ಹಡೀಲು ಬೀಳದಿರಲಿ ಕೃಷಿ ಭೂಮಿ

ಉಡುಪಿಯ ಪೆರಂಪಳ್ಳಿಯಲ್ಲಿ ಜಿಲ್ಲಾ ಕೃಷಿಕ ಸಂಘದ ವಲಯ ಸಮಿತಿ ಆಯೋಜಿಸಿದ್ದ 'ಆಟಿದ ಕಮ್ಮೆನ' ಕಾರ್ಯಕ್ರಮದಲ್ಲಿ ಸಾಧಕ ಕೃಷಿಕ ಚಂದ್ರಶೇಖರ್​ ನಾಯ್ಕ್​ ಕರಂಬಳ್ಳಿ ಅವರನ್ನು ಸನ್ಮಾನಿಸಲಾಯಿತು. ರಾಮಕೃಷ್ಣ ಶರ್ಮ ಬಂಟಕಲ್ಲು, ಫಾದರ್​ ವಿಶಾಲ್​ ಲೋಬೋ, ರವೀಂದ್ರ ಪೂಜಾರಿ ಶೀಂಬ್ರ, ಮಾಲತಿ ರಮೇಶ್​ ಕೆಮ್ಮಣ್ಣು, ಈಶ್ವರ್​ ಚಿಟ್ಪಾಡಿ, ಶ್ರೀನಿವಾಸ ಬಲ್ಲಾಳ್​ ಮಲ್ಲಂಪಳ್ಳಿ ಇತರರಿದ್ದರು.
ಉಡುಪಿಯ ಪೆರಂಪಳ್ಳಿಯಲ್ಲಿ ಜಿಲ್ಲಾ ಕೃಷಿಕ ಸಂಘದ ವಲಯ ಸಮಿತಿ ಆಯೋಜಿಸಿದ್ದ 'ಆಟಿದ ಕಮ್ಮೆನ' ಕಾರ್ಯಕ್ರಮದಲ್ಲಿ ಸಾಧಕ ಕೃಷಿಕ ಚಂದ್ರಶೇಖರ್​ ನಾಯ್ಕ್​ ಕರಂಬಳ್ಳಿ ಅವರನ್ನು ಸನ್ಮಾನಿಸಲಾಯಿತು. ರಾಮಕೃಷ್ಣ ಶರ್ಮ ಬಂಟಕಲ್ಲು, ಫಾದರ್​ ವಿಶಾಲ್​ ಲೋಬೋ, ರವೀಂದ್ರ ಪೂಜಾರಿ ಶೀಂಬ್ರ, ಮಾಲತಿ ರಮೇಶ್​ ಕೆಮ್ಮಣ್ಣು, ಈಶ್ವರ್​ ಚಿಟ್ಪಾಡಿ, ಶ್ರೀನಿವಾಸ ಬಲ್ಲಾಳ್​ ಮಲ್ಲಂಪಳ್ಳಿ ಇತರರಿದ್ದರು.
Published on

* ರಾಮಕೃಷ್ಣ ಶರ್ಮ ಬಂಟಕಲ್ಲು ಆಶಯ

* 'ಆಟಿದ ಕಮ್ಮೆನ' ಕಾರ್ಯಕ್ರಮ ಉದ್ಘಾಟನೆ

ಉಡುಪಿ: ಕೃಷಿ ಸಂಸ್ಕೃತಿಯ ದೇಶ ನಮ್ಮದು. ಹಿಂದಿನ ಕೃಷಿ ಸಂಸ್ಕೃತಿಯ ಹಿರಿಯರಿಗೆ ಆಹಾರವೇ ಔಷಧವಾಗಿತ್ತು. ಆದರೆ, ಆಧುನಿಕ ಯುಗದ ಜನರಿಗೆ ಔಷಧವೇ ಆಹಾರವಾಗುತ್ತಿದೆ. ನಮ್ಮ ಪ್ರಕೃತಿ, ಆಹಾರ, ವಿಹಾರ, ಸಂಸ್ಕೃತಿ, ಮಳೆ-ಬೆಳೆ ಏರು&ಪೇರು ಆಗುತ್ತಿದೆ. ಇವೆಲ್ಲ ಸರಿಯಾಗಬೇಕೆಂದರೆ ಬದುಕು ರೂಪಿಸಿಕೊಡುವ ಕೃಷಿಭೂಮಿ ಹಡೀಲು ಬೀಳುವುದನ್ನು ತಡೆಯಬೇಕಿದೆ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಆಶಿಸಿದರು.
ಉಡುಪಿ ಜಿಲ್ಲಾ ಕೃಷಿಕ ಸಂಘದ ಪೆರಂಪಳ್ಳಿಯಲ್ಲಿ ವಲಯ ಸಮಿತಿ ಆಯೋಜಿಸಿದ್ದ 'ಆಟಿದ ಕಮ್ಮೆನ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪೆರಂಪಳ್ಳಿ ಫಾತಿಮಾ ಮಾತೆ ದೇವಾಲಯದ ಧರ್ಮಗುರು ರೆ.ಫಾ. ವಿಶಾಲ್​ ಲೋಬೋ ಶುಭಾಶಂಸನೆಗೈದರು. ವಲಯ ಸಮಿತಿ ಅಧ್ಯಕ್ಷ ರವೀಂದ್ರ ಪೂಜಾರಿ ಶೀಂಬ್ರ ಅಧ್ಯಕ್ಷತೆ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಕವಯಿತ್ರಿ ಮಾಲತಿ ರಮೇಶ್​ ಕೆಮ್ಮಣ್ಣು, ಸಿರಿ ತುಳುವ ಚಾವಡಿಯ ಗುರಿಕಾರ ಈಶ್ವರ್​ ಚಿಟ್ಪಾಡಿ, ಜಿಲ್ಲಾ ಕೃಷಿಕ ಸಂಘದ ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್​ ಮಲ್ಲಂಪಳ್ಳಿ, ಪೆರಂಪಳ್ಳಿ ವಲಯ ಗೌರವಾಧ್ಯಕ್ಷ ಅಂತಪ್ಪ ಪೂಜಾರಿ, ಹರಿಕೃಷ್ಣ ಶಿವತ್ತಾಯ, ಉಮೇಶ್​ ಬಂಗೇರ ಉಪಸ್ಥಿತರಿದ್ದರು.
ಜೂಲಿಯನ್​ ದಾಂತಿ, ಫೆಡ್ರಿಕ್​ ಡಿಸೋಜಾ, ರಾಘವೇಂದ್ರ ಭಟ್​, ಶಂಕರ್​ ಕೋಟ್ಯಾನ್​, ರವೀಂದ್ರ ಗುಜ್ಜರಬೆಟ್ಟು ಇನ್ನಿತರರು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ಮತ್ತು ವಲಯದ ಗ್ರಾಮಸ್ಥರಿಗೆ ಜಾನಪದ ಗೀತೆ ಸ್ಪರ್ಧೆ ಆಯೋಜಿಸಲಾಗಿತ್ತು.
ಕೃಷಿಯಲ್ಲಿ ಯಾಂತ್ರೀಕರಣ ಬಳಸಿ ಯಶಸ್ವೀ ಕೃಷಿ ಉದ್ಯಮಿಯಾದ ಚಂದ್ರಶೇಖರ್​ ನಾಯ್ಕ್​ ಕರಂಬಳ್ಳಿ ಅವರನ್ನು ಸನ್ಮಾನಿಸಲಾಯಿತು. ಊರ ಜನರು, ಕೃಷಿಕರು ತಯಾರಿಸಿ ತಂದಿದ್ದ 40 ಬಗೆಯ ಆಟಿಯ ತಿಂಡಿ-ತಿನಿಸುಗಳನ್ನು ವಿತರಿಸಲಾಯಿತು.

ಶ್ರೀಯಾನ್​ ಕಾರ್ಯಕ್ರಮ ನಿರೂಪಿಸಿದರು. ವಲಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್​ ಶೀಂಬ್ರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net