ಆಟೋ ಡಿಕ್ಕಿ, ಸ್ಕೂಟರ್ ಸವಾರನಿಗೆ ಗಾಯ

ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ACCIDENT
ACCIDENT
Published on: 

ಕುಂದಾಪುರ: ಕೋಡಿ ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಆಟೋ ರಿಕ್ಷಾ ಕೋಡಿ ರಸ್ತೆಯ ಗ್ಯಾಸ್ ಏಜೆನ್ಸಿಯೊಂದರ ಬಳಿ ಕುಂದಾಪುರ ಕಡೆಯಿಂದ ಮದ್ದುಗುಡ್ಡೆಗೆ ಹೋಗುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸುಬ್ರಹ್ಮಣ್ಯ ಗಾಯಗೊಂಡಿದ್ದಾರೆ.

ಗಾಯಾಳುವನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅಪಘಾತಪಡಿಸಿದ ಆಟೋರಿಕ್ಷಾ ಚಾಲಕ ಲಕ್ಷ್ಮಣ ಕುಲಾಲ್ ಆಟೋರಿಕ್ಷಾವನ್ನು ನಿಲ್ಲಿಸದೆ ಪರಾರಿಯಾಗಿದ್ದಾರೆ. ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.