಪಳ್ಳಿಯಲ್ಲಿ ಬೆಂಕಿ ಅವಘಡ

ಉಡುಪಿಯ ಪೆರಂಪಳ್ಳಿ ಬಳಿ ಖಾಲಿ ಜಾಗದಲ್ಲಿ ಆವರಿಸಿದ್ದ ಬೆಂಕಿ ನಂದಿಸುತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿ.
ಉಡುಪಿಯ ಪೆರಂಪಳ್ಳಿ ಬಳಿ ಖಾಲಿ ಜಾಗದಲ್ಲಿ ಆವರಿಸಿದ್ದ ಬೆಂಕಿ ನಂದಿಸುತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿ.
Published on

* ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ

ಉಡುಪಿ: ಪ್ರತ್ಯೇಕ ಎರಡು ಕಡೆಗಳಲ್ಲಿ ಶುಕ್ರವಾರ (ಫೆ.27) ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದು ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಉಡುಪಿಯ ಪೆರಂಪಳ್ಳಿ ಚರ್ಚ್​ ಸಮೀಪದ ರೈಲ್ವೆ ಬ್ರಿಡ್ಜ್​ ಬಳಿ ಇರುವ ಖಾಲಿ ಜಾಗದಲ್ಲಿ ಸುಮಾರು ಅರ್ಧ ಎಕರೆ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬಿಸಿಲಿನ ಪ್ರಖರತೆಯಿಂದಾಗಿ ಹುಲ್ಲು ಹಾಗೂ ಸಣ್ಣ ಗಿಡಗಳಳು ಒಣಗಿದ್ದು, ಬೆಂಕಿ ವ್ಯಾಪಕವಾಗಿ ಆವರಿಸತೊಡಗಿತ್ತು. ಈ ಸ್ಥಳದಲ್ಲಿ ಯಾರೋ ಬೀಡಿ ಅಥವಾ ಸಿಗರೇಟ್​ ಸೇದಿ ಎಸೆದಿದ್ದರಿಂದ ಬೆಂಕಿ ಬಿದ್ದಿದೆ ಎನ್ನಲಾಗಿದೆ. ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕಾಗಮಿಸಿದ ಉಡುಪಿಯ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಬೆಂಕಿ ನಂದಿಸಿದರು.

ಮಲ್ಪೆಯಲ್ಲಿ

ಮಲ್ಪೆ ಸಮೀಪದಲ್ಲಿರುವ ಹೋಮ್​ ಸ್ಟೇ ಒಂದರಲ್ಲಿ ವಿದ್ಯುತ್​ ಶಾರ್ಟ್​ ಸಕ್ಯೂರ್ಟ್​ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಒಳಾಂಗಣದಲ್ಲಿ ಭಾರಿ ಹಾನಿಯಾಗಿದೆ. ಯಾವುದೇ ಜೀವಾಪಾಯ ಉಂಟಾಗಿಲ್ಲ. ಎಸಿ ಸ್ಫೋಟಗೊಂಡ ಬೆಂಕಿ ಕಾಣಿಸಿಕೊಂಡಿದೆ ಎಂಬ ಮಾಹಿತಿಯಿದೆ. ಮಲ್ಪೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿದರು. ಆದರೆ, ಕಾರ್ಯಾಚರಣೆಗೂ ಮೊದಲೇ ಹೋಮ್​ ಸ್ಟೇ ಒಳಗಿನ ಎಲ್ಲ ವಿದ್ಯುತ್​ ಪರಿಕರಗಳು ಬೆಂಕಿಗೆ ಆಹುತಿಯಾಗಿದ್ದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net