

ಆರೋಗ್ಯ-ಶಿಕ್ಷಣ ಕ್ಷೇತ್ರದಲ್ಲಿ ವಿಶ್ವದ ಗಮನ ಸೆಳೆದಿರುವ ಉಡುಪಿ ಜಿಲ್ಲೆ ಇತ್ತೀಚೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕವೂ ವಿಶ್ವದಾಖಲೆಯ ಮೂಲಕ ಗಮನ ಸೆಳೆಯುತ್ತಿದೆ. ದೀಕ್ಷಾ ರಾಮಕೃಷ್ಣ ಅವರು ಗಾಯನ-ನೃತ್ಯದ ಮೂಲಕ ವಿಶಿಷ್ಟವಾಗಿ ವಿಶ್ವ ದಾಖಲೆ ಮಾಡುವ ಮೂಲಕ ಉಡುಪಿಯ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಸಮಸ್ತ ಉಡುಪಿ ಜಿಲ್ಲೆಯ ಜನತೆಯ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.
ಪುರಂದರ ದಾಸರು ರಚಿಸಿರುವ ಕೃತಿಗಳು ಅದು ಕೇವಲ ಹಾಡಷ್ಟೇ ಅಲ್ಲ. ಅದು ದೇವರ ಒಲುಮೆಯನ್ನು ಪಡೆಯಲು ಭಕ್ತರಿಗೆ ಇರುವ ಸರಳವಾದ ಉಪನಿಷತ್ ಆಗಿದೆ. ಶ್ರೀಕೃಷ್ಣನ ನಾಡಿನಲ್ಲಿ ಪುರಂದರ ದಾಸರ ಹಾಡನ್ನು ಹೇಳುತ್ತ, ಹಾವ-ಭಾವದೊಂದಿಗೆ ನೃತ್ಯ ಮಾಡುತ್ತ ವಿಶ್ವ ದಾಖಲೆ ಮಾಡಿರುವ ದೀಕ್ಷಾ ರಾಮಕೃಷ್ಣ ಅವರ ಸಾಧನೆ ಶ್ರೀಕೃಷ್ಣನ ಚಿತ್ತಕ್ಕೂ ಬಂದಿದೆ.
ನನ್ನ ಶಿಷ್ಯೆಯಾದ ವಿದುಷಿ ದೀಕ್ಷಾ, ಸಾಹಿತ್ಯ ಶುದ್ಧ ಹಾಗೂ ನೃತ್ಯ ಶುದ್ಧವಾಗಿ ಮಾಡಿದ್ದಾರೆ. ಹಾಡುತ್ತ ನೃತ್ಯ ಮಾಡುವುದು ಸುಲಭವಲ್ಲ. ಅವಳ ಭಾವನೆ ಕೃಷ್ಣ-ಯಶೋದಾರಿಂದ ಆರಂಭಿಸಿ, ದ್ರೌಪದಿ ವಸ್ತ್ರಾಪಹರಣದವರೆಗೂ ಸ್ವಯಂ ನೃತ್ಯ ಸಂಯೋಜನೆ ಮಾಡಿದ್ದಾಳೆ. ಅವಳ ಶ್ರಮ ದಾಖಲೆಯಲ್ಲಿ ಸಾರ್ಥಕತೆ ಕಂಡಿದೆ. ಇನ್ನಷ್ಟು ಸಾಧನೆ ಮಾಡಲಿ.
ಸಂಗೀತ-ಭರತನಾಟ್ಯ ಎರಡೂ ಕಲಿತಿದ್ದರಿಂದ ಈ ಎರಡೂ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಕನಸು ಕಂಡಿದ್ದೆ. ಹಾಡುತ್ತಲೇ ನರ್ತನ ಮಾಡುವ ಮೂಲಕ ಸಾಧನೆ ಮಾಡಲು 'ಪುರಂದರ ಗಾನ ನರ್ತನ' ಯೋಜಿಸಿ ಪ್ರಯತ್ನಿಸಿದೆ. ಇದಕ್ಕಾಗಿ 2 ತಿಂಗಳು ಪರಿಶ್ರಮಪಟ್ಟಿದ್ದೆ. ಅದೀಗ ವಿಶ್ವ ದಾಖಲೆ ಆಗಿರುವುದು ಕಲಿಕೆಯ ಸಾರ್ಥಕತೆ ಮೂಡಿದೆ. ಕಲಿಸಿದ ಗುರುಗಳ ಸಮ್ಮುಖದಲ್ಲಿ ಶ್ರೀಕೃಷ್ಣನ ದೈವಶಕ್ತಿಯಿಂದ ಸಾಧನೆ ಮಾಡಿರುವುದು ನೆಮ್ಮದಿ ತಂದಿದೆ.