ಪಕ್ಷಿಗಳಿಗೆ ವಿದ್ಯುತ್ ಆಘಾತ!

ಗಂಗೊಳ್ಳಿ ರಥಬೀದಿಯಲ್ಲಿ ನಿರಂತರ ಅವಘಡ ಮನವಿಗಿಲ್ಲ ಸ್ಪಂದನೆ
ವಿದ್ಯುತ್ ತಂತಿಗಳಿಗೆ ಸಿಲುಕಿ ಪಕ್ಷಿಗಳು ಮೃತಪಟ್ಟಿರುವುದು.
ವಿದ್ಯುತ್ ತಂತಿಗಳಿಗೆ ಸಿಲುಕಿ ಪಕ್ಷಿಗಳು ಮೃತಪಟ್ಟಿರುವುದು.
Published on: 

ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ

ಗಂಗೊಳ್ಳಿ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಕೆರೆಯ ಹಿಂಭಾಗ ಹಾದು ಹೋಗಿರುವ ವಿದ್ಯುತ್ ತಂತಿಗಳು ಹಕ್ಕಿಗಳಿಗೆ ತೀರಾ ಅಪಾಯಕಾರಿಯಾಗಿ ಪರಿಣಮಿಸುತ್ತಿವೆ. ಕಳೆದ ಕೆಲವು ತಿಂಗಳಿನಿಂದ ಈ ಪರಿಸರದಲ್ಲಿ ವಿದ್ಯುತ್ ತಂತಿಗಳಿಂದ ನವಿಲು ಮುಂತಾದ ಪಕ್ಷಿಗಳು ಜೀವ ಕಳೆದುಕೊಂಡಿವೆ.

ಮಲ್ಯರಮಠ ದೇವಸ್ಥಾನದ ಕೆರೆಯ ಹಿಂಭಾಗದ ಜಾಗದಲ್ಲಿ 25ಕ್ಕೂ ಅಧಿಕ ಕುಟುಂಬಗಳು ವಾಸವಾಗಿದ್ದು, ಈ ಪರಿಸರದ ವಾಧವ ದೇವಾಡಿಗ ಎಂಬುವರ ಮನೆ ಮುಂದೆ ಹಾದು ಹೋಗಿರುವ ಎಲ್‌ಟಿ ವಿದ್ಯುತ್ ತಂತಿಗಳು ಒಂದಕ್ಕೊಂದು ತಾಗಿಕೊಂಡಂತೆ ಇದ್ದು, ಪ್ರತಿನಿತ್ಯ ಎನ್ನುವಂತೆ ಕಾಗೆಗಳು, ಹದ್ದುಗಳು, ಪಾರಿವಾಳಗಳು ಹಾಗೂ ನವಿಲುಗಳು ಈ ತಂತಿಗಳಿಂದಾಗಿಯೇ ತಮ್ಮ ಜೀವವನ್ನು ಕಳೆದುಕೊಳ್ಳುತ್ತಿವೆ. ಭಾರಿ ಗಾಳಿ ಮಳೆ ಸಂದರ್ಭ ಈ ಭಾಗದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳು ಒಂದಕ್ಕೊಂದು ತಾಗಿ ವಿದ್ಯುತ್ ಅವಘಡಕ್ಕೆ ಕಾರಣವಾಗುತ್ತಿವೆ. ವಿದ್ಯುತ್ ತಂತಿಗಳಿಂದ ಪಕ್ಷಿಗಳು ಸಾವನ್ನಪ್ಪುತ್ತಿರುವುದು ಮತ್ತು ವಿದ್ಯುತ್ ಆಘಾತದ ಸದ್ದು ಸುತ್ತಲಿನ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ.

ಒಂದಕ್ಕೊಂದು ತಾಗುವಂತೆ ಇರುವ ವಿದ್ಯುತ್ ತಂತಿಗಳನ್ನು ಸರಿಪಡಿಸಿ ಎಂದು ಅಧಿಕಾರಿಗಳಲ್ಲಿ ಮನವಿ ವಾಡಿದಾಗ ಅದಕ್ಕೆ ಪೂರಕವಾದ ಸ್ಪಂದನೆ ದೊರಕಿಲ್ಲ. ಮೆಸ್ಕಾಂ ನಿರ್ಲಕ್ಷ್ಯದಿಂದ ಪಕ್ಷಿಗಳು ಸಾಯುತ್ತಿದ್ದು, ವಿದ್ಯುತ್ ತಂತಿಗಳು ಒಂದಕ್ಕೊಂದು ತಾಗಿ ವಿದ್ಯುತ್ ವ್ಯತ್ಯಯಕ್ಕೂ ಕಾರಣವಾಗುತ್ತಿದೆ. ಆದ್ದರಿಂದ ಪರಿಸರದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳನ್ನು ಸರಿಪಡಿಸುವಲ್ಲಿ ಶೀಘ್ರ ಸೂಕ್ತ ಕ್ರಮಗಳನ್ನು ಕೈಗೊಂಡು ಅನವಶ್ಯಕವಾಗಿ ಸಾಯುವ ಪಕ್ಷಿ ಸಂಕುಲವನ್ನು ಉಳಿಸಿಕೊಡುವಲ್ಲಿ ಸಹಕರಿಸಬೇಕು ಎಂದು ಪರಿಸರ ವಾಸಿಗಳು ಆಗ್ರಹಿಸಿದ್ದಾರೆ.

ಗಂಗೊಳ್ಳಿ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದ ಕೆರೆಯ ಹಿಂಭಾಗ ಹಾದು ಹೋಗಿರುವ ವಿದ್ಯುತ್ ತಂತಿಗಳಿಗೆ ಸಿಲುಕಿ ಅನೇಕ ಪಕ್ಷಿಗಳು ಪ್ರತಿನಿತ್ಯವೆಂಬಂತೆ ಸಾಯುತ್ತಿವೆ. ಮಳೆಗಾಲದಲ್ಲಿ ತಂತಿಗಳು ಒಂದಕ್ಕೊಂದು ತಾಗಿ ವಿದ್ಯುತ್ ಅವಘಡಗಳು ನಡೆಯುತ್ತಿದೆ. ಪರಿಸರದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳನ್ನು ಸರಿಪಡಿಸಿ ಅನವಶ್ಯಕವಾಗಿ ಸಾಯುವ ಪಕ್ಷಿ ಸಂಕುಲವನ್ನು ಉಳಿಸಿಕೊಡುವಲ್ಲಿ ಸಹಕರಿಸಬೇಕು.
ನರೇಂದ್ರ ಎಸ್.ಗಂಗೊಳ್ಳಿ ಗಂಗೊಳ್ಳಿ ಉಪನ್ಯಾಸಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net