ಆರೋಗ್ಯಕರ ಪರಿಸರ ಜಾಗೃತಿ ಅಗತ್ಯ

ಉಡುಪಿಯ ಮಲ್ಪೆಯಲ್ಲಿ ತೆಂಕನಿಡಿಯೂರಿನ ಸರ್ಕಾರಿ ಕಾಲೇಜಿನ ರೋವರ್​ ರೇಂಜರ್ಸ್ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯ ಕೈಗೊಂಡರು. ಸುಷ್ಮಾ ಟಿ., ಮರ್ವಿನ್​ ಡಿಸೋಜ ಇದ್ದರು.
ಉಡುಪಿಯ ಮಲ್ಪೆಯಲ್ಲಿ ತೆಂಕನಿಡಿಯೂರಿನ ಸರ್ಕಾರಿ ಕಾಲೇಜಿನ ರೋವರ್​ ರೇಂಜರ್ಸ್ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯ ಕೈಗೊಂಡರು. ಸುಷ್ಮಾ ಟಿ., ಮರ್ವಿನ್​ ಡಿಸೋಜ ಇದ್ದರು.
Published on

* ರೇಂಜರ್ಸ್​ ಲೀಡರ್​ ಸುಷ್ಮಾ ಟಿ. ಆಶಯ

ಉಡುಪಿ: ಬೀಚ್​ ಸ್ವಚ್ಛತೆ ಕೇವಲ ಒಂದು ದಿನದ ಕಾರ್ಯಕ್ರಮ ಆಗಿರಬಾರದು. 'ಸ್ವಚ್ಛ ಕಡಲತೀರ-ಆರೋಗ್ಯಕರ ಪರಿಸರ' ಎಂಬ ಮನೋಭಾವ ಪ್ರತಿಯೊಬ್ಬರಿಗೂ ಇರಬೇಕು. ಪರಿಸರದ ಶುಭ್ರತೆಗಾಗಿ ಪ್ಲಾಸ್ಟಿಕ್​ ಬಳಕೆ ಕಡಿಮೆ ಮಾಡಬೇಕು. ಎಲ್ಲೆಂದರಲ್ಲಿ ಕಸ ಎಸೆಯದೆ ಸೂಕ್ತವಾಗಿ ವಿಲೇವಾರಿ ಮಾಡಬೇಕು. ಇತರರಿಗೂ ಸಹ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಬೇಕು ಎಂದು ತೆಂಕನಿಡಿಯೂರು ಕಾಲೇಜಿನ ರೇಂಜರ್ಸ್​ ಲೀಡರ್​ ಸುಷ್ಮಾ ಟಿ. ಸಲಹೆ ನೀಡಿದರು.
ಉಡುಪಿ ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೋವರ್​ ರೇಂಜರ್ಸ್​ ವಿದ್ಯಾರ್ಥಿಗಳು ಲೈಫ್​ ಗಾರ್ಡ್​ ಹಾಗೂ ಹೋಮ್​ ಗಾರ್ಡ್​ ಸಹಕಾರದಲ್ಲಿ ಮಲ್ಪೆ ಬೀಚ್​ನಲ್ಲಿ ಆಯೋಜಿಸಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿಪುಣ್​ ಮತ್ತು ರಾಜ್ಯ ಪುರಸ್ಕಾರ ಪರೀಕ್ಷೆ ಬರೆಯುವ ರೋವರ್​, ರೇಂಜರ್ಸ್​ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ರೋವರ್ಸ್​ ಲೀಡರ್​ ಮರ್ವಿನ್​ ಡಿಸೋಜ ಕಾರ್ಯಕ್ರಮ ಆಯೋಜಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net