ಅಂಬೇಡ್ಕರ್​ರ ಬದುಕು, ಆದರ್ಶವೇ ದಾರಿದೀಪ

ಉಡುಪಿಯ ಹಿರಿಯಡ್ಕ ಕಾಲೇಜ್​ನಲ್ಲಿ ಆಯೋಜಿಸಿದ್ದ 'ಡಾ. ಬಿ.ಆರ್​. ಅಂಬೇಡ್ಕರ್​ ಓದು' ಕಾರ್ಯಕ್ರಮವನ್ನು ಡಾ.ಜಯಪ್ರಕಾಶ್​ ಶೆಟ್ಟಿ ಎಚ್​. ಉದ್ಘಾಟಿಸಿದರು. ಮಂಜುನಾಥ್​ ಗಿಳಿಯಾರು, ಪೂರ್ಣಿಮಾ, ಡಾ.ಸೌಮ್ಯಲತಾ ಪಿ., ಡಾ.ಲಿತಿನ್​ ಬಿ.ಎಂ., ಮೀನಾಕ್ಷಿ ನಾಯ್ಕ್​ ಇದ್ದರು.
ಉಡುಪಿಯ ಹಿರಿಯಡ್ಕ ಕಾಲೇಜ್​ನಲ್ಲಿ ಆಯೋಜಿಸಿದ್ದ 'ಡಾ. ಬಿ.ಆರ್​. ಅಂಬೇಡ್ಕರ್​ ಓದು' ಕಾರ್ಯಕ್ರಮವನ್ನು ಡಾ.ಜಯಪ್ರಕಾಶ್​ ಶೆಟ್ಟಿ ಎಚ್​. ಉದ್ಘಾಟಿಸಿದರು. ಮಂಜುನಾಥ್​ ಗಿಳಿಯಾರು, ಪೂರ್ಣಿಮಾ, ಡಾ.ಸೌಮ್ಯಲತಾ ಪಿ., ಡಾ.ಲಿತಿನ್​ ಬಿ.ಎಂ., ಮೀನಾಕ್ಷಿ ನಾಯ್ಕ್​ ಇದ್ದರು.
Published on: 

* ವಕೀಲ ಮಂಜುನಾಥ್​ ಗಿಳಿಯಾರು ಅಭಿಪ್ರಾಯ

ಉಡುಪಿ: ಸಮಾಜದಲ್ಲಿದ್ದ ತಾರತಮ್ಯ ಹೋಗಲಾಡಿಸಲು ಹಾಗೂ ಸಮಾನತೆಯ ದೃಢ ಸಂಕಲ್ಪ ತೊಟ್ಟಿದ್ದ ಡಾ. ಬಿ.ಆರ್​. ಅಂಬೇಡ್ಕರ್​ ಅವರು ದೌರ್ಜನ್ಯದಿಂದ ನೊಂದವರ ದನಿಯಾಗಿದ್ದರು. ಜ್ಞಾನ ಸಾಗರವಾಗಿ ಜನರಲ್ಲಿ ಹೊಸ ಚಿಂತನೆ ಮೂಡಿಸಿದ್ದರು. ಅವರ ಆದರ್ಶ, ಬದುಕಿದ ರೀತಿಯೇ ಎಲ್ಲರಿಗೂ ದಾರಿದೀಪ ಎಂದು ವಕೀಲ ಮಂಜುನಾಥ್​ ಗಿಳಿಯಾರು ಅಭಿಪ್ರಾಯಪಟ್ಟರು.

ಉಡುಪಿ ಹಿರಿಯಡ್ಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​ನಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ 'ಡಾ. ಬಿ.ಆರ್​. ಅಂಬೇಡ್ಕರ್​ ಓದು' ಕಾರ್ಯಕ್ರಮದಲ್ಲಿ ಮಾತನಾಡಿದರು.

ವಕೀಲ ಮಂಜುನಾಥ್​ ಗಿಳಿಯಾರು  ಮಾತನಾಡಿದರು.
ವಕೀಲ ಮಂಜುನಾಥ್​ ಗಿಳಿಯಾರು ಮಾತನಾಡಿದರು.

ಸಂವಿಧಾನದ ಮೂಲಕ ಮಹಿಳೆಯರಿಗೂ ಸ್ವಾತಂತ್ರ್ಯ, ಸಮಾಜದಲ್ಲಿ ಸಮಾನ ಗೌರವ ಒದಗಿಸಿದ್ದಾರೆ. ಅಲ್ಲದೆ, ಮಹಿಳಾ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿದ್ದರಿಂದ ಇಂದು ಎಲ್ಲ ಕ್ಷೇತ್ರದಲ್ಲೂ ಮಹಿಳೆಯರು ಸಾಧನೆ ಮಾಡುವಂತಾಗಿದೆ ಎಂದರು.

ಕಾಲೇಜ್​ನ ಪ್ರಾಂಶುಪಾಲ ಡಾ.ಜಯಪ್ರಕಾಶ್​ ಶೆಟ್ಟಿ ಎಚ್​. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗಾಂಧೀಜಿ ಹಾಗೂ ಅಂಬೇಡ್ಕರ್​ರು ದೇಶದ ಸ್ವಾತಂತ್ರ್ಯ ಮತ್ತು ಅಭಿವೃದ್ಧಿಗಾಗಿ ಅನೇಕ ಕೊಡುಗೆ ನೀಡಿದ್ದಾರೆ. ಇಂದಿನ ಯುವ ಪೀಳಿಗೆ ಅವರ ಸಿದ್ಧಾಂತ, ಮಾರ್ಗದರ್ಶನ ಅನುಸರಿಸಿ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದರು.

ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಸೌಮ್ಯಲತಾ ಪಿ., ಐಕ್ಯೂಎಸಿ ಸಂಚಾಲಕ ಡಾ.ಲಿತಿನ್​ ಬಿ.ಎಂ. ಉಪಸ್ಥಿತರಿದ್ದರು. ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ವಿಭಾಗದ ಉಪನ್ಯಾಸಕ ಪಂಜು ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ವೇದಿಕೆಯ ಸಂಚಾಲಕಿ ಮೀನಾಕ್ಷಿ ನಾಯ್ಕ್​ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net