ಹೋಮಿಯೋಪಥಿ ವೈದ್ಯರಿಗಿದೆ ಭವಿಷ್ಯ : ಸತೀಶ್ ಕುಂಪಲ ಅಭಿಪ್ರಾಯ

New Project (2)
Published on

ಉಳ್ಳಾಲ: ಮುಂದಿನ ಪೀಳಿಗೆಯ ಆರೋಗ್ಯ ಕಾಪಾಡುವ ಜವಾಬ್ದಾರಿ ಯುವ ವೈದ್ಯರ ಮೇಲಿದೆ. ಅಲೋಪಥಿ, ಆಯುರ್ವೇದ ಮಾತ್ರವಲ್ಲದೆ ಹೋಮಿಯೋಪಥಿ ವೈದ್ಯರಿಗೂ ಭವಿಷ್ಯ ಇದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅಭಿಪ್ರಾಯಪಟ್ಟರು.

ಕುಂಪಲ ಹೋಮಿಯೋ ಎಂಪೋರಿಯಂ ವತಿಯಿಂದ ಮುಖಂಡ ಸಿರಾಜ್ ಮುಡಿಪು ನೇತೃತ್ವದಲ್ಲಿ ಭಾನುವಾರ ದೇರಳಕಟ್ಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುವ ವೈದ್ಯರನ್ನು ಸನ್ಮಾನಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಭಾರತೀಯ ವೈದ್ಯ ಪದ್ಧತಿ ಆಯುರ್ವೇದದತ್ತ ಆಸಕ್ತರಾಗಿದ್ದಾರೆ. ಅಲ್ಲದೆ ಯಾವುದೇ ಅಡ್ಡ ಪರಿಣಾಮ ಇಲ್ಲದ ಹೋಮಿಯೋಪಥಿ ವೈದ್ಯಕೀಯ ಪದ್ಧತಿ ಅತ್ಯಂತ ಶೀಘ್ರವಾಗಿ ಬೆಳೆಯುತ್ತಿದೆ ಎಂದರು.

ಯೇನೆಪೊಯ ಹೋಮಿಯೋಪಥಿ ಕಾಲೇಜಿನ ಪ್ರಥಮ ಬ್ಯಾಚ್ ಯುವ ವೈದ್ಯರಾದ ಡಾ.ರಝಿಯಾ, ಡಾ.ಇಬ್ರಾಹಿಂ ಸಂಶೀರ್, ಡಾ.ವಸ್ೀ ಚೌದ್ರಿ, ಡಾ.ಚಾರು ನಯನ, ಡಾ.ಎಸ್.ಎಚ್.ಭೂಮಿಕಾ, ಡಾ.ಸಿನಲ್ಡಾ ಕರ್ಡುಸೋ, ಡಾ.ಯಶ್ವಿತಾ ಎ.ಕೆಂಬಾರ್, ಡಾ.ನೇಹಾ, ಡಾ.ರಿನ್ಶಾ ರಫೀಕ್, ಡಾ.ಆಯಿಶಾ ರ‌್ತಿಾ ಅವರನ್ನು ಸನ್ಮಾನಿಸಲಾಯಿತು.

ಹೃದ್ರೋಗ ತಜ್ಞ ಡಾ.ಮುಕುಂದ್, ಕೋಟೆಕಾರ್ ಪಪಂ ಮಾಜಿ ಉಪಾಧ್ಯಕ್ಷ ಅನಿಲ್ ಬಗಂಬಿಲ, ಮಂಗಳೂರು ತಾಪಂ ಮಾಜಿ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಕೊಳಂಗೆರೆ, ಕುತ್ತಾರ್ ಹಿಂದು ಮುಕ್ತಿ ಧಾಮ ಸಮಿತಿ ಟ್ರಸ್ಟಿ ಪ್ರದೀಪ್ ಶೆಟ್ಟಿ ಕುತ್ತಾರ್ ಬರಿಕೆ, ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ್ ಆಳ್ವ, ಪ್ರಧಾನ ಕಾರ್ಯದರ್ಶಿ ದಯಾನಂದ, ಹೇಮಂತ್ ಶೆಟ್ಟಿ, ವಕೀಲ ಅಸ್ಗರ್ ಸಾಂಬಾರತೋಟ, ನವೀನ್, ಸಿರಾಜ್, ಗಣೇಶ್ ಉಪಸ್ಥಿತರಿದ್ದರು.

ಮಂಗಳೂರು ಹೋಮಿಯೋಪಥಿ ಔಷಧೀಯ ಸಂಸ್ಥೆ ಆಡಳಿತ ನಿರ್ದೇಶಕ ಪ್ರಹ್ಲಾದ್ ಕುಮಾರ್ ಇಂದಾಜೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net