ಶಿವಮೊಗ್ಗ ದಸರಾ ವೇಳೆ ದಿಕ್ಕಾಪಾಲಾಗಿ ಓಡಿದ ಸೋಮಣ್ಣ ಆನೆ: ಚಾಮುಂಡಿ ವಿಗ್ರಹಕ್ಕೆ ಹಾನಿ, ಜಂಬೂ ಸವಾರಿ ಅರ್ಧಕ್ಕೆ ಮೊಟಕು! Shivamogga Dasara

ಶಿವಮೊಗ್ಗ ದಸರಾ ಮಹೋತ್ಸವದ ಅಂತಿಮ ದಿನದ ಸಂಭ್ರಮದ ಜಂಬೂಸವಾರಿ ವೇಳೆ ಈ ಅನಿರೀಕ್ಷಿತ ಅಘಾತ ಸಂಭವಿಸಿದೆ. ಅಂಬಾರಿಯ ಮೆರವಣಿಗೆಯಲ್ಲಿ ಇದ್ದಕ್ಕಿದ್ದಂತೆ ಪಟಾಕಿ ಸಿಡಿಸಿದ ಶಬ್ದ ಕೇಳಿ 'ಸೋಮಣ್ಣ' ಎಂಬ ಆನೆ ಬೆಚ್ಚಿಬಿದ್ದಿದೆ.
Shivamogga Dasara
ಶಿವಮೊಗ್ಗ ದಸರಾ ವೇಳೆ ದಿಕ್ಕಾಪಾಲಾಗಿ ಓಡಿದ ಸೋಮಣ್ಣ ಆನೆ
Published on: 

ಶಿವಮೊಗ್ಗ: ಶಿವಮೊಗ್ಗ ದಸರಾ ಮಹೋತ್ಸವದ ಜಂಬೂಸವಾರಿ ( Shivamogga Dasara ) ವೇಳೆ ಆತಂಕಕಾರಿ ಘಟನೆಯೊಂದು ಸಂಭವಿಸಿದೆ. ಪಟಾಕಿಯ ಶಬ್ದಕ್ಕೆ ಬೆದರಿದ ಆನೆಯೊಂದು ದಿಕ್ಕಾಪಾಲಾಗಿ ಓಡಿದ ಪರಿಣಾಮ ಜಂಬೂಸವಾರಿಯು ಅರ್ಧಕ್ಕೆ ಮೊಟಕುಗೊಂಡಿದ್ದು, ಸಾರ್ವಜನಿಕರಲ್ಲಿ ಕೆಲಕಾಲ ಭೀತಿಯ ವಾತಾವರಣ ನಿರ್ಮಾಣವಾಯಿತು.

ಶಿವಮೊಗ್ಗ ದಸರಾ ಮಹೋತ್ಸವದ ಅಂತಿಮ ದಿನದ ಸಂಭ್ರಮದ ಜಂಬೂಸವಾರಿ ವೇಳೆ ಈ ಅನಿರೀಕ್ಷಿತ ಘಟನೆ ಸಂಭವಿಸಿದೆ. ಅಂಬಾರಿಯ ಮೆರವಣಿಗೆಯಲ್ಲಿ ಇದ್ದಕ್ಕಿದ್ದಂತೆ ಪಟಾಕಿ ಸಿಡಿಸಿದ ಶಬ್ದ ಕೇಳಿ 'ಸೋಮಣ್ಣ' ಎಂಬ ಆನೆ ಬೆಚ್ಚಿಬಿದ್ದಿದೆ. ಗಾಬರಿಗೊಂಡ ಆನೆಯು ದಿಕ್ಕಾಪಾಲಾಗಿ ಹಿಮ್ಮುಖವಾಗಿ ಓಡಲು ಶುರುಮಾಡಿದಾಗ, ಅದರ ಮೇಲೆ ಬೆಳ್ಳಿ ಅಂಬಾರಿಯಲ್ಲಿದ್ದ ತಾಯಿ ಚಾಮುಂಡೇಶ್ವರಿಯ ವಿಗ್ರಹ ಕೆಳಕ್ಕೆ ಬಿದ್ದಿದೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ ಎಚ್ಚೆತ್ತುಕೊಂಡ ಆಡಳಿತ ಮಂಡಳಿಯು ತಕ್ಷಣವೇ ದಸರಾ ಮೆರವಣಿಗೆಯನ್ನು ಅರ್ಧಕ್ಕೆ ನಿಲ್ಲಿಸಿದೆ.

Also Read
ಓಮನ್ ಕಡಲತೀರದಲ್ಲಿ ಪ್ರತ್ಯಕ್ಷವಾಯ್ತು ಅಪರೂಪದ 'ಪಿಂಕ್​ ಡಾಲ್ಫಿನ್': ಈ ವಿಸ್ಮಯ ಜೀವಿ ಹಿಂದಿನ ಅಸಲಿ ಸತ್ಯ ಇಲ್ಲಿದೆ! Pink Dolphin
Shivamogga Dasara

ನಿಯಂತ್ರಣ ತಪ್ಪಿ ದಿಕ್ಕಾಪಾಲಾಗಿ ಓಡಾಡುವ ಸಂದರ್ಭದಲ್ಲಿ ಸೋಮಣ್ಣ ಆನೆ ರಸ್ತೆಯಲ್ಲಿದ್ದ ಕಾರೊಂದರ ಮೇಲೆ ದಾಳಿ ನಡೆಸಿ ಜಖಂ ಗೊಳಿಸಿತು. ದಸರಾ ವೀಕ್ಷಿಸಲು ರಸ್ತೆಯ ಎರಡೂ ಬದಿಗಳಲ್ಲಿ ನಿಂತಿದ್ದ ಸಾರ್ವಜನಿಕರು ಆನೆಯ ಅಬ್ಬರ ಕಂಡು ಜೀವಭಯದಿಂದ ದಿಕ್ಕಾಪಾಲಾಗಿ ಓಡಲು ಆರಂಭಿಸಿದರು. ಸ್ಥಳದಲ್ಲಿ ಕೆಲಕಾಲ ನೂಕುನುಗ್ಗಲು ಹಾಗೂ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ವಲ್ಪ ದೂರ ಸಾಗಿ ಬಳಿಕ ಆನೆ ಕೊಂಚ ವಾಪಸ್ ಬಂದರೂ, ಅದನ್ನು ತಕ್ಷಣವೇ ಹದ್ದುಬಸ್ತಿಗೆ ತರಲು ಮಾವುತರು ಹರಸಾಹಸ ಪಡಬೇಕಾಯಿತು.

ಅರವಳಿಕೆ ಮದ್ದು ನೀಡಿ ಆನೆ ನಿಯಂತ್ರಣ

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಅರಣ್ಯಾಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾದರು. ಆನೆಯನ್ನು ಯಾವುದೇ ಪ್ರಾಣಾಪಾಯವಾಗದಂತೆ ಹಾಗೂ ಜನರಿಗೆ ಅಪಾಯ ತಾರದಂತೆ ಸುರಕ್ಷಿತವಾಗಿ ಕಟ್ಟಿಹಾಕಲು ವಿಶೇಷ ಕಾರ್ಯಾಚರಣೆ ನಡೆಸಲಾಯಿತು.

Also Read
ಮೀನಿನಂತೆ ಕಾಣುವ ಡಾಲ್ಫಿನ್​ ಮೀನಲ್ಲ; ಮನುಷ್ಯರೊಂದಿಗೆ ಭಾವನಾತ್ಮಕವಾಗಿ ಕನೆಕ್ಟ್ ಆಗುವ ಇವು ಯಾವ ಪ್ರಭೇದಕ್ಕೆ ಸೇರಿದ್ದು?..Dolphin
Shivamogga Dasara

ಅಂತಿಮವಾಗಿ ಅರಣ್ಯಾಧಿಕಾರಿಗಳು ಆನೆಗೆ ಅರವಳಿಕೆ ಮದ್ದು (Tranquilizer) ನೀಡಿ ಯಶಸ್ವಿಯಾಗಿ ನಿಯಂತ್ರಣಕ್ಕೆ ತಂದರು. ಈ ಘಟನೆಯಿಂದ ಶಿವಮೊಗ್ಗ ದಸರಾ ಮೈದಾನದಲ್ಲಿ ಕೆಲವು ಗಂಟೆಗಳ ಕಾಲ ಆತಂಕದ ಛಾಯೆ ಮೂಡಿತ್ತು. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಕೂಡ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net