

* ಮಣಿಪಾಲ ಠಾಣೆ ಪೊಲೀಸರ ದಾಳಿ
ಮಣಿಪಾಲದ ವಿದ್ಯಾರತ್ನ ನಗರದ ಡಿಸಿ ಕಚೇರಿ ರಸ್ತೆ ಮಾರ್ಗದಲ್ಲಿರುವ ಐರಿಸ್ ಕಟ್ಟಡದ 1ನೇ ಮಹಡಿಯಲ್ಲಿರುವ ಡಿಆರ್ಎನ್ಕೆ ಲ್ಯಾಬ್ ಹೆಸರಿನ ಕೆಫೆಯಲ್ಲಿ ಅಕ್ರಮವಾಗಿ ಹುಕ್ಕಾ ಸೇದುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಆ.6ರಂದು ರಾತ್ರಿ ಪಿಎಸ್ಐ ವಾಮನ್ ಹಾಗೂ ಹೆಡ್ ಕಾನ್ಸ್ಟೇಬಲ್ಗಳಾದ ಸುರೇಶ್ ಶೆಟ್ಟಿ, ಚೇತನ್ ಕುಮಾರ್, ಸಿಬ್ಬಂದಿ ರವಿರಾಜ್, ಉಮೇಶ್ ದಾಳಿ ನಡೆಸಿದ್ದರು. ಕೆಫೆಯೊಳಗೆ ಪರಿಶೀಲಿಸಿದಾಗ 8 ಹುಡುಗರು ಕುರ್ಚಿಯಲ್ಲಿ ಕುಳಿತು ಟೇಬಲ್ನ ಮೇಲೆ ಹುಕ್ಕಾ ಶೀಸೆಗಳನ್ನು ಇಟ್ಟುಕೊಂಡು ಹುಕ್ಕಾ ಸೇವಿಸುತ್ತಿದ್ದರು.