

* ಆರೋಪಿಯ ಕಾಲಿಗೆ ಶೂಟ್ ಮಾಡಿದ ಪಿಎಸ್ಐ ತೇಜಸ್ವಿ
ಹತ್ಯೆ ಮಾಡಿ ಬೈಕ್ನಲ್ಲಿ ಪರಾರಿ
ಕೊಲೆ ಮಾಡಿ ಬಸ್ಸಿನಲ್ಲಿ ಹೊರಟರು!
ಡೇವಿಡ್ ಡಿಸೋಜ ಅವರನ್ನು ಹತ್ಯೆ ಮಾಡಿದ ಬಳಿಕ ಮೂವರೂ ಆರೋಪಿಗಳು ಪಡುಬಿದ್ರೆ ಬಳಿ ಭಟ್ಕಳದತ್ತ ಸಾಗುತ್ತಿದ್ದ ಬಸ್ ಹತ್ತಿದ್ದರು. ಈ ವೇಳೆ ಕಾರ್ಯಾಚರಣೆ ಆರಂಭಿಸಿದ್ದ ಪೊಲೀಸರು, ಖಚಿತ ಮಾಹಿತಿ ಮೇರೆಗೆ ಆರೋಪಿಗಳಿದ್ದ ಬಸ್ಅನ್ನು ಬೈಂದೂರಿನ ಒತ್ತಿನಾಣೆ ಎಂಬಲ್ಲಿ ತಡೆದು ನಿಲ್ಲಿಸಿದರು. ಪೊಲೀಸರು ತಪಾಸಣೆ ಆರಂಭಿಸಿದಾಗ ಮೂವರೂ ಆರೋಪಿಗಳು ಬಸ್ನಿಂದ ಇಳಿದು ಓಡಿ ಹೋದರು.
ಆರೋಪಿಯ ಕಾಲಿಗೆ ಗುಂಡೇಟು
ಭಟ್ಕಳ, ಕುಮಟಾದಲ್ಲಿ ಇನ್ನಿಬ್ಬರು ಅರೆಸ್ಟ್
ಡೇವಿಡ್ ಡಿಸೋಜ ಹತ್ಯೆಗೆ ಹಣಕಾಸು ವಿಚಾರದಲ್ಲಿನ ವೈಮನಸ್ಸು ಕಾರಣವಾಗಿತ್ತು ಎನ್ನುವುದು ತನಿಖೆಯಿಂದ ತಿಳಿದುಬಂದಿದೆ. ಅದೇ ಕಾರಣಕ್ಕೆ ಸುಪಾರಿ ನೀಡಿ ಹತ್ಯೆ ಮಾಡಲಾಗಿದ್ದು, 24 ಗಂಟೆಯೊಳಗೆ ಅನ್ಯ ರಾಜ್ಯದ ಮೂವರು ಆರೋಪಿಗಳನ್ನು ಬಂಧಿಸಿದ್ದೇವೆ. ಹತ್ಯೆಗೆ ಬಳಸಿದ್ದ ಪಿಸ್ತೂಲ್ ಹಾಗೂ ಪಡುಬಿದ್ರೆ ಸಮೀಪದ ಎರ್ಮಾಳಿನಲ್ಲಿ ಬಿಟ್ಟು ಹೋಗಿದ್ದ ಬೈಕ್ ವಶಕ್ಕೆ ಪಡೆದಿದ್ದೇವೆ. ಸುಪಾರಿ ಕೊಟ್ಟವರು ಹಾಗೂ ಸ್ಥಳೀಯವಾಗಿ ಹತ್ಯೆಗೆ ಸಹಕರಿಸಿದವರು, ಆಶ್ರಯ ನೀಡಿದವರು ಯಾರೆಂದು ತನಿಖೆ ನಡೆಸಲಾಗುತ್ತಿದೆ.
— ಹರಿರಾಮ್ ಶಂಕರ್. ಜಿಲ್ಲಾ ಪೊಲೀಸ್ ವರಿಷ್ಠ.