ಆಸ್ತಿ ತೆರಿಗೆ ಶೇ.3ರಿಂದ 5ರಷ್ಟು ಹೆಚ್ಚಳ: ಪುರಸಭೆ ಸಾಮಾನ್ಯ ಸಭೆಯಲ್ಲಿ ವಿರೋಧ

Mbd_Property tax
Published on

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಆಸ್ತಿ ತೆರಿಗೆಯನ್ನು 2025-26ನೇ ಸಾಲಿನಲ್ಲಿ ಶೇ.3ರಿಂದ 5ರಷ್ಟು ಹೆಚ್ಚಳ ಮಾಡಬೇಕೆಂಬ ಪೌರಾಡಳಿತ ನಿರ್ದೇಶಕರ ಆದೇಶ ಜಾರಿಗೊಳಿಸಲು ಬುಧವಾರ ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ್ ಅಧ್ಯಕ್ಷತೆಯಲ್ಲಿ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒಮ್ಮತದಿಂದ ವಿರೋಧಿಸಿದರು.

ಆಸ್ತಿ ತೆರಿಗೆ ಪರಿಷ್ಕರಣೆ ಪ್ರಸ್ತಾಪವನ್ನು ಕಂದಾಯ ಅಧಿಕಾರಿ ಜ್ಯೋತಿ ಎಚ್. ಸಭೆಯ ಮುಂದಿಟ್ಟಾಗ ತೆರಿಗೆ ಪರಿಷ್ಕರಣೆಗೆ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರಿಂದ ಪರಿಷ್ಕೃತ ತೆರಿಗೆ ಜಾರಿ ನಿರ್ಧಾರ ಮುಂದೂಡಲಾಯಿತು.

ಪುರಸಭೆ ಕಾಮಗಾರಿಗಳನ್ನು ಅನಗತ್ಯವಾಗಿ ವಿಳಂಬ ಮಾಡಿ ನಿರ್ಲಕ್ಷ್ಯ ತೋರುವ ಗುತ್ತಿಗೆದಾರರಿಗೆ ಹೊಸ ಕಾಮಗಾರಿಗಳ ಟೆಂಡರ್ ನೀಡಬಾರದು ಎಂದು ಪುರಂದರ ದೇವಾಡಿಗ ಆಗ್ರಹಿಸಿದರು. ನನ್ನ ವಾರ್ಡ್‌ನಲ್ಲಿ ಈ ರೀತಿ ವಿಳಂಬ ಕಾಮಗಾರಿಯಿಂದ ತೊಂದರೆ ಆಗಿದೆ. ಅದೇ ಗುತ್ತಿಗೆದಾರನಿಗೆ ಇನ್ನೊಂದು ಟೆಂಡರ್‌ಗೆ ಯಾಕೆ ಅವಕಾಶ ಕೊಟ್ಟಿದ್ದೀರಿ. ಕೆಲಸದಲ್ಲಿ ನಿರ್ಲಕ್ಷ್ಯ ವಹಿಸುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸದಸ್ಯರು ಆಗ್ರಹಿಸಿದರು.

ಪ್ರಮುಖರಾದ ನಾಗರಾಜ ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಸ್ವಾತಿ ಶಿವಾನಂದ ಪ್ರಭು, ಮುಖ್ಯಾಧಿಕಾರಿ ಇಂದು ಎಂ. ಉಪಸ್ಥಿತರಿದ್ದರು. ಪುರಸಭೆ ಸದಸ್ಯರಾದ ಪಿ.ಕೆ.ಥೋಮಸ್, ಸುರೇಶ್ ಕೋಟ್ಯಾನ್, ಸುರೇಶ್ ಪ್ರಭು, ಪ್ರಸಾದ್ ಕುಮಾರ್ ಮತ್ತಿತರ ಸದಸ್ಯರು ಪಾಲ್ಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net