

ಹೆಬ್ರಿ: ರಕ್ಷಾಬಂಧನ ಸಹೋದರತೆಯ ಸಂಕೇತ, ತ್ಯಾಗದ , ಶ್ರೀರಕ್ಷೆಯ ಸಂಕೇತವಾಗಿದೆ ಎಂದು ಉಡುಪಿ ಜಿಲ್ಲಾ ಗೋಸೇವಾ ಸಂಯೋಜಕ ಮಂಜು ಶಿವಪುರ ಹೇಳಿದರು.
ಹೆಬ್ರಿ ಪಿ.ಆರ್.ಎನ್ ಅಮೃತಭಾರತಿ ವಿದ್ಯಾಲಯದಲ್ಲಿ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಟ್ರಸ್ಟ್ ಸದಸ್ಯ ಲಕ್ಷ್ಮಣ್ ಭಟ್, ವಿಷ್ಣುಮೂರ್ತಿ ನಾಯಕ್, ವಸತಿ ನಿಲಯ ಸದಸ್ಯ ರಾಮಕೃಷ್ಣ ಆಚಾರ್ಯ, ಪಿಆರ್‌ಒ ವಿಜಯಕುವಾರ್ ಶೆಟ್ಟಿ, ಮುಖ್ಯಸ್ಥೆ ಅಪರ್ಣಾ ಆಚಾರ್, ಗುರುವೃಂದದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅಪೂರ್ವ ಸ್ವಾಗತಿಸಿದರು. ಅಕ್ಷತಾ ವಂದಿಸಿದರು. ಅನಿತಾ ವಾತಾಜಿ ಸಂದೇಶ ವಾಚಿಸಿದರು. ಲಾವಣ್ಯ ಎಚ್.ವಿ. ನಿರೂಪಿಸಿದರು.