

ಐದು ಶತಮಾನಗಳಷ್ಟು ಹಳೆಯದಾದ ಕಾವಿ ಕಲೆಯು ಕರಾವಳಿ ಭಾಗದ 550ಕ್ಕೂ ಅಧಿಕ ಪುರಾತನ ಕಟ್ಟಡಗಳಲ್ಲಿ ಕಂಡುಬರುತ್ತದೆ. ಅವುಗಳ ಸಂರಕ್ಷಣೆ ಹಾಗೂ ಪುನರುಜ್ಜೀವನಕ್ಕಾಗಿ ಸರ್ಕಾರ ಉತ್ತೇಜನ ಕೊಟ್ಟು ತರಬೇತಿ ನೀಡಿದರೆ ಸಾಕಷ್ಟು ಕಲಾವಿದರಿಗೆ ಉದ್ಯೋಗಾವಕಾಶವೂ ಲಭಿಸಲಿದೆ. ಅಲ್ಲದೆ, ಸ್ಥಳೀಯ ಕಲೆಯೊಂದರ ಪ್ರಚಾರ ಜಾಗತಿಕ ಮಟ್ಟದಲ್ಲಿ ಆಗಲು ಸಾಧ್ಯವಿದೆ. ಕಾವಿ ಕಲೆಯನ್ನು ಬೆಳೆಸಲು ಕಾವಿ ಆರ್ಟ್ ಫೌಂಡೇಷನ್ ಕಲಾವಿದರ ಸಹಕಾರಿ ಸಂಘದ ಮೂಲಕ ಸರ್ಕಾರಿ ಕನ್ನಡ ಶಾಲೆಗಳಲ್ಲಿ 'ಕನ್ನಡ ಶಾಲೆಗಳಲ್ಲಿ ಕಾವಿ ಕಲೆಯ ಕಿಶೋರ' (ಕಕಾಕಿ) ಎಂಬ ಸರಣಿ ಕಾರ್ಯಾಗಾರ ನಡೆಸುತ್ತಿದ್ದೇವೆ.