ಸುಳ್ಯ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ‘ಸಮರವೀರ ಕೆದಂಬಾಡಿ ರಾಮಯ್ಯ ಗೌಡ್ರ ನೆಂಪುನ ಜಂಬರ’ ಕಾರ್ಯಕ್ರಮ ಮಾ.31ರಂದು ಉಬರಡ್ಕ ಮಿತ್ತೂರು ಗ್ರಾಮದ ಅಮೈ ಮಡಿಯಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ನಿವೃತ್ತ ಸೈನಿಕ ಅಡ್ಡಂತಡ್ಕ ದೇರಣ್ಣ ಗೌಡ ಬಿಡುಗಡೆ ಮಾಡಿದರು.
ಮಿತ್ತೂರು ಉಳ್ಳಾಕುಲು ನಾಯರ್ ದೈವಸ್ಥಾನದ ಆಡಳಿತ ಮೊಕೇಸರ ವೆಂಕಟ್ರಮಣ ಗೌಡ ಕೆದಂಬಾಡಿ ಉದ್ಘಾಟಿಸಲಿದ್ದಾರೆ. ಉಪನ್ಯಾಸಕ ಅರವಿಂದ ಚೊಕ್ಕಾಡಿ ಉಪನ್ಯಾಸ ನೀಡುವರು. ಅತಿಥಿಗಳಾಗಿ ಗ್ರಾ.ಪಂ. ಅಧ್ಯಕ್ಷೆ ಪೂರ್ಣಿಮಾ, ಉಪಾಧ್ಯಕ್ಷೆ ಚಿತ್ರಾ ಪಾಲಡ್ಕ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಗೌಡರ ಯುವ ಸೇವಾ ಸಂಘ ಅಧ್ಯಕ್ಷ ಪಿ.ಎಸ್.ಗಂಗಾಧರ, ಪ್ರಮುಖರಾದ ದಾಮೋದರ ಗೌಡ ಮದುವೆಗದ್ದೆ, ಕಿರಣ್ ಬುಡ್ಲೆಗುತ್ತು, ಸುರೇಶ್ ಎಂ.ಎಚ್., ಲೋಕೇಶ್ ಕೋಟ್ಯಾನ್, ವಿದ್ಯಾಧರ ಹರ್ಲಡ್ಕ ಭಾಗವಹಿಸಲಿದ್ದಾರೆ ಎಂದು ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ತಿಳಿಸಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಸದಸ್ಯರಾದ ಡಾ.ಎನ್.ಎ.ಜ್ಞಾನೇಶ್, ಚಂದ್ರಶೇಖರ ಪೇರಾಲು, ಲತಾ ಕುದ್ಪಾಜೆ, ಗೌಡರ ಯುವ ಸೇವಾ ಸಂದ ಅಧ್ಯಕ್ಷ ಪಿ. ಎಸ್.ಗಂಗಾಧರ, ಸುರೇಶ್ ಎಂ.ಎಚ್.ಮತ್ತಿತರರಿದ್ದರು.