ತಿರುವೈಲು ಶಾಲೆಗೆ ಶಾಸಕರ ನಿಧಿಯಿಂದ 5 ಲಕ್ಷ ರೂ.

Gur_Thiruvailu School
Published on

ಗುರುಪುರ: ತಿರುವೈಲು ಸರ್ಕಾರಿ ಶಾಲೆಯಲ್ಲಿ ಏಪ್ರಿಲ್ 5 ಮತ್ತು 6ರಂದು ಶತವಾನೋತ್ಸವ ಸವಾರಂಭ ನಡೆಯಲಿದೆ. ಈ ವರ್ಷ ತಿರುವೈಲು ಶಾಲೆಯ ಸಹಿತ ಮಂಗಳೂರು ಉತ್ತರ ಕ್ಷೇತ್ರ ವ್ಯಾಪ್ತಿಯ ಒಟ್ಟು 3 ಸರ್ಕಾರಿ ಶಾಲೆಗಳು ಶತವಾನೋತ್ಸವ ಆಚರಿಸುತ್ತಿವೆ. ಶತವಾನೋತ್ಸವ ಸವಾರಂಭ ಯಶಸ್ಸಿಗೆ ಪ್ರತಿಯೊಬ್ಬರೂ ಒಗ್ಗೂಡಿ ಕೆಲಸ ವಾಡಬೇಕು. ಸಂಪನ್ಮೂಲ ಕ್ರೋಡೀಕರಣ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಶಾಸಕರ ನಿಧಿಯಿಂದ 5 ಲಕ್ಷ ರೂ. ಒದಗಿಸಲಾಗುವುದು. ಉಳಿದಂತೆ ಸರ್ಕಾರದ ನೆರವಿಗೆ ಪ್ರಯತ್ನಿಸುವೆ ಎಂದು ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.

ವಾಮಂಜೂರು ತಿರುವೈಲಿನ ಸರ್ಕಾರಿ ವಾದರಿ ಕನ್ನಡ ಮತ್ತು ಆಂಗ್ಲ ವಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಶತವಾನೋತ್ಸವ ಹಿನ್ನೆಲೆಯಲ್ಲಿ ಮಂಗಳವಾರ ನಡೆದ ವಿವಿಧ ಸಮಿತಿಗಳ ರಚನೆ ಕುರಿತು ವಿಶೇಷ ಸವಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಲವು ಸಮಿತಿಗಳ ಪ್ರಮುಖರು ಸಲಹೆ ನೀಡಿದರು. ಕೆಲವು ಸಂ ಸಂಸ್ಥೆಗಳ ಪ್ರಮುಖರು ಹಾಗೂ ಉದ್ಯಮಿಗಳು ಶಾಲೆಗೆ ನೆರವಿನ ಚೆಕ್ ಹಸ್ತಾಂತರಿಸಿದರು.

ತಿರುವೈಲು ಕಾರ್ಪೊರೇಟರ್ ಹೇಮಲತಾ ಆರ್.ಸಾಲ್ಯಾನ್, ಶತವಾನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಜಯಪ್ರಕಾಶ್, ಕೋಶಾಧಿಕಾರಿ ಮೋಹನದಾಸ್ ಬಂಗೇರ, ಗೌರವಾಧ್ಯಕ್ಷ ಪಿ.ವೇಲುಸ್ವಾಮಿ, ಎಸ್‌ಡಿಎಂಸಿ ಅಧ್ಯಕ್ಷ ರಾಕೇಶ್ ಶೆಟ್ಟಿ, ರಾಜೀವ ಸಲ್ಲಾಜೆ, ವಿದ್ಯಾಬೋಧಿನಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ರು ಸಾಲ್ಯಾನ್, ಹಳೆ ವಿದ್ಯಾರ್ಥಿ ಸಂದ ಕೋಶಾಧಿಕಾರಿ ರಿಯಾಝ್ ಅಹಮ್ಮದ್ ವಾಮಂಜೂರು, ಉಮೇಶ್ ರೈ ಮೇಗಿನಮನೆ, ನಾಗರಾಜ ಪಂಡಿತ್, ಅನಿಲ್ ರೈ ವಾಮಂಜೂರು, ಪುರುಷೋತ್ತಮ ಇಂಜಿನಿಯರ್, ದಿನೇಶ್ ಕರ್ಕೇರ, ರಾಜೀವ ಪೂಜಾರಿ ಕೊಳಕೆಬೈಲು, ದಿವಾಕರ ಆಚಾರ್ಯ, ಸ್ಟಾೃನಿ ಕುಟಿನ್ಹೊ, ಜಯರಾಮ ಶೆಟ್ಟಿ ವಾಮಂಜೂರು, ಜನಾರ್ದನ ಸುವರ್ಣ, ಗಣೇಶ್ ಭಟ್, ಬಾಲಕೃಷ್ಣ ಭಂಡಾರಿ, ಗಿರೀಶ್ ಆಚಾರ್ಯ ಮೊದಲಾದವರಿದ್ದರು.

ದೈಹಿಕ ಶಿಕ್ಷಣ ಶಿಕ್ಷಕ ಗೋಪಾಲ ಯು. ಸ್ವಾಗತಿಸಿದರು. ಶತವಾನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಓಂಪ್ರಕಾಶ್ ಶೆಟ್ಟಿ ಪ್ರಸ್ತಾವಿಸಿದರು. ಪ್ರಭಾರ ಮುಖ್ಯ ಶಿಕ್ಷಕಿ ಪುಷ್ಪಾವತಿ ವರದಿ ವಾಚಿಸಿದರು. ಶತವಾನೋತ್ಸವ ಸಮಿತಿ ಅಧ್ಯಕ್ಷ ಪ್ರತೋಷ್ ಮಲ್ಲಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net