ಸ್ಪರ್ಧೆಗಳಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಳ

ಉಡುಪಿಯಲ್ಲಿ ಆಯೋಜಿಸಿದ್ದ ಕಾರಂತರ ಕುರಿತ ವಿವಿಧ ಸ್ಪರ್ಧಾ ಕಾರ್ಯಕ್ರಮವನ್ನು ರಮೇಶ್​ ಹಾಂಡ ಉದ್ಘಾಟಿಸಿದರು. ಡಾ.ಗಣನಾಥ್​ ಶೆಟ್ಟಿ ಎಕ್ಕಾರು, ಡಾ. ಭಾರತಿ ಮರವಂತೆ, ಡಾ.ಚೇತನ್​ ಶೆಟ್ಟಿ ಕೋವಾಡಿ, ಸತೀಶ್​ ಕೊಡವೂರು ಇದ್ದರು.
ಉಡುಪಿಯಲ್ಲಿ ಆಯೋಜಿಸಿದ್ದ ಕಾರಂತರ ಕುರಿತ ವಿವಿಧ ಸ್ಪರ್ಧಾ ಕಾರ್ಯಕ್ರಮವನ್ನು ರಮೇಶ್​ ಹಾಂಡ ಉದ್ಘಾಟಿಸಿದರು. ಡಾ.ಗಣನಾಥ್​ ಶೆಟ್ಟಿ ಎಕ್ಕಾರು, ಡಾ. ಭಾರತಿ ಮರವಂತೆ, ಡಾ.ಚೇತನ್​ ಶೆಟ್ಟಿ ಕೋವಾಡಿ, ಸತೀಶ್​ ಕೊಡವೂರು ಇದ್ದರು.
Published on: 

* ಚಿತ್ರಕಲಾ ಶಿಕ್ಷಕ ರಮೇಶ್​ ಹಾಂಡ ಅನಿಸಿಕೆ

* ಡಾ.ಕಾರಂತ ಜನ್ಮದಿನಾಚರಣೆ, ಮಕ್ಕಳಿಗೆ ವಿವಿಧ ಸ್ಪರ್ಧೆ

ಉಡುಪಿ: ಇಂದಿನ ಮಕ್ಕಳಲ್ಲಿ ಅಪಾರ ಪ್ರತಿಭೆಯ ಅನಾವರಣಕ್ಕೆ ಚಿತ್ರಕಲೆ, ಪ್ರಬಂಧ, ಭಾಷಣ ಹಾಗೂ ವಿವಿಧ ಸೃಜನಾತ್ಮಕ ಸ್ಪರ್ಧೆಗಳು ಪ್ರಮುಖ ಪಾತ್ರ ವಹಿಸುತ್ತದೆ. ಸ್ಪರ್ಧೆ ಬಹುಮಾನಕ್ಕಾಗಿ ಮಾತ್ರವಲ್ಲದೆ ಮಕ್ಕಳಲ್ಲಿರುವ ಕಲ್ಪನಾಶಕ್ತಿ, ಆತ್ಮವಿಶ್ವಾಸ ಮತ್ತು ಸೈಜನಶೀಲತೆ ಬೆಳೆಸುವ ವೇದಿಕೆಯಾಗಿದೆ ಎಂದು ಕುಂದಾಪುರದ ಎಚ್​ಎಂಎಂ ಮತ್ತು ವಿಕೆಆರ್​ ಆಚಾರ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ರಮೇಶ್​ ಹಾಂಡ ತಿಳಿಸಿದರು.

ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ. ಶಿವರಾಮ ಕಾರಂತ ಟ್ರಸ್ಟ್​ ವತಿಯಿಂದ ಡಾ. ಶಿವರಾಮ ಕಾರಂತ ಅವರ ಜನ್ಮದಿನದ ನಿಮಿತ್ತ ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ರೆಡ್​ ಕ್ರಾಸ್​ ಭವನದಲ್ಲಿ ಭಾನುವಾರ (ಅ.4) ಆಯೋಜಿಸಿದ್ದ ವಿವಿಧ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಡಾ.ಶಿವರಾಮ ಕಾರಂತ ಟ್ರಸ್ಟ್​ನ ಅಧ್ಯಕ್ಷ ಡಾ.ಗಣನಾಥ್​ ಶೆಟ್ಟಿ ಎಕ್ಕಾರು ಮಾತನಾಡಿ, ಸ್ಪರ್ಧೆಯ ಮೂಲಕ ವಿದ್ಯಾರ್ಥಿಗಳಿಗೆ ಡಾ.ಕಾರಂತರ ಬದುಕು&ಬರಹಗಳ ಸಂದೇಶ ಮುಟ್ಟಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ರಂಗವಲ್ಲಿಯ ಖ್ಯಾತತಜ್ಞೆ ಡಾ. ಭಾರತಿ ಮರವಂತೆ, ಟ್ರಸ್ಟ್​ನ ಸದಸ್ಯರಾದ ಡಾ.ಚೇತನ್​ ಶೆಟ್ಟಿ ಕೋವಾಡಿ, ಸತೀಶ್​ ಕೊಡವೂರು ಉಪಸ್ಥಿತರಿದ್ದರು.

ಕಾರಂತ ಬಾಲ ಪ್ರಪಂಚ ಹಾಗೂ ವಿಜ್ಞಾನ ಪ್ರಪಂಚ ಕೃತಿಯ ಚಿತ್ರಗಳ ಆಧಾರದಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಂಗೋಲಿ ಬಿಡಿಸುವ ಸ್ಪರ್ಧೆ ನಡೆಯಿತು.

ಸ್ಪರ್ಧೆಯ ವಿಜೇತರು

ಪ್ರಾಥಮಿಕ ಶಾಲಾ ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಕುಂದಾಪುರದ ಎಚ್​ಎಂಎಂ ಮತ್ತು ವಿಕೆಆರ್​ ಆಚಾರ್ಯ ಶಾಲೆಯ ಆತ್ಮಿಕಾ (ಪ್ರಥಮ), ಅನಂತೇಶ್ವರ ಹಿರಿಯ ಪ್ರಾಥಮಿಕ ಶಾಲೆ ಪಣಿಯಾಡಿಯ ಪಾವನಿ ಜಿ. ರಾವ್​ (ದ್ವಿತೀಯ), ಹೆಸಕುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಕ್ಷರ ಎ. (ತೃತೀಯ) ಸಮಾಧಾನಕರ ಬಹುಮಾನ- ಶಿರಿಯಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೇವಿ ದರ್ಶನ್​, ಕುಂದಾಪುರದ ಎಚ್​ಎಂಎಂ ಇಂಗ್ಲಿಷ್​ ಮೀಡಿಯಂ ಸ್ಕೂಲ್​ನ ವಿಹಾನಿ ಎ. ಶೆಟ್ಟಿಗಾರ್​, ಶಿರಿಯಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಶ್ವಿತಾ ಆರ್​ ಪೂಜಾರಿ.

ರಂಗವಲ್ಲಿ ಬಿಡಿಸುವ ಸ್ಪರ್ಧೆಯಲ್ಲಿ ಉಡುಪಿ ದ್ಯೋದಯ ಪಬ್ಲಿಕ್​ ಸ್ಕೂಲ್​ನ ಕನಿಷ್ಕ (ಪ್ರಥಮ), ಕುಂದಾಪುರ ವಿಕೆಆರ್​ ಸ್ಕೂಲ್​ನ ಪವಿತ್ರಾ ಎ. ಶೇಟ್​ (ದ್ವಿತೀಯ), ಅವನಿ ಎ. ಶೆಟ್ಟಿಗಾರ್​ (ತೃತೀಯ) ಬಹುಮಾನ ಗಳಿಸಿದ್ದಾರೆ.

ವಿಜೇತರಿಗೆ ಡಾ.ಶಿವರಾಮ ಕಾರಂತರ ಜನ್ಮದಿನದ ನಿಮಿತ್ತ ಅ.9ರಂದು ಬೆಳಿಗ್ಗೆ 10 ಗಂಟೆಗೆ ಬ್ರಹ್ಮಗಿರಿಯಲ್ಲಿರುವ ರೆಡ್​ ಕ್ರಾಸ್​ ಸಂಸ್ಥೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು.
ಪೂರ್ಣಿಮಾ. ಡಾ.ಶಿವರಾಮ ಕಾರಂತ ಟ್ರಸ್ಟ್​ನ ಸದಸ್ಯ ಕಾರ್ಯದರ್ಶಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net