ನಗುವಿನಿಂದ ಆತ್ಮವಿಶ್ವಾಸ ಹೆಚ್ಚಳ

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ಕ್ಯಾನ್ಸರ್​ ವಿಭಾಗದಲ್ಲಿ ಚಿಕಿತ್ಸೆಯಲ್ಲಿರುವ ಮಕ್ಕಳಿಗಾಗಿ ಸಂತೋಷ ಕೂಟ ಆಯೋಜಿಸಲಾಗಿತ್ತು. ಡಾ. ವಾಸುದೇವ್​ ಭಟ್​, ಡಾ. ಅನಿಲ್​ ಕೆ. ಭಟ್​, ಶರಣ್​ ಚಿಲಿಂಬಿ, ರಕ್ಷಿತಾ ಶೆಟ್ಟಿ, ಡಾ. ಸುಧಾಕರ್​ ಕಂಟಿಪುಡಿ, ಡಾ. ಅವಿನಾಶ್​ ಶೆಟ್ಟಿ, ಎ.ಬಿ. ಬಾಸ್ಕೋ, ಡಾ. ಸ್ವಾತಿ ಹಾಗೂ ಆಸ್ಪತ್ರೆಯ ಇನ್ನಿತರ ವೈದ್ಯರು, ಸಿಬ್ಬಂದಿ ಇದ್ದರು.
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ಕ್ಯಾನ್ಸರ್​ ವಿಭಾಗದಲ್ಲಿ ಚಿಕಿತ್ಸೆಯಲ್ಲಿರುವ ಮಕ್ಕಳಿಗಾಗಿ ಸಂತೋಷ ಕೂಟ ಆಯೋಜಿಸಲಾಗಿತ್ತು. ಡಾ. ವಾಸುದೇವ್​ ಭಟ್​, ಡಾ. ಅನಿಲ್​ ಕೆ. ಭಟ್​, ಶರಣ್​ ಚಿಲಿಂಬಿ, ರಕ್ಷಿತಾ ಶೆಟ್ಟಿ, ಡಾ. ಸುಧಾಕರ್​ ಕಂಟಿಪುಡಿ, ಡಾ. ಅವಿನಾಶ್​ ಶೆಟ್ಟಿ, ಎ.ಬಿ. ಬಾಸ್ಕೋ, ಡಾ. ಸ್ವಾತಿ ಹಾಗೂ ಆಸ್ಪತ್ರೆಯ ಇನ್ನಿತರ ವೈದ್ಯರು, ಸಿಬ್ಬಂದಿ ಇದ್ದರು.
Published on

* ಕ್ಯಾನ್ಸರ್​ ತಜ್ಞ ಡಾ. ವಾಸುದೇವ್​ ಭಟ್​ ಅಭಿಪ್ರಾಯ

* ಕೆಎಂಸಿಯಲ್ಲಿ ಕ್ಯಾನ್ಸರ್​ ಪೀಡಿತ ಮಕ್ಕಳ ಸಂತೋಷ ಕೂಟ

ಉಡುಪಿ: ಮಾರಣಾಂತಿಕ ಹಾಗೂ ಗಂಭೀರ ಕ್ಯಾನ್ಸರ್​ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳ ಮೊಗದಲ್ಲಿ ನಗು ಮೂಡಿಸಿದರೆ ಅವರಲ್ಲಿ ಇನ್ನಷ್ಟು ಆತ್ಮವಿಶ್ವಾಸ ಹೆಚ್ಚುತ್ತದೆ. ಆ ನಿಟ್ಟಿನಲ್ಲಿ ಮೇಕ್​ ಎ ವಿಶ್​ ಫೌಂಡೇಷನ್​, ಅಂತಾರಾಷ್ಟ್ರೀಯ ಜಾಲದ ಮೂಲಕ 50ಕ್ಕೂ ಹೆಚ್ಚು ದೇಶಗಳಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 75 ಮಕ್ಕಳಿಗೆ ಅವರ ಆಯ್ಕೆಯ ವಸ್ತುಗಳನ್ನು ಉಡುಗೊರೆಯಾಗಿ ನೀಡಿ ಅವರಲ್ಲಿ ಸಂತಸ ಮೂಡಿಸಲಾಯಿತು ಎಂದು ಮಕ್ಕಳ ಆಂಕೊಲಾಜಿ ವಿಭಾಗದ ಮುಖ್ಯಸ್ಥ ಡಾ. ವಾಸುದೇವ್​ ಭಟ್​ ಹೇಳಿದರು.
ಮಣಿಪಾಲದ ಕಸ್ತೂರ್ಬಾ ವೈದ್ಯಕಿಯ ಕಾಲೇಜು ಮತ್ತು ಆಸ್ಪತ್ರೆಯ ಮಕ್ಕಳ ಆಂಕೊಲಾಜಿ ವಿಭಾಗದಲ್ಲಿ ಮೇಕ್​ ಎ ವಿಶ್​ ಫೌಂಡೇಷನ್​ ಇಂಡಿಯಾದ ಬೆಂಗಳೂರು ವಿಭಾಗ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಕ್ಯಾನ್ಸರ್​ ಪೀಡಿತ ಮಕ್ಕಳಿಗಾಗಿ ಸಂತೋಷ ಕೂಟದಲ್ಲಿ ಮಾತನಾಡಿದರು.
ವಿಶೇಷ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಂಗಳೂರಿನ ದಿ ಪವರ್​ಹೌಸ್​ನ ಡೆಜಿಟಲ್​ ಕ್ರಿಯೇಟರ್​ ಶರಣ್​ ಚಿಲಿಂಬಿ ಮತ್ತು ಕನ್ನಡ ಬಿಗ್​ ಬಾಸ್​  ಸೀಸನ್​ -12ರ ರನ್ನರ್​ಅಪ್​ ರಕ್ಷಿತಾ ಶೆಟ್ಟಿ ಮಾತನಾಡಿದರು. ಕ್ಯಾನ್ಸರ್​ ಪೀಡಿತ ಕ್ಕಳಿಗೆ 10 ಲಕ್ಷ ರೂಪಾಯಿಗೂ ಅಧಿಕ ಮೊತ್ತ ವಿವಿಧ ಉಡುಗೊರೆ ನೀಡಲಾಯಿತು.
ಕೆಎಂಸಿ ಮಣಿಪಾಲದ ಡೀನ್​ ಡಾ. ಅನಿಲ್​ ಕೆ. ಭಟ್​, ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಸಿಒಒ ಡಾ. ಸುಧಾಕರ್​ ಕಂಟಿಪುಡಿ, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್​ ಶೆಟ್ಟಿ, ಮೇಕ್​ ಎ ವಿಶ್​ ಫೌಂಡೇಷನ್​ನ ಪ್ರತಿನಿಧಿ ಎ.ಬಿ. ಬಾಸ್ಕೋ ಉಪಸ್ಥಿತರಿದ್ದರು.  ಡಾ. ಸ್ವಾತಿ ಕಾರ್ಯಕ್ರಮ ನಿರ್ವಹಿಸಿದರು.
"

ಇದೊಂದು ಹೃದಯಸ್ಪರ್ಶಿ ಕಾರ್ಯಕ್ರಮ. ಪುಟ್ಟ ಮಕ್ಕಳು ಮಾರಕ ಕ್ಯಾನ್ಸರ್​ಗೆ ತುತ್ತಾಗಿದ್ದು, ಚಿಕಿತ್ಸೆಯಲ್ಲಿರುವ ಅವರ ಮೊಗದಲ್ಲಿ ನಗು ಮೂಡಿಸಿದರೆ ಸಕಾರಾತ್ಮಕ ಭಾವ ಮೂಡುತ್ತದೆ. ಅದೇನೋ ಗೊತ್ತಿಲ್ಲದ ಭರವಸೆ ಅವರಲ್ಲಿ ಚಿಗುರುತ್ತದೆ. ಇದು ಕಾಯಿಲೆಯಿಂದ ಬೇಗ ವಾಸಿಯಾಗಲು, ಕಾಯಿಲೆ ವಿರುದ್ಧ ಹೋರಾಡಲು ಅವರಲ್ಲಿ ಶಾಶ್ವತವಾದ ಪ್ರಭಾವ ಬೀರಲಿದೆ. ಅವರ ಜೀವನದಲ್ಲಿ ವಿಶೇಷ ಬದಲಾವಣೆ ತರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net