

ಬೆಂಗಳೂರು : ಪ್ರಸಿದ್ಧ ಅನುವಾದಕ ಪ್ರೊ.ಪಿ.ಆರ್.ಮುತಾಲಿಕ್ ಅವರು ಸೋಮವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧರಾಗಿದ್ದಾರೆ. 68 ವರ್ಷ ವಯಸ್ಸಾಗಿದ್ದ ಮುತಾಲಿಕ ಪತ್ನಿ, ಪುತ್ರ ಹಾಗೂ ಬಂಧುಗಳನ್ನು ಅಗಲಿದ್ದಾರೆ.
ಡಾ.ಶಿವರಾಮ ಕಾರಂತರ ಅಭಿಮಾನಿಯಾಗಿದ್ದ ಮುತಾಲಿಕ ಉತ್ತಮ ಅನುವಾದಕರಾಗಿದ್ದರು. ನ್ಯಾಷನಲ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ಅವರ ಹಲವು ಅನುವಾದಿತ ಕೃತಿಗಳು ಪ್ರಕಟಗೊಂಡಿವೆ. ಕಾರಂತರ ‘ಅಳಿದ ಮೇಲೆ’ ಕಾದಂಬರಿಯ ಇಂಗ್ಲೀಷ್ ಅನುವಾದ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ಲಭಿಸಿತ್ತು. ತರಾಸು, ಎಚ್.ನರಸಿಂಹಯ್ಯನವರ ಕೃತಿಗಳನ್ನು ಅನುವಾದಿಸಿದ್ದರು. ಬೆಳಗಾವಿ ಜಿಲ್ಲೆಯ ಹುಕ್ಕೇರಿಯವರಾದ ಮುತಾಲಿಕ್ ಅವರ ಅಂತ್ಯಕ್ರಿಯೆಯು ಮಂಗಳವಾರ ನಡೆಯಿತು.