ಬಳಿಕ ಆ ವ್ಯಕ್ತಿ ಮತ್ತೆ ಪೆಟ್ರೋಲ್ ತುಂಬಿದ ಬಾಟಲಿಯೊಂದಿಗೆ ಕಲ್ಸಂಕ ವೃತ್ತಕ್ಕೆ ಬಂದು ಸಾಯುವುದಾಗಿ ಬೊಬ್ಬೆ ಹೊಡೆದನು. ಈ ವೇಳೆ ಓರ್ವ ಮಹಿಳೆಯೂ ಇದ್ದು ಆತನನ್ನು ತಪ್ಪಿಸಲು ಯತ್ನಿಸುತ್ತಿದ್ದಳು. ಆದರೆ, ಆಕೆಗೆ ತನ್ನ ಹತ್ತಿರ ಬರದಂತೆ ಕೂಗುತ್ತಿದ್ದನು. ಸಮಾಜ ಸೇವಕ ನಿತ್ಯಾನಂದ ಒಳಕಾಡು ಸ್ಥಳಕ್ಕಾಗಮಿಸಿ ಆತನನ್ನು ನಿಯಂತ್ರಿಸಲು ಯತ್ನಿಸಿದರು. ಆದರೆ, ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ ಆತ, ನಿಮಗೂ ಪೆಟ್ರೋಲ್ ಎರಚಿ ಬೆಂಕಿ ಹಾಕುತ್ತೇನೆ ಎಂದು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದನು. ಬಳಿಕ ತನ್ನ ಬಲಕಾಲಿಗೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದು, ಕೂಡಲೇ ಆತನನ್ನು ಸುತ್ತುವರಿದು ಬೆಂಕಿ ನಂದಿಸಲಾಯಿತು.