ವೈದ್ಯರಲ್ಲಿ ಸಾಹಿತ್ಯ ಭಾವವಿದ್ದರೆ ಚಿಕಿತ್ಸೆಗೂ ಸಹಕಾರಿ

ಉಡುಪಿಯ ಅಂಬಲಪಾಡಿಯಲ್ಲಿ ಆಯೋಜಿಸಿದ್ದ ಡುಂಡಿ-70 ಅಭಿನಂದನಾ ಸಮಾರಂಭದಲ್ಲಿ ಲಕ್ಷ್ಮಣ್ ವಿ.ಎ. ಅವರಿಗೆ ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ ನೀಡಲಾಯಿತು. ಡಾ. ನೀ.ಬಿ. ವಿಜಯ ಬಲ್ಲಾಳ್. ಎಚ್. ಡುಂಡಿರಾಜ್, ಪೂರ್ಣಿಮಾ, ಡಾ. ನಾರಾಯಣ ಮಡಿ, ರವಿರಾಜ್ ಎಚ್‌.ಪಿ., ನಾಗರಾಜ್ ಹೆಬ್ಬಾರ್, ಜನಾರ್ದನ್ ಕೊಡವೂರು, ಪೂರ್ಣಿಮಾ ಜನಾರ್ದನ್, ರಾಘವೇಂದ್ರ ಪ್ರಭು ಕರ್ವಾಲ್ ಇದ್ದರು.
ಉಡುಪಿಯ ಅಂಬಲಪಾಡಿಯಲ್ಲಿ ಆಯೋಜಿಸಿದ್ದ ಡುಂಡಿ-70 ಅಭಿನಂದನಾ ಸಮಾರಂಭದಲ್ಲಿ ಲಕ್ಷ್ಮಣ್ ವಿ.ಎ. ಅವರಿಗೆ ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ ನೀಡಲಾಯಿತು. ಡಾ. ನೀ.ಬಿ. ವಿಜಯ ಬಲ್ಲಾಳ್. ಎಚ್. ಡುಂಡಿರಾಜ್, ಪೂರ್ಣಿಮಾ, ಡಾ. ನಾರಾಯಣ ಮಡಿ, ರವಿರಾಜ್ ಎಚ್‌.ಪಿ., ನಾಗರಾಜ್ ಹೆಬ್ಬಾರ್, ಜನಾರ್ದನ್ ಕೊಡವೂರು, ಪೂರ್ಣಿಮಾ ಜನಾರ್ದನ್, ರಾಘವೇಂದ್ರ ಪ್ರಭು ಕರ್ವಾಲ್ ಇದ್ದರು.
Published on

* ಧರ್ಮದರ್ಶಿ ಡಾ. ನೀ.ಬಿ. ವಿಜಯ ಬಲ್ಲಾಳ್ ಅಭಿಪ್ರಾಯ

* ಡುಂಡಿ-70 ಅಭಿನಂದನಾ ಸಮಾರಂಭ, ಕುರಾಡಿ ಕಾವ್ಯ ಪ್ರಶಸ್ತಿ ಪ್ರದಾನ

ಉಡುಪಿ: ನಾವೆಲ್ಲರೂ ಇಂದು ಒತ್ತಡಮಯ ಸಮಾಜದಲ್ಲಿದ್ದೇವೆ. ಯಾರಿಗೂ ಯಾವುದಕ್ಕೂ ಸಮಯವಿಲ್ಲ. ದೊಡ್ಡ ಕಥೆ ಕಾದಂಬರಿ ಓದುವ ತಾಳ್ಮೆಯೂ ಇಲ್ಲ. ಇಂಥ ಸಂದರ್ಭದಲ್ಲಿ ಚುಟುಕು ಕವನ, ಚುಟುಕು ಸಾಹಿತ್ಯ ಹೆಚ್ಚು ಮಹತ್ವ ಪಡೆಯುತ್ತದೆ. ವೈದ್ಯರಲ್ಲಿ ಸಾಹಿತ್ಯ ಭಾವ ಇರುವುದು ಅಪರೂಪ. ಸಾಹಿತ್ಯ ಭಾವನೆ ಇದ್ದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲೂ ಸಹಕಾರಿಯಾಗುತ್ತದೆ. ಇಂದಿನ ಯುವ ಪೀಳಿಗೆಗೆ ಚುಟುಕು ಸಾಹಿತ್ಯ ರಚಿಸಲು ಎಚ್. ಡುಂಡಿರಾಜ್ ಪ್ರೇರಕರಾಗಿದ್ದಾರೆ ಎಂದು ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಾಲಯದ ಧರ್ಮದರ್ಶಿ ಡಾ. ನೀ.ಬಿ ವಿಜಯ ಬಲ್ಲಾಳ್ ತಿಳಿಸಿದರು.
ಉಡುಪಿಯ ಅಂಬಲಪಾಡಿಯ ಭವಾನಿ ಸಭಾಂಗಣದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ, ವಿಶ್ವ ಭಾರತಿ ಕರ್ನಾಟಕ ಪ್ರತಿಷ್ಠಾನ ಬೆನಗಲ್, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ವತಿಯಿಂದ ಭಾನುವಾರ ಆಯೋಜಿಸಿದ್ದ ಪ್ರಸಿದ್ಧ ಸಾಹಿತಿ ಎಚ್.ದುಂಡಿರಾಜ್ ಅವರ ಡುಂಡಿ-70 ಅಭಿನಂದನಾ ಸಮಾರಂಭ, ಪುಸ್ತಕ ಬಿಡುಗಡೆ ಹಾಗೂ ಕವಿ ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಲೊಕೇಷನ್ ಕೇಳ್ತಾರೆ
ಪ್ರಶಸ್ತಿ ಪ್ರದಾನ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮೂಳೆ ಗ್ರಾಮದ ನಿವಾಸಿ, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಆಯುರ್ವೇದದ ಖ್ಯಾತ ವೈದ್ಯ ಡಾ. ಲಕ್ಷ್ಮಣ್ ವಿ.ಎ. ಅವರಿಗೆ ಕುರಾಡಿ ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ. ಶಿವರಾಮ ಕಾರಂತ ಟ್ರಸ್ಟ್ ನ ಅಧ್ಯಕ್ಷ ಡಾ. ಗಣನಾಥ್ ಶೆಟ್ಟಿ ಎಕ್ಕಾರು ಅಭಿನಂದನಾ ಮಾತುಗಳನ್ನಾಡಿದರು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅವರು ಎಚ್.ಡುಂಡಿರಾಜ್ ಅವರ ಡುಂಡಿ ಯಾತ್ರೆ ಹಾಗೂ ಫೇಸ್ ಬುಕ್ ನಲ್ಲಿ ಸಾಕ್ಷಾತ್ಕಾರ ಎಂಬ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಸಾಹಿತಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಕೃತಿಗಳ ಕುರಿತು ಮಾತನಾಡಿದರು.
ನಾಗರಾಜ್ ಹೆಬ್ಬಾರ್ ಮರವಂತೆ, ಕಸಾಪ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್‍.ಪಿ. ಉಪಸ್ಥಿತರಿದ್ದರು.
ಪ್ರಶಸ್ತಿ ಸಮಿತಿಯ ಸಂಚಾಲಕಿ ಪೂರ್ಣಿಮಾ ಜನಾರ್ದನ್ ಸ್ವಾಗತಿಸಿದರು. ವಿಶ್ವ ಭಾರತಿ ಕರ್ನಾಟಕ ಪ್ರತಿಷ್ಠಾನ ಬೆನಗಲ್ ನ ಅಧ್ಯಕ್ಷ ಡಾ. ನಾರಾಯಣ ಮಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಸಾಹಿತ್ಯ ಪರಿಷತ್ ನ ಉಡುಪಿ ತಾಲೂಕು ಘಟಕದ ಕಾರ್ಯದರ್ಶಿ ರಂಜಿನಿ ವಸಂತ್ ವಂದಿಸಿದರು. ಕಾರ್ಯಕ್ರಮದ ಸಂಚಾಲಕ ಜನಾರ್ದನ್ ಕೊಡವೂರು ಸಹಕರಿಸಿದರು.

ಪಂಚವರ್ಣೆ ಏಕವ್ಯಕ್ತಿ ರಂಗ ಪ್ರಯೋಗ

ಸಭಾ ಕಾರ್ಯಕ್ರಮದ ಆರಂಭದಲ್ಲಿ ಡಾ. ಬೇಲೂರು ರಘುನಂದನ್ ಅವರ ರಚನೆ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ಖ್ಯಾತ ಕಲಾವಿದೆ ಡಾ. ಮೀರಾ ಎಚ್.ಎನ್. ಅವರು 'ಪಂಚವರ್ಣೆ' ಏಕ ವ್ಯಕ್ತಿ ರಂಗ ಪ್ರಯೋಗ ಪ್ರದರ್ಶಿಸಿದರು. ರಾಜೇಶ್ ಭಟ್ ಷಣಿಯಾಡಿ ಸಂಯೋಜಿಸಿದರು.
"

ಎತ್ತಣ ಮಾಮರ ಎತ್ತಣ ಕೋಗಿಲೆ ಎನ್ನುವಂತೆ ಉಡುಪಿಯಲ್ಲಿ ಪ್ರತಿಷ್ಠಿತ ಕುರಾಡಿ ಪ್ರಶಸ್ತಿ ಲಭಿಸಿರುವುದು ವರ್ಣಿಸಲಸಾಧ್ಯ. ಉಡುಪಿಯು ಮಠ, ದೇವಾಲಯಗಳಿರುವ ಜಿಲ್ಲೆಯಷ್ಟೇ ಅಲ್ಲ. ಇದು ಕವಿ-ಕಲಾವಿದರ ಫಲವತ್ತತೆ ಹೊಂದಿರುವ ಕರಾವಳಿಯ ತಟ. ನನಗೆ ಈ ದಿನ ಹೆಮ್ಮೆಯ ಕ್ಷಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net