ನಮ್ಮೆಲ್ಲರ ಬದುಕಿಗೆ ಭೂಮಿಯ ಸಂರಕ್ಷಣೆ ಅತ್ಯಗತ್ಯ

ಉಡುಪಿಯ ಜೋಡುಕಟ್ಟೆಯಲ್ಲಿ ಬಂಟಕಲ್​ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ವಿದ್ಯಾಲಯದಿಂದ ಆಯೋಜಿಸಿದ್ದ ಪರಿಸರ ರಕ್ಷಣೆ ಜಾಥಾಕ್ಕೆ ರಾಧಾಕೃಷ್ಣ ಎಸ್​. ಐತಾಳ್​ ಚಾಲನೆ ನೀಡಿದರು. ಡಾ. ನಾಗರಾಜ ಭಟ್ಟ, ದೀಪಿಕಾ ಬಿ.ವಿ., ಸುರೇಶ್​ ಕೋಟ್ಯಾನ್​, ಸಚಿನ್​ ಪ್ರಭು ಇದ್ದರು.
ಉಡುಪಿಯ ಜೋಡುಕಟ್ಟೆಯಲ್ಲಿ ಬಂಟಕಲ್​ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ವಿದ್ಯಾಲಯದಿಂದ ಆಯೋಜಿಸಿದ್ದ ಪರಿಸರ ರಕ್ಷಣೆ ಜಾಥಾಕ್ಕೆ ರಾಧಾಕೃಷ್ಣ ಎಸ್​. ಐತಾಳ್​ ಚಾಲನೆ ನೀಡಿದರು. ಡಾ. ನಾಗರಾಜ ಭಟ್ಟ, ದೀಪಿಕಾ ಬಿ.ವಿ., ಸುರೇಶ್​ ಕೋಟ್ಯಾನ್​, ಸಚಿನ್​ ಪ್ರಭು ಇದ್ದರು.
Published on

* ರಾಧಾಕೃಷ್ಣ ಎಸ್​. ಐತಾಳ್​ ಅಭಿಪ್ರಾಯ

* ಪರಿಸರ ಸಂರಕ್ಷಣೆ ಜಾಗೃತಿ ಜಾಥಾ

ಉಡುಪಿ: ಭೂಮಿ ಮತ್ತು ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ. ಅಲ್ಲದೆ, ಅತ್ಯಂತ ಪ್ರಮುಖವಾದ ಕರ್ತವ್ಯವಾಗಿದೆ. ನಮ್ಮೆಲ್ಲರ ಬದುಕು ಸುರಕ್ಷಿತವಾಗಿ ಸಾಗಲು ಈ ಭೂಮಿ ಮತ್ತು ಪರಿಸರದ ಸಂರಕ್ಷಣೆ ಅತ್ಯಗತ್ಯವಾಗಿ ಆಗಲೇಬೇಕಿದೆ ಎಂದು ಬಂಟಕಲ್​ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಸಿಇಒ ರಾಧಾಕೃಷ್ಣ ಎಸ್​. ಐತಾಳ್​ ಅಭಿಪ್ರಾಯಪಟ್ಟರು.
ವಿಶ್ವ ಭೂ ದಿನದ ನಿಮಿತ್ತ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಉಡುಪಿಯ ಜೋಡುಕಟ್ಟೆಯ ಬಳಿ ಶನಿವಾರ (ಏ.25) ಸಂಜೆ ಆಯೋಜಿಸಿದ್ದ ಪರಿಸರ ಸಂರಕ್ಷಣೆ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿದ್ಯಾರ್ಥಿಗಳಿಗಾಗಿ ಸಪ್ತಾಹ

ಕೇಂದ್ರ ಸರ್ಕಾರದ ಮಾರ್ಗದರ್ಶನದಂತೆ ಈ ಜಾಥಾ ಆಯೋಜಿಸಿದ್ದೇವೆ. ಸಾರ್ವಜನಿಕರಿಗೆ ಪರಿಸರ ರಕ್ಷಣೆಯ ಕುರಿತು ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ. ಪ್ರಮುಖವಾಗಿ ವಿದ್ಯಾರ್ಥಿಗಳಿಗೆ ಇದರ ಅರಿವು ಹೆಚ್ಚು ಇರಬೇಕಿದೆ. ಆ ನಿಟ್ಟಿನಲ್ಲಿ ಕಾಲೇಜಿನಲ್ಲಿ ಪರಿಸರ ಸಪ್ತಾಹ ಕಾರ್ಯಕ್ರಮ ಆಯೋಜಿಸಿದ್ದೇವೆ. ಗಿಡ ನೆಡುವುದು, ಪೋಸ್ಟರ್​ ಮೇಕಿಂಗ್​, ವಿವಿಧ ಸ್ಪರ್ಧೆ, ಸ್ಲೋಗನ್​ ರೈಟಿಂಗ್​, ಪರಿಸರ ತಜ್ಞರಿಂದ ಕಾರ್ಯಾಗಾರ, ಸ್ವಚ್ಛತಾ ಅಭಿಯಾನ ನಡೆಸಿದ್ದೇವೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ನಾಗರಾಜ ಭಟ್ಟ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ದೀಪಿಕಾ ಬಿ.ವಿ., ಸಾರ್ವಜನಿಕ ಸಂಪರ್ಕಾಧಿಕಾರಿ ಸುರೇಶ್​ ಕೋಟ್ಯಾನ್​, ಎನ್​ಎಸ್​ಎಸ್​ ಅಧಿಕಾರಿ ಸಚಿನ್​ ಪ್ರಭು, ಆಫೀಸ್​ ಮೆನೇಜರ್​ ರಾಮದಾಸ್​ ರಾವ್​ ಹಾಗೂ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಉಪಸ್ಥಿತರಿದ್ದರು.

ನಗರದಲ್ಲಿ ಮೆರವಣಿಗೆ

ಉಡುಪಿ ಜೋಡುಕಟ್ಟೆಯಿಂದ ಆರಂಭಗೊಂಡ ಪರಿಸರ ಜಾಗೃತಿ ಜಾಥಾ ಕೋರ್ಟ್​ ರಸ್ತೆ ಮಾರ್ಗವಾಗಿ ನಗರಸಭೆ ಮುಂಭಾಗದಿಂದ ಉಡುಪಿ ಸರ್ವಿಸ್​ ಬಸ್​ ನಿಲ್ದಾಣದವರೆಗೆ ಸಾಗಿತು. ಕಾಲೇಜಿನ 300ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪರಿಸರ ಸಂರಕ್ಷಣೆಯ ವಿವಿಧ ಲಕಗಳು ಹಾಗೂ ಘೋಷಣೆಗಳು ಜನರ ಗಮನ ಸೆಳೆದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net