ಕಠಿಣ ಪರಿಶ್ರಮದಿಂದ ಅಲಂಕರಿಸಿ ಉನ್ನತ ಸ್ಥಾನ

ಉಡುಪಿಯ ಪೂರ್ಣಪ್ರಜ್ಞ ಕಾಲೇಜ್​ನಲ್ಲಿ ಆಯೋಜಿಸಿದ್ದ 'ಪೂರ್ಣಾರಂಭ' ಕಾರ್ಯಕ್ರಮವನ್ನು ಡಾ. ಸಂಗೀತಾ ಹೊಳ್ಳ ಉದ್ಘಾಟಿಸಿದರು. ಡಾ. ಜಿ.ಎಸ್​. ಚಂದ್ರಶೇಖರ, ಟಿ.ಪ್ರಶಾಂತ ಹೊಳ್ಳ, ಡಾ. ಪಿ.ಎಸ್​. ಐತಾಳ, ಪ್ರೊ. ವೇಣುಗೋಪಾಲ ರಾವ್​ ಎ.ಎಸ್​., ಡಾ. ಭಾರತಿ ಕಾರಂತ ಇದ್ದರು.
ಉಡುಪಿಯ ಪೂರ್ಣಪ್ರಜ್ಞ ಕಾಲೇಜ್​ನಲ್ಲಿ ಆಯೋಜಿಸಿದ್ದ 'ಪೂರ್ಣಾರಂಭ' ಕಾರ್ಯಕ್ರಮವನ್ನು ಡಾ. ಸಂಗೀತಾ ಹೊಳ್ಳ ಉದ್ಘಾಟಿಸಿದರು. ಡಾ. ಜಿ.ಎಸ್​. ಚಂದ್ರಶೇಖರ, ಟಿ.ಪ್ರಶಾಂತ ಹೊಳ್ಳ, ಡಾ. ಪಿ.ಎಸ್​. ಐತಾಳ, ಪ್ರೊ. ವೇಣುಗೋಪಾಲ ರಾವ್​ ಎ.ಎಸ್​., ಡಾ. ಭಾರತಿ ಕಾರಂತ ಇದ್ದರು.
Published on: 

* ಡಾ. ಜಿ.ಎಸ್​. ಚಂದ್ರಶೇಖರ ಸಲಹೆ

* 'ಪೂರ್ಣಾರಂಭ' ಕಾರ್ಯಕ್ರಮ ಉದ್ಘಾಟನೆ

ಉಡುಪಿ: ತಂತ್ರಜ್ಞಾನ ಎಷ್ಟೇ ಬೆಳವಣಿಗೆ ಹೊಂದಿದರೂ ಉದ್ಯೋಗಾವಕಾಶಗಳಿಗೆ ಯಾವುದೇ ಕೊರತೆ ಇಲ್ಲ. ಆದರೆ, ಸರಿಯಾದ ಮನೋಭಾವ ಇಂದಿನ ಅಗತ್ಯ. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ತಮ್ಮನ್ನು ತಾವೇ ಬೆಳೆಸಿಕೊಂಡು ಜೀವನದಲ್ಲಿ ಉನ್ನತ ಸ್ಥಾನಕ್ಕೇರಬೇಕು ಎಂದು ಪೂರ್ಣಪ್ರಜ್ಞ ಇನ್​ಸ್ಟಿಟ್ಯೂಟ್​ ಆಫ್​ ಮ್ಯಾನೇಜ್​ಮೆಂಟ್​ (ಪಿಐಎಂ)ನ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ. ಜಿ.ಎಸ್​. ಚಂದ್ರಶೇಖರ ಸಲಹೆ ನೀಡಿದರು.

ಉಡುಪಿಯ ಪೂರ್ಣಪ್ರಜ್ಞ ಕಾಲೇಜ್​ (ಸ್ವಾಯತ್ತ)ನ ಪ್ರಜ್ಞಾ ಸಭಾಂಗಣದಲ್ಲಿ ಆಯೋಜಿಸಿದ್ದ 2026&28ನೇ ಸಾಲಿನ ಎಂಬಿಎ ಮತ್ತು ಎಂಸಿಎ ವಿದ್ಯಾರ್ಥಿ ತಂಡಗಳ ಪರಿಚಯ ಮತ್ತು ಸೇರ್ಪಡೆಯ 'ಪೂರ್ಣಾರಂಭ' ಕಾರ್ಯಕ್ರಮದಲ್ಲಿ ಮಾತನಾಡಿದರು.

ನೂತನ ವಿದ್ಯಾರ್ಥಿಗಳಿಗೆ ಡಾ. ಪಿ.ಎಸ್​. ಐತಾಳ ಪ್ರತಿಜ್ಞಾವಿಧಿ ಬೋಧಿಸಿದರು.
ನೂತನ ವಿದ್ಯಾರ್ಥಿಗಳಿಗೆ ಡಾ. ಪಿ.ಎಸ್​. ಐತಾಳ ಪ್ರತಿಜ್ಞಾವಿಧಿ ಬೋಧಿಸಿದರು.

ಸಂಸ್ಕೃತಿಯೇ ಪ್ರೇರಣೆ

ಕಾರ್ಯಕ್ರಮ ಉದ್ಘಾಟಿಸಿದ ಎಚ್​ಪಿ ಸಂಸ್ಥೆಯ ಹಿರಿಯ ಡೇಟಾ ಸೈಂಟಿಸ್ಟ್​ ಹಾಗೂ ಪಿಐಎಂನ ಹಳೆಯ ವಿದ್ಯಾರ್ಥಿನಿ ಡಾ. ಸಂಗೀತಾ ಹೊಳ್ಳ ಮಾತನಾಡಿ, ನನ್ನ ಭವಿಷ್ಯದ ಬೆಳವಣಿಗೆಯಲ್ಲಿ ಪಿಐಎಂ ಪಾತ್ರ ಸದಾ ಸ್ಮರಣೀಯ. ಈ ಸಂಸ್ಥೆಯ ಸಂಸ್ಕೃತಿಯೇ ನನ್ನೆಲ್ಲ ಸಾಧನೆಗಳಿಗೆ ಪ್ರೇರಣೆಯಾಯಿತು ಎಂದರು.

ಆಡಳಿತ ಮಂಡಳಿಯ ಗೌರವ ಕೋಶಾಧಿಕಾರಿ ಸಿಎ ಟಿ.ಪ್ರಶಾಂತ ಹೊಳ್ಳ, ಪ್ರಾಂಶುಪಾಲ ಡಾ. ರಾಮು ಎಲ್. ಮಾತನಾಡಿದರು. ಎಂಬಿಎ ಕಾರ್ಯಕ್ರಮ ಸಂಯೋಜಕಿ ಡಾ. ಭಾರತಿ ಕಾರಂತ ಹಾಗೂ ಎಂಸಿಎ ಕಾರ್ಯಕ್ರಮ ಸಂಯೋಜಕ ಪ್ರೊ. ವೇಣುಗೋಪಾಲ ರಾವ್​ ಎ.ಎಸ್​. ತಮ್ಮ ವಿಭಾಗಗಳ ಕುರಿತು ಮಾಹಿತಿ ನೀಡಿದರು.

ದ್ವಿತೀಯ ಎಂಬಿಎ ವಿದ್ಯಾರ್ಥಿನಿ ನೇಹಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಸಂಸ್ಥೆಯ ನಿರ್ದೇಶಕ ಡಾ. ಪಿ.ಎಸ್​. ಐತಾಳ ಸ್ವಾಗತಿಸಿ, ನೂತನ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಡಾ. ಭರತ ವಿ. ಅತಿಥಿಗಳನ್ನು ಗೌರವಿಸಿದರು. ಪ್ರಾಧ್ಯಾಪಕ ಡಾ. ನವೀನ ಕೆ.ಆರ್​. ವಂದಿಸಿದರು. ಪ್ರೊ. ವೆಂಕಟೇಶ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net