ಸೌಲಭ್ಯ ನೀಡುವಲ್ಲಿ ಸರ್ಕಾರದಿಂದ ಅಂಗವಿಕಲರಿಗೆ ತಾರತಮ್ಯ: ಜಿ.ಎನ್ ನಾಗರಾಜ್

IMG_20240830_225300
Published on

ರಾಯಚೂರು: ರಾಜ್ಯದಲ್ಲಿ ಅಂಗವಿಕಲರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸರ್ಕಾರ ಅಂವಿಕಲರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕಿದೆ ಎಂದು ಕರ್ನಾಟಕ ರಾಜ್ಯ ಅಂಗವಿಕಲರು ಹಾಗೂ ಪಾಲಕರ ಒಕ್ಕೂಟದ ರಾಜ್ಯಾಧ್ಯಕ್ಷ ಜಿ.ಎನ್ ನಾಗರಾಜ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಜನಪರ ಎಂದು ಹೇಳಿಕೊಳ್ಳುವ ಸರ್ಕಾರಗಳು ಅಂಗವಿಕಲರಿಗೆ ಕಡಿಮೆ ಮಾಸಿಕ ಜೀವನ ಭತ್ಯೆಯನ್ನು ನೀಡಿ ತಾರತಮ್ಯ ತೋರುತ್ತಾ ಅಂಗವಿಕಲರಿಗೆ ಅನ್ಯಾಯ ಮಾಡುತ್ತಿವೆ ಎಂದರು.

ಕೇಂದ್ರ ಸರ್ಕಾರದಿಂದ ಅಂಗವಿಕಲರಿಗೆ ಕೇವಲ 300 ರೂ. ಮಾಸಿಕ ಜೀವನ ಭತ್ಯೆಯನ್ನು ನೀಡಲಾಗುತ್ತದೆ. ರಾಜ್ಯ ಸರ್ಕಾರದ 500 ರೂ. ಸೇರಿಸಿ ಕೇವಲ 800 ರೂ.ಗಳನ್ನು ನಿಡಲಾಗುತ್ತಿದೆ ಇದರಿಂದ ಜೀವನ ನಡೆಸಲು ಸಾಧ್ಯವಾಗುವುದೇ ಎಂದು ಸರ್ಕಾರಕ್ಕೆ ಪ್ರಶ್ನೆ ಹಾಕಿದರು.

ಕೋವಿಡ್ ಸಂದರ್ಭದಲ್ಲಿ ಎಲ್ಲ ವರ್ಗದ ಜನರಿಗೆ ಸಹಾಯಧನವನ್ನು ನೀಡಲಾಯಿತು ಆದರೆ ಅಂಗವಿಕಲರಿಗೆ ಯಾವುದೇ ಸೌಕರ್ಯವನ್ನು ಸರ್ಕಾರ ನೀಡಲಿಲ್ಲ. 2013ರಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಅಂಗವಿಕಲರಿಗೆ ಮಾಸಿಕ 5 ಸಾವಿರ ಜೀವನ ಭತ್ಯೆ ನೀಡುವುದಾಗಿ ಭರವಸೆ ನೀಡಿ ಇದುವರೆಗೂ ಒಂದು ಪೈಸೆಯನ್ನು ನೀಡಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಅಂಗವಿಕಲರ ಹಕ್ಕುಗಳ ಕಾಯ್ದೆಯಾನುಸಾರ ಖಾಸಗಿ ವಲಯಗಳಲ್ಲಿ ಕೆಲಸ ಮಾಡಲು ಅಂಗವಿಕಲರಿಗೆ ವಿಶೇಷ ಮೀಸಲಾತಿಯಿದ್ದು, ಕೂಡಲೇ ಅಂಗವಿಕಲರಿಗೆ ಎಲ್ಲ ವಲಯಗಳಲ್ಲಿ ಕೆಲಸ ಮಾಡಲು ಮೀಸಲಾತಿಯನ್ನು ನೀಡಬೇಕು ಕೆಲಸ ಸಿಗುವವರೆಗೂ ಹತ್ತು ಸಾವಿರದಂತೆ ಮಾಸಿಕ ಜೀವನ ಭತ್ಯೆ ನೀಡಬೇಕು ಎಂದು ನಾಗರಾಜ್ ಆಗ್ರಹಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಕರಿಯಪ್ಪ ಅಚ್ಚೊಳ್ಳಿ, ಹೊನ್ನಪ್ಪ, ನರಸಿಂಹಲು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net