ತೆಕ್ಕಟ್ಟೆಯಲ್ಲಿ ಎಸ್ಡಿಎಂ ಆಯುರ್ವೇದ ಕಾಲೇಜಿನ ಎನ್ಎಸ್ಎಸ್ ಘಟಕದ ವತಿಯಿಂದ ವಿಶೇಷ ಶಿಬಿರ ನಡೆಯಿತು. ಡಾ. ವಿದ್ಯಾಲಕ್ಷ್ಮೀ ಕೆ., ಸಂತೋಷಕುಮಾರ್, ಹೆರಿಯಾ ಮಾಸ್ಟರ್ ಇತರರಿದ್ದರು.
Published on:
Copied
Follow Us
* ಡಾ. ವಿದ್ಯಾಲಕ್ಷ್ಮೀ ಕೆ. ಅನಿಸಿಕೆ
* ಎಸ್ಡಿಎಂ ಕಾಲೇಜಿನ 'ಅಭ್ಯುದಯ' ವಾರ್ಷಿಕ ಶಿಬಿರ
ಉಡುಪಿ: ಎನ್ಎಸ್ಎಸ್ ಶಿಬಿರದಿಂದ ವಿದ್ಯಾರ್ಥಿಗಳಿಗೆ ವಿವಿಧ ಜ್ಞಾನ ಲಭಿಸುವುದಲ್ಲದೇ ಬದುಕಿನಲ್ಲಿ ಶಿಸ್ತು ಮೂಡಿಸುತ್ತದೆ. ಶಿಬಿರದಲ್ಲಿ ಕೈಗೊಳ್ಳುವ ಸೇವಾ ಕಾರ್ಯಗಳಿಂದ ಅನುಭವವೂ ದೊರೆತು ವ್ಯಕ್ತಿತ್ವದ ವಿಕಸನಕ್ಕೂ ಸಹಕಾರಿಯಾಗುತ್ತದೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ಕಾಲೇಜಿನ ಸಮುದಾಯ ಸೇವಾ ಘಟಕದ ಮುಖ್ಯಸ್ಥೆ ಡಾ. ವಿದ್ಯಾಲಕ್ಷ್ಮೀ ಕೆ. ಅನಿಸಿಕೆ ವ್ಯಕ್ತಪಡಿಸಿದರು.
ತೆಕ್ಕಟ್ಟೆಯ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕವು ಪ್ರಾಂಶುಪಾಲೆ ಡಾ. ಮಮತಾ ಕೆ. ವಿ ಅವರ ಮಾರ್ಗದರ್ಶನದಲ್ಲಿ ಆಯೋಜಿಸಿದ್ದ ಏಳು ದಿನಗಳ 'ಅಭ್ಯುದಯ' ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಭೆಯಲ್ಲಿ ಮಾತನಾಡಿದರು.
ನಾಯಕತ್ವದ ಗುಣ
ತೆಕ್ಕಟ್ಟೆ ಗ್ರಾಪಂನ ಪಿಡಿಒ ಸಂತೋಷಕುಮಾರ್ ಹಾಗೂ ಕೈಲಾಸ ಕಲಾ ಸಂಘದ ಅಧ್ಯಕ್ಷ ಹೆರಿಯಾ ಮಾಸ್ಟರ್ ಮಾತನಾಡಿ, ಶಿಬಿರದ ಸದುಪಯೋಗ ಮಾಡಿಕೊಂಡು ಹೆಚ್ಚಿನ ಜ್ಞಾನ ಗಳಿಸಿಕೊಳ್ಳಬೇಕು. ನಾಯಕತ್ವ ಗುಣ ಬೆಳಸಿಕೊಂಡು ಸಮಾಜದ ಹಿತ ಕಾಯುವ ಶ್ರೇಷ್ಠ ಪ್ರಜೆಗಳಾಗಬೇಕು ಎಂದು ಕಿವಿಮಾತು ಹೇಳಿ, ಶಿಬಿರಕ್ಕೆ ಎಲ್ಲ ರೀತಿಯ ಸಹಕಾರ ನೀಡುವ ಭರವಸೆ ನೀಡಿದರು.
ಯುವ ರೆಡ್ ಕ್ರಾಸ್ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಜನಾಧಿಕಾರಿಗಳಾದ ಡಾ. ಮಹಾಲಕ್ಷ್ಮೀ ಎಂ.ಎಸ್, ಅನೀಶ್ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಶಿಬಿರಾರ್ಥಿ ನೇಹಾ ಭಟ್ ಸ್ವಾಗತಿಸಿದರು. ಶಿಬಿರದ ಯೋಜನಾಧಿಕಾರಿ ಡಾ. ಶ್ರೀನಿಧಿ ಧನ್ಯಾ ಬಿ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಬಿರಾರ್ಥಿಗಳಾದ ಸಿದ್ಧೇಶ್ ಕೆ.ಎಂ. ಮತ್ತು ಅನನ್ಯಾ ಕಾರ್ಯಕ್ರಮ ನಿರೂಪಿಸಿದರು. ಶಿಬಿರಾರ್ಥಿ ಭಾವನಾ ವಂದಿಸಿದರು.
"
ಪರೋಪಕಾರವೇ ಪರಮ ಧರ್ಮ. ಧರ್ಮದ ಸಾಧನೆಗೋಸ್ಕರವೇ ಈ ಶರೀರವಿದೆ. ಸಮಾಜದಲ್ಲಿ ಎಲ್ಲ ಸಮುದಾಯದವರೊಂದಿಗೆ ನಾವು ಪರಸ್ಪರ ಉಪಕಾರ ಮಾಡಿಕೊಂಡು ನಮ್ಮ ಜೀವನ ಸಾರ್ಥಕಗೊಳಿಸೋಣ. ಶಿಬಿರದಿಂದ ಲಭಿಸುವ ಬದುಕಿನ ಅರ್ಥ ಮೈಗೂಡಿಸಿಕೊಳ್ಳಿ.