ಉಡುಪಿಯಲ್ಲಿ ಮೃತ ಗೃಹಲಕ್ಷ್ಮೀ ಫಲಾನುಭವಿಗಳ ಖಾತೆಗೆ 2.20 ಕೋಟಿ ರೂ.

2460 ಮಂದಿ ಮೃತ ಫಲಾನುಭವಿಗಳ ಖಾತೆಗೆ 2.20 ಕೋಟಿ ರೂ. ಹಣ ಪಾವತಿಯಾಗಿದೆ. ಈ ಪೈಕಿ 77.76 ಲಕ್ಷ ರೂ. ಅಧಿಕ ಹಣವನ್ನು ಮೃತರ ಕುಟುಂಬಸ್ಥರು ಎಟಿಎಂ ಮೂಲಕ ವಿತ್​ ಡ್ರಾ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
GRUHALAKSHMI
ಸಾಂದರ್ಭಿಕ ಚಿತ್ರ
Published on: 

ಉಡುಪಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷೀ ಯೋಜನೆಯಡಿ ಮೃತಪಟ್ಟ ಫಲಾನುಭವಿಗಳ ಖಾತೆಗೂ ಸತತವಾಗಿ ಧನಸಹಾಯ ಜಮೆಯಾಗುತ್ತಿದ್ದು, 2460 ಮಂದಿ ಮೃತ ಫಲಾನುಭವಿಗಳ ಖಾತೆಗೆ 2.20 ಕೋಟಿ ರೂ. ಹಣ ಪಾವತಿಯಾಗಿದೆ. ಈ ಪೈಕಿ 77.76 ಲಕ್ಷ ರೂ. ಅಧಿಕ ಹಣವನ್ನು ಮೃತರ ಕುಟುಂಬಸ್ಥರು ಎಟಿಎಂ ಮೂಲಕ ವಿತ್​ ಡ್ರಾ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಸರ್ಕಾರದ ಮಟ್ಟದಲ್ಲಿ ಸಕಾಲಕ್ಕೆ ಮಾಹಿತಿ ನವೀಕರಣಗೊಳ್ಳದ ಕಾರಣ ಮೃತಪಟ್ಟವರ ಖಾತೆಗೂ ಕೋಟ್ಯಂತರ ರೂಪಾಯಿ ಜಮೆಯಾಗುತ್ತಿದ್ದು, ಸರ್ಕಾರದ ಖಜಾನೆಗೆ ಕನ್ನ ಬಿದ್ದಂತಾಗಿದೆ.

ಜಿಲ್ಲೆಯಲ್ಲಿ ಗೃಹಲಕ್ಷೀ ಯೋಜನೆ ಒಟ್ಟು 7,727 ಫಲಾನುಭವಿಗಳು ಮರಣ ಹೊಂದಿದ್ದಾರೆ ಎಂದು ಗುರುತಿಸಲಾಗಿದೆ. ಈ ಪೈಕಿ 2,460 ಮೃತ ಫಲಾನುಭವಿಗಳ ಖಾತೆಗೆ ಅವರು ಮೃತಪಟ್ಟ ನಂತರವೂ ಸರ್ಕಾರದ ಧನಸಹಾಯದ ಕಂತುಗಳು ನಿಯಮಿತವಾಗಿ ಜಮೆಯಾಗಿವೆ.ಖಾತೆಗೆ ಹಣ ಜಮೆಯಾಗುತ್ತಿದ್ದಂತೆ ಮೃತ ಫಲಾನುಭವಿಗಳ ಕುಟುಂಬಸ್ಥರು ಎಟಿಎಂ ಕಾರ್ಡ್​ ಬಳಸಿ ಹಣ ಡ್ರಾ ಮಾಡಿಕೊಂಡಿದ್ದಾರೆ. 81,35,673 ರೂ. ಸರ್ಕಾರದ ಖಾತೆಗೆ ವಾಪಾಸು ಪಡೆಯಲಾಗಿದ್ದು, 61,10,277 ರೂ. ಬ್ಯಾಂಕ್​ಗಳಲ್ಲಿ ತಡೆಹಿಡಿಯಲಾಗಿದೆ. ಜೊತೆಗೆ ಮೃತರ ಖಾತೆಗೆ ಪಾವತಿಯಾದ ಹಣವನ್ನು ಸರ್ಕಾರಕ್ಕೆ ಮರಳಿ ಪಡೆಯಲು ಬ್ಯಾಂಕ್​ ಹಾಗೂ ಅಂಚೆ ಕಚೇರಿಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ.

ನೋಂದಾಯಿತ ಫಲಾನುಭವಿಗಳು

ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ 2,38,080 ಗೃಹಲಕ್ಷಿ$್ಮ ಫಲಾನುಭವಿಗಳಿದ್ದಾರೆ. ಬೈಂದೂರು ತಾಲೂಕಿನಲ್ಲಿ 29,194, ಬ್ರಹ್ಮಾವರದಲ್ಲಿ 36,831, ಹೆಬ್ರಿಯಲ್ಲಿ 10,507, ಕಾಪುವಿನಲ್ಲಿ 27,278, ಕಾರ್ಕಳದಲ್ಲಿ 37,742, ಕುಂದಾಪುರದಲ್ಲಿ 53,029, ಉಡುಪಿಯಲ್ಲಿ 43,499 ನೋಂದಾಯಿತ ಲಾನುಭವಿಗಳಿದ್ದಾರೆ. ಆ.2023ರಿಂದ ಈ ವರ್ಷ ಜೂನ್​ವರೆಗೆ ಒಟ್ಟು 1408 ಕೋಟಿ ರೂ. ಬ್ಯಾಂಕ್​ ಖಾತೆಗೆ ಜಮೆಯಾಗಿದೆ.

ತಾಂತ್ರಿಕ ತೊಡಕು

ಗೃಹಲಕ್ಷ್ಮೀ ಅರ್ಜಿ ಸಲ್ಲಿಸಿದವರಲ್ಲಿ 1,778 ಬ್ಯಾಂಕ್​ ಖಾತೆಗೆ ಎನ್​ಪಿಸಿಐ ಜೋಡಣೆಯಾಗಿರಲಿಲ್ಲ. ಜೂನ್​ ಅಂತ್ಯಕ್ಕೆ 45 ಪ್ರಕರಣಗಳು ಇತ್ಯರ್ಥಗೊಂಡು, 1,733 ಪ್ರಕರಣಗಳು ಬಾಕಿ ಉಳಿದಿವೆ. 82 ಲಾನುಭವಿಗಳಲ್ಲಿ ಇಕೆವೈಸಿ ಸಮಸ್ಯೆ ಕಂಡುಬಂದಿದ್ದು, 4946 ಮಂದಿ ಐಟಿ ಪಾವತಿದಾರರು ಎಂಬ ಕಾರಣಕ್ಕೆ ಅರ್ಜಿ ತಿರಸತಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net