ಲಾರಿಗೆ ಡಿಕ್ಕಿಯಾಗಿ ಕಾರು ಚಾಲಕಗೆ ಗಾಯ

ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
accedent
ACCIDENT
Published on: 

ಪಡುಬಿದ್ರಿ: ಉದ್ಯಾವರದ ಗ್ರಾನೈಟ್ ಅಂಗಡಿಯೊಂದರ ಬಳಿ ಭಾನುವಾರ ಮುಂಜಾನೆ ಲಾರಿಗೆ ಕಾರು ಡಿಕ್ಕಿಯಾಗಿ ಕಾರು ಚಾಲಕ ಲಿಯೋನೆಲ್ ಪಿರೇರಾ ಎಂಬುವರು ಗಾಯಗೊಂಡಿದ್ದಾರೆೆ. ಅಂಕೋಲ ಬೇಲೆಕೇರಿ ಬಂದರಿನಿಂದ ಉದ್ಯಾವರ ಪಿತ್ರೋಡಿಯ ಫಿಶ್ ಮೀಲ್‌ಗೆ ಮೀನು ಸಾಗಾಟ ವಾಡುತ್ತಿದ್ದ ಲಾರಿಗೆ ಏಕಮುಖ ರಸ್ತೆಯಲ್ಲಿ ಆಗಮಿಸಿದ್ದ ಕಾರು ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಎರಡೂ ವಾಹನಗಳು ಜಖಂಗೊಂಡಿವೆ. ಗಾಯಾಳು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಮಿಕರ ವಾಗ್ವಾದ, ಓರ್ವನಿಗೆ ಹಲ್ಲೆ

ಪಡುಬಿದ್ರಿ: ಪಡುಬಿದ್ರಿಯಲ್ಲಿ ಭಾನುವಾರ ಉತ್ತರಾಖಂಡ್‌ನ ಕಾರ್ಮಿಕರಿಬ್ಬರು ವಾಗ್ವಾದ ನಡೆಸಿ, ಅಂಕಿತ್ ಎಂಬುವರು ಗಂಭೀರ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಂಕಿತ್ ಹಾಗೂ ಅಜಯ್ ವಾಳಸಿದ್ದಪ್ಪ ಎಂಬುವರು ಪಡುಬಿದ್ರಿ ನಡ್ಸಾಲಿನ ಬೀಡು ಎಂಬಲ್ಲಿ ರೆಸಾರ್ಟ್‌ವೊಂದರ ಸೆಂಟ್ರಿಂಗ್ ಕಾರ್ಮಿಕರಾಗಿದ್ದಾರೆ. ಅಲ್ಲೆ ರೂಮಿನಲ್ಲಿದ್ದ ಅವರ ನಡುವೆ ಭಾನುವಾರ ರಾತ್ರಿ ವಾಗ್ವಾದ ನಡೆದು ಅಜಯ್, ಅಂಕಿತ್ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ್ದ. ಗಾಯಾಳುವನ್ನು ಕೆಲಸದ ವಾಲೀಕರು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net