

ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನ ಬೆಳ್ತಂಗಡಿ ತಾಲೂಕಿನ, ಉಜಿರೆ ವಲಯದ, ಮಾಯಾ ಕಾರ್ಯಕ್ಷೇತ್ರದ ನಾಗಕಲ್ಲು ದುಗ್ಗಪ್ಪ ಗೌಡ ಅವರಿಗೆ ಕಮೋಡ್ ವೀಲ್‌ಚೇರ್ ಹಸ್ತಾಂತರಿಸಲಾಯಿತು. ದುಗ್ಗಪ್ಪ ಗೌಡ ಅವರಿಗೆ ನಡೆದಾಡಲು ಕಷ್ಟಸಾಧ್ಯವಾಗಿದ್ದು, ಸಮುದಾಯ ಅಭಿವೃದ್ಧಿ ವಿಭಾಗದ ಜನಮಂಗಳ ಕಾರ್ಯಕ್ರಮದಡಿಯಲ್ಲಿ ಕಮೋಡ್ ವೀಲ್‌ಚೇರ್‌ಗೆ ಮಾಡಿದ್ದರು. ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಅದನ್ನು ಮಂಜೂರು ಮಾಡಿದ್ದಾರೆ.
ಮಾಯಾ ಒಕ್ಕೂಟದ ಮಾಜಿ ಅಧ್ಯಕ್ಷ ಶಿವಪ್ಪ ಗೌಡ, ವಲಯ ಮೇಲ್ವಿಚಾರಕಿ ವನಿತಾ, ಬೆಳಾಲು ಒಕ್ಕೂಟದ ಅಧ್ಯಕ್ಷ ರತ್ನಾಕರ ಆಚಾರ್ಯ ಕಮೋಡ್ ಚೇರ್ ವಿತರಿಸಿದರು. ಮಾಯಾ ಒಕ್ಕೂಟದ ಪದಾಧಿಕಾರಿಗಳಾದ ಸಂಜೀವ ಗೌಡ, ರಾಮಚಂದ್ರ, ಭಾರತಿ, ಸೇವಾಪ್ರತಿನಿಧಿ ಪ್ರಭಾ, ಸೇವಾಪ್ರತಿನಿಧಿ ತಾರಾನಾಥ, ಒಕ್ಕೂಟದ ಪದಾಧಿಕಾರಿಗಳು ಮತ್ತು ಮನೆಯವರು ಉಪಸ್ಥಿರಿದ್ದರು.